Zika Virus; ಕೊರೊನಾ ಆತಂಕದ ನಡುವೆ ಕೇರಳದಲ್ಲಿ ಝಿಕಾ ವೈರಸ್ ಪತ್ತೆ

ತಿರುವನಂತಪುರಂ, ಜುಲೈ 08: ದೇಶದಲ್ಲಿ ಕೊರೊನಾ ಸೋಂಕಿನ ಆತಂಕ ತುಂಬಿಕೊಂಡಿದೆ. ಇದರ ನಡುವೆ ಕೇರಳದಲ್ಲಿ ಮೊದಲ ಬಾರಿ ಗುರುವಾರ ಝಿಕಾ ವೈರಸ್ ಪ್ರಕರಗಣಗಳು ಪತ್ತೆಯಾಗಿವೆ. ಮೊದಲು ಮಹಿಳೆಯೊಬ್ಬರಲ್ಲಿ ಝಿಕಾ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಹತ್ತು ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

"24 ವರ್ಷದ ಮಹಿಳೆಯೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಈಚೆಗೆ ಅವರಿಗೆ ಹೆರಿಗೆಯಾಗಿತ್ತು. ಜೂನ್ 28ರಂದು ಈ ಮಹಿಳೆ ಜ್ವರ, ತಲೆ ನೋವು ಹಾಗೂ ಕೆಂಪು ಕಲೆಗಳ ಕಾರಣವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಈ ವೈರಸ್ ಪತ್ತೆಯಾಗಿದೆ. ಈ ಸೋಂಕಿನ ಶಂಕೆ ಇದ್ದ ಹದಿಮೂರು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಹತ್ತು ಮಾದರಿಗಳು ಪಾಸಿಟಿವ್ ಬಂದಿದೆ" ಎಂದು ತಿಳಿಸಿದರು.

ಝಿಕಾ ವೈರಸ್ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

10 Zika Virus Cases Found In Kerala Inbetween Coronavirus Fear

ಏನಿದು ಝಿಕಾ ವೈರಸ್?
ಝಿಕಾ ಎಂಬುದು ಸೊಳ್ಳೆಗಳಿಂದ ಹರಡುವ ರೋಗ. ಜ್ವರ, ಕೆಂಪು ಕಲೆಗಳು, ಸ್ನಾಯು, ಕೀಲುಗಳಲ್ಲಿ ನೋವು, ತಲೆ ನೋವು ಈ ಸೋಂಕಿನ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು 2ರಿಂದ ಏಳು ದಿನಗಳವರೆಗೆ ಇರುತ್ತವೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ 1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಪತ್ತೆಹಚ್ಚಿತ್ತು. ಆಫ್ರಿಕಾ, ಅಮೆರಿಕ, ಏಷ್ಯಾ ಹಾಗೂ ಪೆಸಿಫಿಕ್‌ನಲ್ಲಿ ಕಂಡುಬಂದಿದ್ದು, ಇದೀಗ ಮೊದಲ ಬಾರಿ ಕೇರಳದಲ್ಲಿ ಪತ್ತೆಯಾಗಿದೆ.

ಈ ಸೋಂಕಿನಿಂದ ಸಾವು ಸಂಭವಿಸುವ ಪ್ರಮಾಣ ಕಡಿಮೆಯಿದ್ದರೂ ಗರ್ಭಿಣಿಯರಲ್ಲಿ ಕಾಣಿಸಿಕೊಂಡರೆ, ಹುಟ್ಟುವ ಮಕ್ಕಳಲ್ಲಿ ತೊಂದರೆ ಕಂಡುಬರುತ್ತದೆ ಎಂದು ಡಬ್ಲುಎಚ್‌ಒ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+