ಮಣ್ಣಿನಡಿ ಹುದುಗಿತ್ತು 2,200 ವರ್ಷಗಳಷ್ಟು ಹಳೆಯ ಇಂಪೀರಿಯಲ್ ರಸ್ತೆ:ಆಧುನಿಕ ಎಂಜಿನಿಯರ್‌ಗಳನ್ನೇ ಬೆರಗುಗೊಳಿಸುವ ವಿನ್ಯಾಸ

ಇಂದು ನಾವು ವಿಜ್ಞಾನ ತಂತ್ರಜ್ಞಾನದ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದೇವೆ. ಹೀಗಾಗಿ ಅತ್ಯಂತ ಮುಂದುವರಿದ ಯುಗದಲ್ಲಿದ್ದೇವೆ ಎನ್ನುತ್ತಾ ಬೀಗುತ್ತಿದ್ದೇವೆ. ಆದರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಸಾವಿರಾರು ವರ್ಷಗಳ ಹಿಂದಿನ ಜನರು ಅನುಸರಿಸುತ್ತಿದ್ದ ಜೀವನ ವಿಜ್ಞಾನ ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಅವರು ಜೀವನಕ್ಕಾಗಿ ಬಳಸುತ್ತಿದ್ದ ಕೌಶಲ್ಯಗಳು ಆಧುನಿಕ ಎಂಜಿನಿಯರ್‌ಗಳನ್ನೇ ಬೆರಗುಗೊಳಿಸುವಂತಿದೆ.

ಉತ್ತರ ಚೀನಾದ ವಿಶಾಲ ಭೂದೃಶ್ಯಗಳ ಅಡಿಯಲ್ಲಿ, ಎರಡು ಸಹಸ್ರಮಾನಗಳಿಗೂ ಹಿಂದಿನ ರಸ್ತೆ ವಿನ್ಯಾಸ ಕಾಣಿಸಿಕೊಂಡಿದೆ. ಇದು ಪ್ರಾಚೀನ ಎಂಜಿನಿಯರಿಂಗ್‌ ಕೌಶಲ್ಯವನ್ನು ಪರಿಚಯಿಸುತ್ತದೆ. ಈ ರಸ್ತೆಗಳ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಒಮ್ಮೆ ಪ್ರಸ್ತಾಪಿಸಲಾಗಿತ್ತು. ಆದರೆ ಸಾಮ್ರಾಜ್ಯಶಾಹಿ ರಸ್ತೆ ಈಗ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಚೀನ ಚೀನಿಯರು ತಮ್ಮ ವಿಶಾಲ ಪ್ರದೇಶವನ್ನು ಸಂಪರ್ಕಿಸುವ ಮತ್ತು ರಕ್ಷಿಸುವ ಕಲೆಯನ್ನು ಎಷ್ಟರ ಮಟ್ಟಿಗೆ ಹೊಂದಿದ್ದರು ಎನ್ನುವುದನ್ನು ಈ ರಸ್ತೆಗಳು ಸಾರಿ ಹೇಳುತ್ತಿವೆ.

Old Imperial Road

ಗತಕಾಲದಿಂದ ಹೊರಹೊಮ್ಮುವ ಸ್ಮಾರಕ ರಸ್ತೆ:

ಚೀನಾದ ಪುರಾತತ್ವ ಇಲಾಖೆಯವರು, 2,200 ವರ್ಷಗಳ ಹಿಂದೆ ನಿರ್ಮಿಸಲಾದ ಸಾಮ್ರಾಜ್ಯಶಾಹಿ ರಸ್ತೆಯನ್ನು ಪತ್ತೆ ಹಚ್ಚಿದ್ದಾರೆ. ಕಿನ್ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಈ ರಸ್ತೆಯ 13 ಕಿಲೋಮೀಟರ್ ಉದ್ದವನ್ನು ಪತ್ತೆಹಚ್ಚಿದ್ದಾರೆ. ಹೊಸದಾಗಿ ಗುರುತಿಸಲಾದ ಈ ವಿಭಾಗವು ಕಿನ್ ಇಂಪೀರಿಯಲ್ ರಸ್ತೆಯ ಭಾಗವಾಗಿದೆ. ಇದು ಒಂದು ಕಾಲದಲ್ಲಿ ಉತ್ತರ ಚೀನಾದಾದ್ಯಂತ ಸುಮಾರು 900 ಕಿಲೋಮೀಟರ್ ವಿಸ್ತರಿಸಿದ್ದ ಪ್ರಮುಖ ಅಕ್ಷವಾಗಿದೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ, ಶಾಂಕ್ಸಿ ಪ್ರಾಂತ್ಯದ ಯುಲಿನ್ ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ಹೆರಿಟೇಜ್ ಪ್ರೊಟೆಕ್ಷನ್ ಡಿಸೆಂಬರ್ 9 ರಂದು ಈ ಆವಿಷ್ಕಾರವನ್ನು ಘೋಷಿಸಿದೆ.

5,300 ವರ್ಷ ಹಳೆಯ ಮಮ್ಮಿಯ ಅವಶೇಷಗಳಲ್ಲಿ ಜೀವಂತ ಯೀಸ್ಟ್ ಪತ್ತೆ :ಬ್ರೆಡ್‌ ತಯಾರಿಸಲು ಇದರದ್ದೇ ಬಳಕೆ
5,300 ವರ್ಷ ಹಳೆಯ ಮಮ್ಮಿಯ ಅವಶೇಷಗಳಲ್ಲಿ ಜೀವಂತ ಯೀಸ್ಟ್ ಪತ್ತೆ :ಬ್ರೆಡ್‌ ತಯಾರಿಸಲು ಇದರದ್ದೇ ಬಳಕೆ

ಆಧುನಿಕ ಕಲ್ಪನೆಗೆ ಸವಾಲು:

ಈ ಉತ್ಖನನಗಳು ಮೂಲಸೌಕರ್ಯದ ಪ್ರಭಾವಶಾಲಿ ಸಾಧನೆಯನ್ನು ಬಹಿರಂಗಪಡಿಸಿವೆ. ನೇರ ಕಂದಕಗಳು, ದಟ್ಟವಾದ ಮಣ್ಣಿನ ಒಡ್ಡುಗಳು, ಸಂಕುಚಿತ ರಸ್ತೆ ಪದರಗಳು ಮತ್ತು ಕೃತಕವಾಗಿ ತುಂಬಿದ ಕಣಿವೆಗಳು.. ಇವೆಲ್ಲವೂ ಮಾರ್ಗವನ್ನು ಸಂಪೂರ್ಣವಾಗಿ ನೇರವಾಗಿಡಲು ವಿನ್ಯಾಸಗೊಳಿಸಿರುವಂಥದ್ದು. ಸರಾಸರಿ, ರಸ್ತೆಯು ಸುಮಾರು 40 ಮೀಟರ್ ಅಗಲವನ್ನು ಹೊಂದಿದ್ದು, ಕೆಲವು ವಿಭಾಗಗಳಲ್ಲಿ 60 ಮೀಟರ್ ವರೆಗೆ ತಲುಪುತ್ತದೆ. ಅದು ಆಧುನಿಕ ಚತುಷ್ಪಥ ಹೆದ್ದಾರಿಗೆ ಸಮವಾಗಿರುವಷ್ಟು ಅಗಲವಾಗಿದೆ. ಪ್ರಾಚೀನ ಕಾಲದಲ್ಲಿಯೂ ಸಂಚಾರ ದಟ್ಟಣೆಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಕಲ್ಪಿಸಿಕೊಡಲಾಗಿತ್ತು ಎನ್ನುವುದನ್ನು ಈ ರಸ್ತೆಯ ಮೂಲಕ ಕಂಡುಕೊಳ್ಳಬಹುದು.

ಕಾರ್ಯತಂತ್ರದ ಉದ್ದೇಶ ಮತ್ತು ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳು:

ಪ್ರಾಚೀನ ಗ್ರಂಥಗಳ ಪ್ರಕಾರ, ಈ ಮಾರ್ಗವು ಕಿನ್ ಸಾಮ್ರಾಜ್ಯದ ರಾಜಧಾನಿಯಾದ ಕ್ಸಿಯಾನ್ಯಾಂಗ್ ಅನ್ನು ಒಳ ಮಂಗೋಲಿಯಾದ ಆಧುನಿಕ ಬಾಟೌ ಆಗಿರುವ ಜಿಯುವಾನ್‌ಗೆ ಸಂಪರ್ಕಿಸುತ್ತದೆ. ಚೀನಾದ ಉತ್ತರ ಗಡಿಯಲ್ಲಿ ಅಲೆಮಾರಿ ಕುದುರೆ ಸವಾರರು ನಿರಂತರ ಬೆದರಿಕೆಯಾಗಿದ್ದರು. ಅವರು ಕ್ಸಿಯಾಂಗ್ನುವಿನ ಮೇಲೆ ಮಾಡುತ್ತಿದ್ದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಸಾಮ್ರಾಜ್ಯಶಾಹಿ ಸೈನ್ಯವು ದಾಳಿ ಮಾಡಲು ಸಹಾಯವಾಗುವಂತೆ ಈ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಸೈನ್ಯ ಮತ್ತು ಸೈನ್ಯಕ್ಕೆ ಬೇಕಾಗಿರುವ ಸರಬರಾಜುಗಳನ್ನು ತ್ವರಿತವಾಗಿ ನಿಯೋಜಿಸಲು ಈ ರಸ್ತೆಗಳು ಅವಕಾಶ ಮಾಡಿಕೊಡುತ್ತಿತ್ತು.

2,200 ವರ್ಷ ಹಳೆಯ ವಿಶಾಲ ಭೂಗತ ಅರಮನೆ ಪತ್ತೆ:ರಕ್ಷಣೆಗಿದೆ ಕಲ್ಲಿನ ಯೋಧರ ಸೈನ್ಯ!ಒಳನುಗ್ಗುವ ಧೈರ್ಯ ಯಾರಿಗೂ ಇಲ್ಲ
2,200 ವರ್ಷ ಹಳೆಯ ವಿಶಾಲ ಭೂಗತ ಅರಮನೆ ಪತ್ತೆ:ರಕ್ಷಣೆಗಿದೆ ಕಲ್ಲಿನ ಯೋಧರ ಸೈನ್ಯ!ಒಳನುಗ್ಗುವ ಧೈರ್ಯ ಯಾರಿಗೂ ಇಲ್ಲ

ಈ ರಸ್ತೆಯ ನಿರ್ಮಾಣದ ಕೀರ್ತಿ ಚೀನಾದ ಮೊದಲ ಚಕ್ರವರ್ತಿ ಕಿನ್ ಶಿ ಹುವಾಂಗ್‌ಗೆ ಸಲ್ಲುತ್ತದೆ. ಇತಿಹಾಸಕಾರ ಸಿಮಾ ಕಿಯಾನ್ ಪ್ರಕಾರ, ಈ ರಸ್ತೆ ನಿರ್ಮಾಣದ ಕಾರ್ಯ ಕ್ರಿ.ಪೂ 212 ರಲ್ಲಿ ಪ್ರಾರಂಭವಾಗಿದ್ದು, ಕ್ರಿ.ಪೂ 207 ರ ಹೊತ್ತಿಗೆ ಪೂರ್ಣಗೊಂಡಿತು. ಆ ಯುಗಕ್ಕೆ ಇದು ಒಂದು ದೊಡ್ಡ ಸಾಧನೆ. ಇನ್ನು ಈ ರಸ್ತೆಯ ಪಕ್ಕದಲ್ಲಿಯೇ ಕಿನ್ ಮತ್ತು ಹಾನ್ ರಾಜವಂಶಗಳ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಚೀನ ಅಂಚೆ ರಿಲೇ ನಿಲ್ದಾಣವನ್ನು ಕೂಡಾ ಪತ್ತೆ ಹಚ್ಚಲಾಗಿದೆ. ಇದು ರಸ್ತೆಯ ಪ್ರಮುಖ ಲಾಜಿಸ್ಟಿಕಲ್, ಆಡಳಿತ ಮತ್ತು ವಾಣಿಜ್ಯ ಪಾತ್ರವನ್ನು ಖಚಿತಪಡಿಸುತ್ತದೆ.

ಪ್ರಾಚೀನ ಕಾಲದ ಒಂದು ಸೂಪರ್‌ಹೆದ್ದಾರಿ:

"ಮಹಾ ಗೋಡೆಯ ನಂತರ ಪ್ರಾಚೀನ ಚೀನಾದ ಎರಡನೇ ಪ್ರಮುಖ ರಕ್ಷಣಾತ್ಮಕ ಯೋಜನೆ ಎಂದು ಕಿನ್ ಇಂಪೀರಿಯಲ್ ರಸ್ತೆಯನ್ನು ಬಣ್ಣಿಸಲಾಗಿದೆ. ಗೋಡೆಗಿಂತ ಭಿನ್ನವಾಗಿ ಸಾಮ್ರಾಜ್ಯಶಾಹಿ ರಸ್ತೆ ಪ್ರದೇಶವನ್ನು ನಿಯಂತ್ರಿಸಲು ಮತ್ತು ಸಂಪರ್ಕಿಸಲು ಕ್ರಿಯಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸಿತು.

ಉಪಗ್ರಹ ಚಿತ್ರಣ ಮತ್ತು ರಿಮೋಟ್‌ ಸೆನ್ಸಿಂಗ್‌ ಮೂಲಕ ಈ ರಸ್ತೆಯನ್ನು ಗುರತಿಸಲಾಗಿದೆ. 1974 ರಿಂದ ಕೆಲವು ವಿಸ್ತಾರಗಳನ್ನು ಗುರುತಿಸಲಾಗಿದ್ದರೂ, ಇತ್ತೀಚಿನ ಆವಿಷ್ಕಾರವು ಇದಕ್ಕೊಂದು ಅಂತಿಮ ರೂಪ ನೀಡಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+