Peenya Flyover: ತುಮಕೂರು ರಸ್ತೆಯಲ್ಲಿ ಸಂಚರಿಸುವವರ ಗಮನಕ್ಕೆ; ಪೀಣ್ಯ ಫ್ಲೈಓವರ್ ಮೇಲೆ ವಾಹನಗಳಿಗೆ ಎಂಟ್ರಿ ಯಾವಾಗ?

ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರಮುಖ ರಸ್ತೆಗಳಲ್ಲೊಂದಾದ ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್‌ನ (Peenya Flyover) ಸುರಕ್ಷತೆಯ ಕುರಿತು ಇದ್ದ ಆತಂಕಗಳಿಗೆ ಕೊನೆಗೂ ತೆರೆಬಿದ್ದಿದೆ. ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವ ಈ ಮೇಲ್ಸೇತುವೆ ಇದೀಗ ಎಲ್ಲಾ ರೀತಿಯ ಭಾರಿ ಮತ್ತು ಲಘು ವಾಹನಗಳ ಸಂಚಾರಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ಕುರಿತು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (NHAI) ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಲೋಡ್ ಟೆಸ್ಟಿಂಗ್‌ನಲ್ಲಿ ಪಾಸ್

ಇತ್ತೀಚೆಗಷ್ಟೇ ಮುಂಬೈನ ಖಾಸಗಿ ಕಂಪನಿಯೊಂದು ಈ ಮೇಲ್ಪಾಲದ ಸಾಮರ್ಥ್ಯದ ಕುರಿತು ವಿವಿಧ ಹಂತದ ತಾಂತ್ರಿಕ ಪರೀಕ್ಷೆಗಳನ್ನು ನಡೆಸಿತ್ತು. ಪ್ರಮುಖವಾಗಿ ಮೇ 5ರಿಂದ ಸತತ ನಾಲ್ಕು ದಿನಗಳ ಕಾಲ ತಲಾ 30 ಟನ್ ತೂಕದ 6 ಭಾರಿ ಟ್ರಕ್‌ಗಳನ್ನು ಫ್ಲೈಓವರ್ ಮೇಲೆ ನಿಲ್ಲಿಸಿ ಅತ್ಯಂತ ಕಠಿಣವಾದ 'ಲೋಡ್ ಟೆಸ್ಟಿಂಗ್' (Load Testing) ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಈ ಎಲ್ಲ ಪರೀಕ್ಷೆಗಳಲ್ಲೂ ಫ್ಲೈಓವರ್ ಯಶಸ್ವಿಯಾಗಿ ಪಾಸ್ ಆಗಿದ್ದು, ವಾಹನಗಳ ಭಾರ ತಡೆದುಕೊಳ್ಳುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂಬುದು ಸಾಬೀತಾಗಿದೆ. ಈ ತಾಂತ್ರಿಕ ವರದಿಯನ್ನು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಿದೆ.

Peenya Flyover

2021ರಲ್ಲಿ ಆರಂಭವಾಗಿದ್ದ ಸಮಸ್ಯೆ

ಕಳೆದ 2021ರ ಡಿಸೆಂಬರ್ ಕೊನೆಯ ವಾರದಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾದ ಕಾರಣ, ಎಂಟನೇ ಮೈಲಿ ಜಂಕ್ಷನ್ ಸಮೀಪದ 102 ಮತ್ತು 103 ನೇ ಪಿಲ್ಲರ್‌ಗಳ ನಡುವಿನ ಎರಡು ಕೇಬಲ್‌ಗಳು ಬಾಗಿದ್ದವು. ಇದು ಸಾರ್ವಜನಿಕರ ಸುರಕ್ಷತೆಗೆ ಆತಂಕ ಮೂಡಿಸಿದ್ದರಿಂದ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಮೇಲ್ಸೇತುವೆಯು ಒಂದಲ್ಲಾ ಒಂದು ತಾಂತ್ರಿಕ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿತ್ತು. ಇತ್ತೀಚೆಗೆ ಇಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿತ್ತು.

Bengaluru Second Airport: ದೇವನಹಳ್ಳಿ ಮಾದರಿ: ಬೆಂಗಳೂರು ದಕ್ಷಿಣ ಸೇರಿ ಸಮೀಪದ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ
Bengaluru Second Airport: ದೇವನಹಳ್ಳಿ ಮಾದರಿ: ಬೆಂಗಳೂರು ದಕ್ಷಿಣ ಸೇರಿ ಸಮೀಪದ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ

ವೇಗವಾಗಿ ನಡೆದ ದುರಸ್ತಿ ಕಾರ್ಯ

ಮೇಲ್ಸೇತುವೆಯಲ್ಲಿ ಸಮಸ್ಯೆ ಪತ್ತೆಯಾದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು, ಮುಂಬೈನ ಪ್ರತಿಷ್ಠಿತ ಕಂಪನಿಗೆ ಇದರ ರಿಪೇರಿ ಜವಾಬ್ದಾರಿ ವಹಿಸಿದ್ದರು. ಮೊದಲ ಹಂತದಲ್ಲಿ 120 ಪಿಲ್ಲರ್‌ಗಳ ನಡುವೆ ತಲಾ ಎರಡರಂತೆ ಹೊಸದಾಗಿ 240 ಕೇಬಲ್‌ಗಳನ್ನು ಅಳವಡಿಸಲಾಯಿತು. ನಂತರ ಮತ್ತಷ್ಟು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಪಿಲ್ಲರ್‌ಗೆ ತಲಾ 10 ಕೇಬಲ್‌ಗಳಂತೆ ಒಟ್ಟು 1200 ಅತ್ಯಾಧುನಿಕ ಕೇಬಲ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಫ್ಲೈಓವರ್‌ಗೆ ಮರುಜೀವ ನೀಡಲಾಯಿತು.

ಪ್ರಸ್ತುತ ವರದಿಯ ಪ್ರಕಾರ, ವಾರದ ಎಲ್ಲ ದಿನಗಳಲ್ಲೂ, ದಿನದ 24 ಗಂಟೆಯೂ ಎಲ್ಲ ಮಾದರಿಯ ವಾಹನಗಳ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುವುದು ಮಾತ್ರ ಬಾಕಿ ಉಳಿದಿದೆ. ಎನ್‌ಹೆಚ್‌ಎಐ ಅಧಿಕಾರಿಗಳು ಈ ವರದಿ ಕೈ ಸೇರಿದ ತಕ್ಷಣವೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ತುಮಕೂರು ರಸ್ತೆಯಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ವಾಹನ ಸವಾರರಿಗೆ ಮತ್ತು ಕೈಗಾರಿಕಾ ವಲಯದ ಜನರಿಗೆ ದೊಡ್ಡ ಆನೆಬಲ ನೀಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಬರುವವರಿಗೆ ಹೆಬ್ಬಾಗಿಲಿನಂತಿರುವ ಈ ತುಮಕೂರು ರಸ್ತೆಯ ಫ್ಲೈಓವರ್‌ ಓಪನ್‌ ಆಗಲು ಜನರು ಹಲವು ದಿನಗಳಿಂದ ತುದಿಗಾಲಲ್ಲಿ ನಿಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+