ಕೊರೊನಾ ಐಸೋಲೇಶನ್ ವಾರ್ಡ್ ರೋಗಿಗಳಿಗೆ ಕೇರಳದಲ್ಲಿ ನೀಡಲಾಗುತ್ತಿರುವ ಆಹಾರವೇನು?

ತಿರುವನಂತಪುರಂ, ಮಾರ್ಚ್ 18: ಭಾರತದಲ್ಲಿ ಕೊರೊನಾ ವೈರಸ್ ಹರುಡಿದ್ದು, ಪ್ರತಿದಿನವೂ ಹೊಸ ಹೊಸ ಸೋಂಕಿತರು ಪತ್ತೆಯಾಗುತ್ತಲೆ ಇದ್ದಾರೆ. ಕೊರೊನಾ ಸೋಂಕು ಅನುಮಾನದ ಹಿನ್ನೆಲೆ ಪ್ರತಿದಿನವೂ ಸಾವಿರಾರು ಜನರನ್ನು ಪರೀಕ್ಷಿಸಲಾಗುತ್ತಿದೆ. ಅದರಲ್ಲಿ ಅನೇಕರನ್ನು ಪ್ರತ್ಯೇಕ ಕೊಠಡಿಯಲ್ಲಿ (isolation ward) ಇರಿಸಿ ನಿಗಾವಹಿಸಲಾಗುತ್ತಿದೆ.

ಸೋಂಕು ತಗುಲಿರುವುದು ಖಚಿತ ಆದರೂ ಅಥವಾ ರೋಗದ ಲಕ್ಷಣಗಳು ಕಂಡುಬಂದರೂ ಅಂತವರನ್ನು ಐಸೋಲೇಶನ್ ವಾರ್ಡ್‌ನಲ್ಲಿ (isolation ward) ಇರಿಸಲಾಗುತ್ತಿದೆ.

ಹೀಗೆ, ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಿದ ಶಂಕಿತರಿಗೆ ಮತ್ತು ಸೋಂಕಿತರಿಗೆ ಯಾವ ರೀತಿಯ ಅಹಾರ ಒದಗಿಸಲಾಗುತ್ತಿದೆ, ಆಹಾರದಲ್ಲಿ ಏನಾದರೂ ಬದಲಾವಣೆ ಮಾಡಲಾಗಿದ್ಯಾ ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುತ್ತಿದೆ. ಕೇರಳದಲ್ಲಿ ಯಾವ ರೀತಿ ಆಹಾರ ನೀಡಲಾಗಿದೆ ಎಂದು ಡಿಸಿ ವಿವರಿಸಿದ್ದಾರೆ. ಮುಂದೆ ಓದಿ....

ಕೇರಳ ಸ್ಥಿತಿ ಗಂಭೀರ

ಕೇರಳ ಸ್ಥಿತಿ ಗಂಭೀರ

ಭಾರತದಲ್ಲಿ ಮೊದಲು ಕೊರೊನಾ ಪತ್ತೆಯಾಗಿದ್ದೇ ಕೇರಳದಲ್ಲಿ. ಆರಂಭದಲ್ಲಿ ಸೋಂಕು ಕಾಣಿಸಿಕೊಂಡ ಮೂವರು ಕೂಡ ಅದರಿಂದ ಚೇತರಿಸಿಕೊಂಡರು. ಆದರೆ, ಈಗಿನ ಪರಿಸ್ಥಿತಿ ಗಂಭೀರವಾಗುತ್ತಿದೆ. ಸದ್ಯ ಕೇರಳದಲ್ಲಿ 21 ಸೋಂಕಿತರು ದೃಢಪಟ್ಟಿದ್ದಾರೆ. ದೇಶದಲ್ಲಿ ಮೊದಲ ಐಸೋಲೇಶನ್ ವಾರ್ಡ್ ಆರಂಭಿಸಿದ್ದು ಕೂಡ ಕೇರಳದಲ್ಲಿ.

ಎರಡು ರೀತಿ ಮೆನ್ಯೂ ಇದೆ

ಎರಡು ರೀತಿ ಮೆನ್ಯೂ ಇದೆ

ಎರ್ನಾಕುಲಂ ಜಿಲ್ಲಾಧಿಕಾರಿ ಸುಹಾಸ್ ಅವರು ಹೇಳಿರುವ ಪ್ರಕಾರ, ಕಲಾಮಸ್ಸೆರಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಹಾಗೂ ಶಂಕಿತರಿಗೆ ಎರಡು ರೀತಿ ಮೆನ್ಯೂ ನೀಡಲಾಗುತ್ತಿದೆಯಂತೆ. ಒಂದು ಭಾರತೀಯ ಪ್ರಜೆಗಳಿಗೆ ಇನ್ನೊಂದು ವಿದೇಶಿ ನಾಗರಿಕರಿಗೆ.

ಬೆಳಿಗ್ಗೆ ತಿಂಡಿ ಏನಿದೆ?

ಬೆಳಿಗ್ಗೆ ತಿಂಡಿ ಏನಿದೆ?

ಕೇರಳದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ತಿಂಡಿಗೆ, ದೋಸೆ ಮತ್ತು ಸಾಂಬರ್ ನೀಡಲಾಗುತ್ತಿದೆ. ಅದರ ಜೊತೆಗೆ ಬೇಯಿಸಿದ ಎರಡು ಮೊಟ್ಟೆ, ಜೊತೆಗೆ ಕಿತ್ತಳೆ ಹಣ್ಣು, ಹಾಗೂ ಕುಡಿಯಲು ಹಾಗೂ ಕೈ ತೊಳೆಯಲು ಒಂದು ಬಾಟಲ್ ನೀರು ಕೊಡಲಾಗಿದೆ.

ಮಧ್ಯಾಹ್ನ ಊಟಕ್ಕೆ?

ಮಧ್ಯಾಹ್ನ ಊಟಕ್ಕೆ?

ಸುಮಾರು 10:30ರ ಸಮಯಕ್ಕೆ ಜ್ಯೂಸ್ ನೀಡಲಾಗುತ್ತೆ. ಬಳಿಕ ಮಧ್ಯಾಹ್ನ ಕೇರಳ ಶೈಲಿಯ ಊಟ ಒದಗಿಸಲಾಗುತ್ತೆ. ಇದರಲ್ಲಿ ಚಪಾತಿ, ಮೀನು ಫ್ರೈ ಹಾಗೂ ಮಿನರಲ್ ನೀರು ಕೊಡಲಾಗುತ್ತಂತೆ. ಮತ್ತೆ ಸಂಜೆ ಟೀ ಜೊತೆಗೆ ಬಿಸ್ಕಟ್ ದೊರೆಯುತ್ತೆ. ರಾತ್ರಿ ಮತ್ತೆ ಊಟ ಜೊತೆಗೆ ಎರಡು ಬಾಳೆಹಣ್ಣು ನೀಡಲಾಗುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.

ವಿದೇಶಿಗರಿಗೆ ವಿಶೇಷ ಊಟ

ವಿದೇಶಿಗರಿಗೆ ವಿಶೇಷ ಊಟ

ಇನ್ನು ವಿದೇಶಿಗರನ್ನು ಇರಿಸಲಾಗಿರುವ ಐಸೋಲೇಶನ್ ವಾರ್ಡ್‌ನಲ್ಲಿ ಫಾರೀನ್ ಶೈಲಿಯ ಊಟ ನೀಡಲಾಗುತ್ತಿದೆ. ಬೆಳಿಗ್ಗೆ ತಿಂಡಿಗೆ ಸೂಪ್, ಜ್ಯೂಸ್ ಜೊತೆ ಎರಡು ಮೊಟ್ಟೆ. ಮಧ್ಯಾಹ್ನ ಊಟಕ್ಕೆ ಬ್ರೆಡ್ ಟೋಸ್ಟ್, ಚೀಸ್ ಮತ್ತು ಜ್ಯೂಸ್ ಸಂಜೆ ಟೀ ಹಾಗೂ ರಾತ್ರಿ ಬ್ರೆಡ್ ಟೋಸ್ಟ್ ಮತ್ತು ಬೇಯಿಸಿದ ಮೊಟ್ಟೆ ಹಾಗೂ ಮಿನರಲ್ ನೀರು ಕೊಡಲಾಗುತ್ತಿದೆ ಎಂದು ಡಿಸಿ ಸುಹಾಸ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+