ವಿಡಿಯೋ; ಬೀಚ್ ಟವೆಲ್ ನುಂಗಿದ ಹೆಬ್ಬಾವನ್ನು ಬದುಕಿಸಿದ ವೈದ್ಯರು
ಸಿಡ್ನಿ, ಫೆಬ್ರವರಿ 27; ಇತ್ತೀಚೆಗೆ ಹೆಚ್ಚಾಗಿರುವ ಪರಿಸರ ಮಾಲಿನ್ಯದಿಂದ ವನ್ಯಪ್ರಾಣಿಗಳು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಆಗಾಗ ನೋಡುತ್ತಿರುತ್ತೇವೆ.
ಪ್ರವಾಸಿ ತಾಣಗಳಲ್ಲಿ ಪ್ರವಾಸಕ್ಕೆ ಹೋದವರು ಬೇಜವಾಬ್ದಾರಿಯಿಂದ ನಡೆದುಕೊಂಡು, ಅಲ್ಲಿನ ಪ್ರಾಣಿ ಪಕ್ಷಿಗಳಿಗೆ ಆತಂಕ ತಂದೊಡ್ಡುತ್ತಿರುವುದೂ ಸಹಜವಾಗಿದೆ.
ಇಂತಹದೇ ಘಟನೆ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವೊಂದು ಬೀಚ್ ಟವೆಲ್ ನುಂಗಿ ತೀವ್ರ ಪಡಿಪಾಟಲು ಅನುಭವಿಸಿರುವುದು ವರದಿಯಾಗಿದೆ. ಈ ಹೆಬ್ಬಾವು ಅದೃಷ್ಟವಶಾತ್ ಅಲ್ಲಿನ ಪಶುವೈದ್ಯರ ಕಣ್ಣಿಗೆ ಬಿದ್ದಿದ್ದರಿಂದ ಬದುಕಿ ಉಳಿದಿದೆ.
This is what plastic & other waste is doing to other species. Vets here pulling AN ENTIRE BEACH TOWEL out of a python in Australia. Imagine what we are doing. Video Not for faint hearted person. pic.twitter.com/vDgPm6CgAe
— Parveen Kaswan, IFS (@ParveenKaswan) February 28, 2020

ಬೀಚ್ ಟವೆಲ್ ನುಂಗಿದ್ದ ಹೆಬ್ಬಾವನ್ನು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋದ ವೈದ್ಯರು ಹೆಬ್ಬಾವಿನ ಹೊಟ್ಟೆಯಿಂದ 1 ಮೀಟರ್ ಉದ್ದದ ಬೀಚ್ ಟವೆಲ್‌ನ್ನು ಯಶಸ್ವಿಯಾಗಿ ಹೊರ ತೆಗದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications