'ಬ್ಯಾಡ್ ಸಿಎಂ' ಎಂದು ಗೂಗಲ್ ನಲ್ಲಿ ಟೈಪ್ ಮಾಡಿದ್ರೆ ಇವ್ರ ಹೆಸರಾ ಬರೋದು!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಹಲವು ಬಾರಿ ಮುಜುಗರಕ್ಕೀಡಾಗುವ ಸರ್ಚ್ ರಿಸಲ್ಟ್ ಅನ್ನು ನೀಡಿದ ಉದಾಹರಣೆಗಳಿವೆ. ಅದಕ್ಕೆ, ಇನ್ನೊಂದು ಈಗ ಸೇರ್ಪಡೆಯಾಗಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳಾ ಪ್ರವೇಶಾತಿ ವಿಚಾರದಲ್ಲಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸುದ್ದಿಯಂತೂ ಸಂತೋಷ ತರುವ ವಿಚಾರವಲ್ಲ.
'ಬ್ಯಾಡ್ ಸಿಎಂ' ಎಂದು ಟೈಪ್ ಮಾಡಿದರೆ, ಕೇರಳದ ಸಿಎಂ ಪಿಣರಾಯಿ ಹೆಸರನ್ನು ನಂಬರ್ ಒನ್ ನಲ್ಲಿ ಗೂಗಲ್ ತೋರಿಸುತ್ತಿದೆ. ಇದು, ವಿರೋಧಿಗಳಿಗೆ ಪಿಣರಾಯಿ ವಿರುದ್ದ ಅಣಕವಾಡಲು ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ.

ಬ್ಯಾಡ್ ಸಿಎಂ ಎಂದು ಟೈಪ್ ಮಾಡಿದಾಗ, ಗೂಗಲ್, ಪಿಣರಾಯಿ ಅವರ ವಿಕಿಪಿಡಿಯಾ ಪೇಜ್ ಅನ್ನು ತೋರಿಸುತ್ತಿದೆ. ಸೋಮವಾರ (ಜ 7) ಒಂದೇ ದಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬ್ಯಾಡ್ ಸಿಎಂ ಕೀವರ್ಡ್ ಗೂಗಲ್ ನಲ್ಲಿ ದಾಖಲಾಗಿತ್ತು.
ಆದರೆ, ಇದಕ್ಕೆಲ್ಲಾ ಬಲಪಂಥೀಯ ಸಂಘಟನೆಗಳು ಮತ್ತು ಬಿಜೆಪಿ ಕಾರಣ ಎಂದು ಆಡಳಿತಾರೂಢ ಪಕ್ಷದವರು ಮತ್ತು ಪಿಣರಾಯಿ ವಿಜಯನ್ ಬೆಂಬಲಿಗರು ದೂರುತ್ತಿದ್ದಾರೆ.
ಶಬರಿಮಲೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದ ಪಿಣರಾಯಿ ವಿಜಯನ್ ಸರಕಾರ, ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಲು ಸೂಕ್ತ ಬಂದೋಬಸ್ತ್ ನೀಡುವಲ್ಲಿ ಯಶಸ್ವಿಯಾಗಿದ್ದರು.












Click it and Unblock the Notifications