ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಆಸ್ಟ್ರೇಲಿಯಾಗೆ ಮರಳಲು ನಿರ್ಬಂಧ: ಮೇ 15ಕ್ಕೆ ಹಿಂತೆಗೆತ

|
Google Oneindia Kannada News

ಮೆಲ್ಬರ್ನ್, ಮೇ 07: ಭಾರತದಿಂದ ಬರುವ ಆಸ್ಟ್ರೇಲಿಯನ್ನಿರಿಗೆ ವಿಧಿಸಿದ ನಿರ್ಬಂಧವನ್ನು ಮೇ 15ಕ್ಕೆ ಹಿಂತೆಗೆಯಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರವು ಇದೇ ಮೊದಲ ಬಾರಿಗೆ ತನ್ನ ನಾಗರಿಕರಿಗೆ ಸ್ವದೇಶಕ್ಕೆ ಹಿಂದಿರುಗಲು ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು, ಆಸ್ಟ್ರೇಲಿಯಾಗೆ ಬರುವ ಮುನ್ನ ನಾಗರಿಕರು 14 ದಿನ ಭಾರತದಲ್ಲಿದ್ದರೆ ಅಂಥವರು ಸ್ವದೇಶಕ್ಕೆ ಹಿಂದಿರುಗುವಂತಿಲ್ಲ. ಒಂದು ವೇಳೆ ಈ ನಿಷೇಧವನ್ನು ಮೀರಿದರೆ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ತಂಡ ವಿಧಿಸಲಾಗುವುದು ಎಂದೂ ತಿಳಿಸಿತ್ತು.

ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ

ಪ್ರಧಾನಿ ನರೇಂದ್ರ ಮೋದಿ ಮಾರಿಸನ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೋವಿಡ್ ಸಮಯದಲ್ಲಿ ಸಹಕಾರ, ಇಂಡೊ-ಫೆಸಿಫಿಕ್ ವಲಯದಲ್ಲಿನ ಶಾಂತಿ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Australia to lift ban on citizens returning from Covid-hit India On May 15: Scott Morrison

ಮೇ 15 ರಂದು ಭಾರತದಿಂದ ಬರುವ ಮೊದಲ ವಿಮಾನ ಡಾರ್ವಿನ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದೂ ಅವರು ಹೇಳಿದ್ದಾರೆ.

ಭಾರತದಿಂದ ವಾಪಸ್ಸಾಗುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ. ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಆಸ್ಟ್ರೇಲ್ಪಿಯಾ ಹೇಳಿದೆ.

ನಿಯಮಗಳನ್ನು ಉಲ್ಲಂಘಿಸಿ ಆಸ್ಟ್ರೇಲಿಯಾ ಪ್ರವೇಶಿಸಿದರೆ ಅಂತಹವರಿಗೆ 66,000 ಆಸ್ಟ್ರೇಲಿಯನ್ ಡಾಲರ್ ಗಳ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಸೋಮವಾರದಿಂದ ಈ ತಾತ್ಕಾಲಿಕವಾಗಿ ಜಾರಿಗೆ ಬರಲಿದ್ದು, ಭಾರತಕ್ಕೆ 14 ದಿನಗಳಲ್ಲಿ ಭೇಟಿ ನೀಡಿ, ಆಸ್ಟ್ರೇಲಿಯಾಗೆ ವಾಪಸ್ಸಾಗಬೇಕೆಂದುಕೊಂಡವರಿಗೂ ಈ ಆದೇಶ ಅನ್ವಯವಾಗಲಿದೆ. ಭಾರತದಲ್ಲಿ ಅಂದಾಜು 9,000 ಆಸ್ಟ್ರೇಲಿಯನ್ನರಿದ್ದು, ಈ ಪೈಕಿ 600 ಮಂದಿಯನ್ನು ಕೋವಿಡ್-19 ಸೋಂಕಿಗೆ ದುರ್ಬಲರು ಎಂದು ಗುರುತಿಸಲಾಗಿದೆ

ಶುಕ್ರವಾರದಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆರೋಗ್ಯ ಸಚಿವಾಲಯ ಈ ತಾತ್ಕಾಲಿಕ ನಿಷೇಧದ ನಿರ್ಧಾರವನ್ನು ಪ್ರಕಟಿಸಿದೆ. ಈ ಆದೇಶಕ್ಕೂ ತೀವ್ರ ಟೀಕೆಗಳು ಆಸ್ಟ್ರೇಲಿಯಾದಲ್ಲಿ ವ್ಯಕ್ತವಾಗತೊಡಗಿದ್ದು, ತನ್ನದೇ ನಾಗರಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ ಆಸ್ಟ್ರೇಲಿಯಾ ಸರ್ಕಾರ ಈ ರೀತಿಯ ನಿರ್ಬಂಧ ವಿಧಿಸುವುದು ತಪ್ಪು ಹಾಗೂ ಸರ್ಕಾರಕ್ಕೆ ಕ್ವಾರಂಟೈನ್ ನಲ್ಲಿ ನಂಬಿಕೆ ಇಲ್ಲದಂತಾಗಿದೆ ಎಂಬ ಟೀಕೆ ವ್ಯಕ್ತವಾಗತೊಡಗಿದೆ

English summary
Australia will lift a ban on its citizens returning from Covid-hit India from next Saturday and the first repatriation flight will land in the city of Darwin the same day, Prime Minister Scott Morrison said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X