ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 'ವಾಟರ್ ಟ್ಯಾಕ್ಸಿ' ಸೇವೆ ಆರಂಭ

ತಿರುವನಂತಪುರಂ, ಅ. 18: ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 'ವಾಟರ್ ಟ್ಯಾಕ್ಸಿ' ಸೇವೆಯನ್ನು ಇಂದಿನಿಂದ ಅಧಿಕೃತವಾಗಿ ಆರಂಭಿಸಲಾಗಿದೆ. ಈ ಟ್ಯಾಕ್ಸಿ ಸೇವೆ ಸ್ಥಳೀಯರ ದೈನಂದಿನ ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಕಳೆದ ವರ್ಷ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸಾರ್ವಜನಿಕ ಬಳಕೆಗೆ ವಾಟರ್ ಟ್ಯಾಕ್ಸಿಗಳನ್ನು ಖರೀದಿಸಲು ಮುಂದಾಗಿದ್ದ ಸ್ಟೇಟ್ ವಾಟರ್ ಟ್ರಾನ್ಸ್‌ಪೋರ್ಟ್ ಬೋರ್ಡ್ ನಾಲ್ಕು ಬೋಟ್‌ಗಳಿಗೆ ಆರ್ಡರ್ ಮಾಡಿತ್ತು. ಸದ್ಯ 10 ವಾಟರ್‌ ಟ್ಯಾಕ್ಸಿಯನ್ನು ಆರಂಭಿಸಲಾಗುತ್ತಿದೆ. ಆಲಪ್ಪುಳ ಜಿಲ್ಲೆಯಲ್ಲಿರುವ ಹಿನ್ನೀರಿನಲ್ಲಿ ಈ ವಾಟರ್ ಟ್ಯಾಕ್ಸಿಗೆ ಚಾಲನೆ ದೊರೆದಿದೆ.

ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆ ವಾಟರ್ ಟ್ಯಾಕ್ಸಿ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರ ಬಳಕೆಗಾಗಿ ವಿಶೇಷ ಟ್ಯಾಕ್ಸಿ ಖರೀದಿಸಲಾಗುತ್ತಿದೆ. ನಿಗದಿತ ಸಂಖ್ಯೆಗೆ ಕರೆ ಮಾಡಿ ಬುಕ್ ಮಾಡಬಹುದಾಗಿದೆ. ಟ್ಯಾಕ್ಸಿಯು ಹೇಳಿದ ಸ್ಥಳಕ್ಕೆ ಆಗಮಿಸಿ ಪಿಕ್ ಮಾಡಲಿದೆ. ಬಳಿಕ ಮತ್ತೆ ನೀವು ಹೇಳಿದ ಜಾಗಕ್ಕೆ ಕರೆದೊಯ್ಯಲಿದೆ.

ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು

ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು

ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು, ಹಾಗೆಯೇ ಸಾಮಾನ್ಯ ಜನರು ಪಾವತಿಸಬಹುದಾದ ಬೆಲೆಯನ್ನೇ ಇರಿಸಲಾಗಿದೆ ಎಂದು ಸ್ಟೇಟ್ ವಾಟರ್ ಟ್ರಾನ್ಸ್‌ಪೋರ್ಟ್ ಬೋರ್ಡ್ (ಎಸ್‌ಡಬ್ಲ್ಯೂಟಿಡಿ) ನಿರ್ದೇಶಕ ತಿಳಿಸಿದ್ದಾರೆ.

ಗಂಟೆಗೆ 15 ಕಿ.ಮೀ ಸಂಚರಿಸಬಲ್ಲದು

ಗಂಟೆಗೆ 15 ಕಿ.ಮೀ ಸಂಚರಿಸಬಲ್ಲದು

ಇದು ಡೀಸೆಲ್‌ನಿಂದ ಚಲಿಸುತ್ತದೆ. 10 ಮಂದಿ ಕುಳಿತುಕೊಳ್ಳಲು ಸ್ಥಳವಾಕಾಶ ಇರಲಿದೆ. ಗಂಟೆಗೆ 15 ಕಿ.ಮೀ ಸಂಚರಿಸಬಲ್ಲದು. ಹೀಗಾಗಿ ಜನರನ್ನು ಬೇಗ ಬೇಗ ಅವರು ತಲುಪಬೇಕಾದ ಜಾಗವನ್ನು ತಲುಪಿಸಬಲ್ಲದು.

ಕೊಚ್ಚಿ ಮೂಲದ ಸಂಸ್ಥೆ ನಿರ್ಮಿತ ಬೋಟ್

ಕೊಚ್ಚಿ ಮೂಲದ ಸಂಸ್ಥೆ ನಿರ್ಮಿತ ಬೋಟ್

ಈ ವಾಟರ್ ಟ್ಯಾಕ್ಸಿಗಳು ಬೀಟ್‌ ಸ್ಟೇಷನ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿಂದ ಬೋಟ್‌ನಲ್ಲಿ ತೆರಳಬಹುದಾಗಿದೆ. ಬೋಟ್‌ಗಳನ್ನು ನವಗತಿ ಅಭಿವೃದ್ಧಿಪಡಿಸಿವೆ. ಕೊಚ್ಚಿ ಮೂಲದ ಸಂಸ್ಥೆ ಇದಾಗಿದೆ. ಬೋಟ್‌ಗಳನ್ನು ಫೈಬರ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಡೀಸೆಲ್ ಆಧಾರಿತ Catamaran ವಿನ್ಯಾಸಹೊಂದಿರುವ ಬೋಟ್ ಪ್ರತಿ ಗಂಟೆಗೆ 30 ಲೀಟರ್ ಇಂಧನವನ್ನು ಬಳಕೆ ಮಾಡಲಿದೆ.

ಕೇರಳದಲ್ಲಿ ಪ್ರವಾಸೋದ್ಯಮ ಮುಖ್ಯ ಆದಾಯ ತರುವ ಕ್ಷೇತ್ರ

ಕೇರಳದಲ್ಲಿ ಪ್ರವಾಸೋದ್ಯಮ ಮುಖ್ಯ ಆದಾಯ ತರುವ ಕ್ಷೇತ್ರವಾಗಿದೆ. ಸುಮಾರು 45,000 ಕೋಟಿ ರು ಆದಾಯ ಹೊಂದಿರುವ ಈ ಕ್ಷೇತ್ರವು ಸರ್ಕಾರದ ಜಿಡಿಪಿಗೆ ಶೇ 12ರಷ್ಟು ಪಾಲು ನೀಡುತ್ತಿದೆ. ಕಳೆದ ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಸರಿ ಸುಮಾರು 15,000 ಕೋಟಿ ರು ಆದಾಯ ತಂದುಕೊಟ್ಟಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಾರು 7 ತಿಂಗಳ ಬಳಿಕ ಮತ್ತೆ 800 ಬೋಟ್ ಹೌಸ್ ಕಾರ್ಯ ನಿರ್ವಹಿಸಲು ಆರಂಭಿಸಿವೆ. ''ಪೂರ್ವದ ವೆನಿಸ್'' ಎಂದೆನಿಸಿಕೊಂಡಿರುವ ಆಲಪ್ಪುಳದಲ್ಲಿ ಮತ್ತೆ ಪ್ರವಾಸಿಗರಿಗೆ ಬೋಟ್ ಗಳು ಕಾದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+