ಕೇರಳದ ಈ ಊರಿನ ಆ ಫ್ಲಾಟಿನ ನಲ್ಲಿಯಲ್ಲಿ ನೊರೆ ನೊರೆ ಮದ್ಯ!

ತ್ರಿಶೂರ್, ಫೆಬ್ರವರಿ 05: ಕೇರಳದಲ್ಲಿ ಮದ್ಯಪಾನ ನಿಷೇಧ, ವಾರಾಂತ್ಯದಲ್ಲಿ ಮದ್ಯಪೂರೈಕೆ, ಸ್ಟಾರ್ ಹೋಟೆಲ್, ಬಾರ್ ನಲ್ಲಿ ನಿರ್ಬಂಧಿತ ಮದ್ಯಪಾನ ಹೀಗೆ ವಿವಿಧ ನೀತಿ, ನಿಯಮಗಳ ನಡುವೆ ಒಂದೂರಿನ ಒಂದು ಫ್ಲಾಟಿನಲ್ಲಿ ಮನೆ ಮನೆಗೂ ನಲ್ಲಿಯಲ್ಲಿ ಮದ್ಯ ಪೂರೈಕೆಯಾಗಿರುವ ಘಟನೆ ನಡೆದಿದೆ.

ತ್ರಿಶೂರ್ ಜಿಲ್ಲೆಯ ಸೋಲೊಮನ್ ಅವಿನ್ಯೂ ಫ್ಲಾಟಿನ ಮನೆಗಳು ಪಬ್ ಗಳಾಗಿ ಪರಿವರ್ತನೆಗೊಂಡಿವೆ. ಮನೆಯ ನಲ್ಲಿ ಗಳಲ್ಲಿ ಬಂದ ಬುರ್ ಬುರ್ ನೊರೆಯುಳ್ಳ ನೀರು, ಅದು ಬರಿಯ ನೀರಲ್ಲ, ಆಲ್ಕೋಹಾಲ್ ಎಂದು ತಿಳಿಯುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಮೊದಲೇ ಬಾಯಾರಿದ್ದ ಕೇರಳಿಗರ ಬಾಯಿಗೆ ಮದ್ಯ ತಾನಾಗೇ ಹರಿದು ಬಂದರೆ ಬೇಡ ಅನ್ನುವವರುಂಟೆ, ಬಯಸದೇ ಬಂದ ಭಾಗ್ಯವನ್ನು ಕೈ ಚಾಚಿ ಬಳಸಿಕೊಂಡಿದ್ದಾರೆ.

ಫ್ಲಾಟಿನ 18 ಕುಟುಂಬದವರ ಮನೆಗಳಲ್ಲಿ ಆಲ್ಕೋಹಾಲ್ ಮಿಶ್ರಿತ ನೀರು ಬಂದಿದೆ. ಇದಕ್ಕೆ ಏನು ಕಾರಣ ಎಂದು ಪರಿಶೀಲನೆ ನಡೆಸಿದ ಅಬಕಾರಿ ಇಲಾಖೆಯವರಿಗೆ ಸತ್ಯ ತಿಳಿದು ಆಘಾತವಾಗಿದೆ.

Bizarre! Kerala flat turns into bar, as water taps serve liquor

ಇಲಾಖೆಯಿಂದ ಜಪ್ತಿಯಾದ ಮದ್ಯವನ್ನು ನಾಶಪಡಿಸುವ ನಡೆದ ಅಚಾತುರ್ಯದ ಫಲ ಇದಾಗಿದೆ.

ಆರು ವರ್ಷಗಳ ಹಿಂದೆ ರಚನಾ ಎಂಬ ಹೆಸರಿನ ಬಾರ್ ಈ ವಸತಿ ಸಮುಚ್ಚಯದ ಸಮೀಪದಲ್ಲಿ ತಲೆ ಎತ್ತಿತ್ತು. ಆದರೆ, ಲೈಸನ್ ರದ್ದಾಗಿದ್ದರಿಂದ ಬಾರ್ ನಲ್ಲಿದ್ದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು. ಸುಮಾರು 6,000 ಲೀಟರ್ ಮದ್ಯ ವಶವಾಗಿತ್ತು.

ನಂತರ ಅಕ್ರಮ ಮದ್ಯವನ್ನು ನಾಶಪಡಿಸುವಂತೆ ಇಲಾಖೆಗೆ ಕೋರ್ಟ್ ಸೂಚಿಸಿತ್ತು. ಸುಮಾರು 6,000 ಲೀಟರ್ ಮದ್ಯವನ್ನು ನಾಶ ಪಡಿಸಲು 6 ಗಂಟೆಗಳ ಕಾಲ ತೆಗೆದುಕೊಂಡ ಅಧಿಕಾರಿಗಳು ಎಲ್ಲವೂ ಮುಗಿಯಿತು ಎಂದು ಕೊಂಡು ವರದಿ ಕೊಟ್ಟಿದ್ದರು.

ಆದರೆ, ಭೂಮಿಯ ಆಳಕ್ಕಿಳಿದ ಮದ್ಯ, ನೀರಿನ ಜೊತೆ ಸೇರಿಕೊಂಡು ಆಲ್ಕೋಹಾಲ್ ಮಿಶ್ರಿತ ನೀರಾಗಿ ಪರಿವರ್ತನೆಗೊಂಡಿದೆ. ಇದು ನಂತರ ನಲ್ಲಿಗಳ ಮೂಲಕ ಮನೆ ಮನೆ ಸೇರಿದೆ.

ನಲ್ಲಿಯಲ್ಲಿ ಬಂದ ನೀರು ಕುಡಿದು ಕೆಲವರು ಟೈಟ್ ಆದರೆ, ಇನ್ನು ಕೆಲವರು ಗರಂ ಆಗಿ ಛಾಲಕುಡಿ ಮುನ್ಸಿಪಾಲ್ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನಾಹುತ ಸಂಬಂಧಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+