ಸಮೀಕ್ಷೆ: ಕೇರಳದಲ್ಲಿ ಮತ್ತೆ LDF ಸರ್ಕಾರ, ಬಿಜೆಪಿಗೆ ಉಪ್ಪು ಖಾರ

ತಿರುವನಂತಪುರಂ, ಫೆ.28: ಕೇರಳ ಜೊತೆಗೆ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಕೇರಳ ಚುನಾವಣೆಯಲ್ಲಿ ಎಲ್ ಡಿ ಎಫ್ ಮತ್ತೊಮ್ಮೆ ಜಯಭೇರಿ ಬಾರಿಸಲಿದ್ದು, ಬಿಜೆಪಿ ಹೆಚ್ಚಿನ ಸಾಧನೆ ಮಾಡುವುದಿಲ್ಲ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ.

ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

2020ರಲ್ಲಿ 140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ.

ಎಬಿಪಿ -ಸಿವೋಟರ್ ಸಮೀಕ್ಷೆ 2021

ಎಬಿಪಿ -ಸಿವೋಟರ್ ಸಮೀಕ್ಷೆ 2021

ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 83 ರಿಂದ 91 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 47 ರಿಂದ 55 ಸ್ಥಾನ ಗಳಿಸಬಹುದು ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

ಎಬಿಪಿ -ಸಿವೋಟರ್ ಸಮೀಕ್ಷೆಯಂತೆ ಶೇಕಡವಾರು ಮತ

ಎಬಿಪಿ -ಸಿವೋಟರ್ ಸಮೀಕ್ಷೆಯಂತೆ ಶೇಕಡವಾರು ಮತ

ಶೇಕಡವಾರು ಮತ ಗಳಿಕೆಯಲ್ಲಿ 2016ಕ್ಕೆ ಹೋಲಿಸಿದರೆ ಎಲ್ ಡಿ ಎಫ್ ಶೇ 3.4%, ಯುಡಿಎಫ್ 6.2% ಹಾಗೂ ಬಿಜೆಪಿ 2.2% ರಷ್ಟು ಕುಸಿತ ಕಾಣಲಿದೆ ಎಂದು ಎಬಿಪಿ -ಸಿವೋಟರ್ ಸಮೀಕ್ಷೆ ಹೇಳಿದೆ. 2016ರಲ್ಲಿ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಶೇ 43.88%; ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶೇ 38.81; ಬಿಜೆಪಿ ನೇತೃತ್ವದ ಎನ್ಡಿಎ 14. 96% ಮತಗಳಿಸಿದ್ದವು.

ಯುಡಿಎಫ್ ಪರ ಎರಡು ಸಮೀಕ್ಷೆಗಳಲ್ಲೂ ಹಿನ್ನಡೆ

ಯುಡಿಎಫ್ ಪರ ಎರಡು ಸಮೀಕ್ಷೆಗಳಲ್ಲೂ ಹಿನ್ನಡೆ

ಸ್ಥಳೀಯ ಮಾಧ್ಯಮ ಸಂಸ್ಥೆಗಳು ನೀಡಿರುವ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಎಲ್ ಡಿ ಎಫ್ 72 ರಿಂದ 78 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಡಿಎಫ್ 65 ಹಾಗೂ ಬಿಜೆಪಿ 3 ರಿಂದ 7 ಸ್ಥಾನ ಗಳಿಸುವ ನಿರೀಕ್ಷೆಯಿದೆ.

ಎರಡನೇ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 68 ರಿಂದ 78 ಸ್ಥಾನ, ಯುಡಿಎಫ್ 62 ರಿಂದ 72 ಸ್ಥಾನ ಹಾಗೂ ಬಿಜೆಪಿ 2 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ.

2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು

2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು

2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು. ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+