ಲುಡೋ ಆಟಕ್ಕೆ ಕರೆದುಕೊಳ್ಳುತ್ತಿಲ್ಲ: ಅಕ್ಕನ ವಿರುದ್ಧ ಬಾಲಕನಿಂದ ಪೊಲೀಸ್ ದೂರು

ತಿರುವನಂತಪುರಂ, ಮೇ 14: ಲುಡೋ ಆಟ ಆಡಲು ನಿರಾಕರಣೆ ಮಾಡಿದ್ದಕ್ಕೆ ಸಹೋದರಿ ಹಾಗೂ ಸಹೋದರಿಯ ನಾಲ್ಕು ಸ್ನೇಹಿತರ ವಿರುದ್ಧ 8 ವರ್ಷದ ಬಾಲಕ ಪೊಲೀಸ್ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.

''ನಾನು ಹುಡುಗ ಎಂಬ ಕಾರಣಕ್ಕೆ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಲುಡೋ, ಶಟಲ್, ಕಳ್ಳ-ಪೊಲೀಸ್ ಆಟ ಆಡಲು ನನ್ನನ್ನು ಕರೆದುಕೊಳ್ಳುತ್ತಿಲ್ಲ. ನನ್ನ ಅಕ್ಕ ಮತ್ತು ಅವರ ಸ್ನೇಹಿತರನ್ನು ಬಂಧಿಸಿ'' ಎಂದು 8 ವರ್ಷದ ಉಮರ್ ನಿಧರ್ ಪೊಲೀಸರಿಗೆ ಬಳಿ ಮನವಿ ಮಾಡಿದ್ದಾನೆ.

8 ವರ್ಷದ ಉಮರ್ ನಿಧರ್ ಅವರ ದೂರನ್ನು ತಮಾಷೆಯಾಗಿ ಸ್ವೀಕರಿಸಿದ ಪೊಲೀಸರು, ಖುದ್ದು ಅವರ ಮನೆಗೆ ಭೇಟಿ ನೀಡಿ, ಆತನನ್ನು ಆಟಕ್ಕೆ ಸೇರಿಸಿಕೊಳ್ಳಿ ಎಂದು ಇತರೆ ಮಕ್ಕಳಿಗೆ ಸಲಹೆ ನೀಡಿದ್ದಾರೆ.

A Boy Complains To Police Against Sister Not Allowing Him To Play Ludo

ಬಾಲಕ ಉಮರ್ ನಿಧರ್ ಲಿಖಿದ ರೂಪದಲ್ಲಿ ದೂರು ನೀಡಿದ್ದು, ಇಂಗ್ಲಿಷ್‌ನಲ್ಲಿ ಬರೆದಿದ್ದಾನೆ. ಅಕ್ಕ ಮತ್ತು ಆಕೆಯ ಸ್ನೇಹಿತರನ್ನ ಬಂಧಿಸಿ ಎಂದು ಮನವಿ ಮಾಡಿದ್ದಾನೆ. ಈ ಸುದ್ದಿಯನ್ನು ಕೇಳಿ ಬಾಲಕನ ಸಹೋದರಿ ಹಾಗೂ ಸ್ನೇಹಿತರು ಅಚ್ಚರಿಯಾಗಿದ್ದಾರೆ. 'ಪೊಲೀಸ್ ದೂರು ನೀಡುತ್ತಾನೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ' ಎಂದು ಹೇಳಿದ್ದಾರೆ.

ಅಂದ್ಹಾಗೆ, ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ಮನೆಯಲ್ಲಿ ಮಕ್ಕಳು ಲುಡೋ, ಕೇರಂ, ಚೌಕ-ಬಾರ, ಕಳ್ಳ-ಪೊಲೀಸ್ ಅಂತಹ ಆಟಗಳ ಮೊರೆ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+