ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಕೇರಳ ದಿಟ್ಟ ಹೋರಾಟ: ರಾಜ್ಯದಲ್ಲಿಂದು ಎಷ್ಟು ಕೇಸ್?

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 16: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಆದರೆ, ಕೇರಳದಲ್ಲಿ ಮಾತ್ರ ಕೊವಿಡ್ ಸೋಂಕು ಒಂದು ಹಂತಕ್ಕೆ ನಿಯಂತ್ರಣದಲ್ಲಿದೆ. ದಿನಕಳೆದಂತೆ ಕೇರಳದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಇಂದು ಕೇರಳದಲ್ಲಿ ಒಟ್ಟು 7 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ 5 ಜನರು ವಿದೇಶಿ ಪ್ರಯಾಣದ ಇತಿಹಾಸ ಹೊಂದಿದ್ದರೆ, ಉಳಿದ ಇಬ್ಬರು ಸೋಂಕಿತರ ಸಂಪರ್ಕದಲ್ಲಿದ್ದವರು ಎಂದು ತಿಳಿದುಬಂದಿದೆ.

ಬೆಳಗಾವಿ; ಒಂದೇ ದಿನ 17 ಕೊರೊನಾ ಪ್ರಕರಣಗಳು ದಾಖಲುಬೆಳಗಾವಿ; ಒಂದೇ ದಿನ 17 ಕೊರೊನಾ ಪ್ರಕರಣಗಳು ದಾಖಲು

ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ಬರುತ್ತಿದೆ ಎಂದಿದ್ದಾರೆ.

ಅಂದ್ಹಾಗೆ, ಕಳೆದ ಐದು ದಿನಗಳ ಅಂಕಿ ಅಂಶ ನೋಡಿದ್ರೆ, ಏಪ್ರಿಲ್ 11 ರಂದು 10 ಸೋಂಕಿತರು, ಏಪ್ರಿಲ್ 12 ರಂದು 2 ಕೇಸ್, ಏಪ್ರಿಲ್ 13 ರಂದು 3 ಪ್ರಕರಣ, ಏಪ್ರಿಲ್ 14 ರಂದು 8 ಪ್ರಕರಣ, ಏಪ್ರಿಲ್ 15 ರಂದು 1 ಕೇಸ್ ಹಾಗೂ ಏಪ್ರಿಲ್ 15 ರಂದು 7 ಜನರಿಗೆ ಕೊವಿಡ್ ಕಾಣಿಸಿಕೊಂಡಿದೆ.

7 New COVID19 Cases Reported In Kerala Today

ದೇಶದ ಟಾಪ್ ಹತ್ತು ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳ ಪೈಕಿ ಕೇರಳ 10ನೇ ಸ್ಥಾನದಲ್ಲಿದೆ. ಅಂದ್ಹಾಗೆ, ಭಾರತದಲ್ಲಿ ಮೊದಲ ಕೊರೊನಾ ಕೇಸ್ ವರದಿಯಾಗಿದ್ದು, ಕೇರಳದಲ್ಲಿ. ಮೂರು ಜನರಿಗೆ ಸೋಂಕು ಪತ್ತೆಯಾಗಿತ್ತು. ನಂತರ ಆ ಮೂವರು ಚೇತರಿಸಿಕೊಂಡಿದ್ದರು.

ಸದ್ಯದ ಮಾಹಿತಿ ಪ್ರಕಾರ, ಕೇರಳದ ನಾನ್‌ ಹಾಟ್‌ಸ್ಪಾಟ್‌ ಪ್ರದೇಶ ಮತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆಯಂತೆ.

English summary
7 new COVID19 cases reported in Kerala today. 5 new cases have recent foreign travel history and 2 cases contracted the disease locally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X