ಮಂಗಳಮುಖಿ ಘಟಕ ಉದ್ಘಾಟಿಸಿದ ಕೇರಳ ಕಾಂಗ್ರೆಸ್

ತಿರುವನಂತಪುರಂ, ಜೂನ್ 11: ಕೇರಳ ರಾಜಕೀಯದಲ್ಲಿ ಹೊಸದೊಂದು ಕ್ರಾಂತಿ ಶುರುವಾಗಿದೆ. ಕೇರಳ ಕಾಂಗ್ರೆಸ್ ಪಕ್ಷವೂ ಮಂಗಳಮುಖಿ ಘಟಕ ಹುಟ್ಟುಹಾಕಿದ್ದು, ತಿರುವನಂತಪುರಂ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳಮುಖಿ ಘಟಕ ಉದ್ಘಾಟನೆ ಮಾಡಲಾಯಿತು.

ಈ ವೇಳೆ ಸುಮಾರು 24ಕ್ಕೂ ಅಧಿಕ ಮಂಗಳಮುಖಿಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಗುರುತಿನ ಚೀಟಿ ನೀಡಿ ಸ್ವಾಗತಿಸಲಾಯಿತು.

ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್, ಚೆನ್ನಿತಾಲ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಪಕ್ಷದ ಹಿರಿಯರು ಮತ್ತು ವರಿಷ್ಠರ ಸಮ್ಮುಖದಲ್ಲಿ ಮಂಗಳಮುಖಿ ಘಟಕದ ಪದಾದಿಕಾರಿಗಳನ್ನು ನೇಮಕ ಮಾಡಲಾಗಿದೆ. ಲಿಂಗಾಯತ ಸಮುದಾಯದ ಸದಸ್ಯರಿಗೆ ಪಕ್ಷದ ಸದಸ್ಯತ್ವವನ್ನು ನೀಡಲಾಗಿದೆ.

Congress inaugurated its Transgenders wing in Thiruvananthapuram

ಈ ಕುರಿತು ಕಾಂಗ್ರೆಸ್ ಪಕ್ಷ ಅಧಿಕೃತ ಟ್ವೀಟ್ ಮಾಡಿದ್ದು "ತಿರುವನಂತಪುರಂನ ಕೆಪಿಸಿಸಿ ಸಭಾಂಗಣದಲ್ಲಿ ಕೇರಳ ಪ್ರದೇಶ ಟ್ರಾನ್ಸ್ಜೆಂಡರ್ಸ್ ಕಾಂಗ್ರೆಸ್ ಘಟಕ ಇಂದು ಉದ್ಘಾಟಿಸಲಾಯಿತು. ಪಕ್ಷದ ಉನ್ನತ ನಾಯಕತ್ವದ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಘೋಷಿಸಲಾಯಿತು ಮತ್ತು ಲಿಂಗಾಯತ ಸಮುದಾಯದ ಸದಸ್ಯರಿಗೆ ಪಕ್ಷದ ಸದಸ್ಯತ್ವವನ್ನು ನೀಡಲಾಯಿತು" ಎಂದು ತಿಳಿಸಿದೆ.

''ಇಂದು ಮೂವತ್ನಾಲ್ಕು ಸದಸ್ಯರು ಕಾಂಗ್ರೆಸ್ನಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದಿದ್ದಾರೆ. ರಾಜ್ಯ ಸಮಿತಿಯಲ್ಲಿ ನಾವು ಐವತ್ತು ಸದಸ್ಯರನ್ನು ಹೊಂದಿದ್ದೇವೆ" ಎಂದು ಕಾಂಗ್ರೆಸ್ನ ಲಿಂಗಾಯತ ಸದಸ್ಯರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+