• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ವರದಿ ಇದೆ ಎಂದ ಅಮೆರಿಕ

|

ಶ್ರೀನಗರ, ಆಗಸ್ಟ್ 30: ಜಮ್ಮು ಕಾಶ್ಮೀರದ ಪ್ರಸ್ತುತ ಸ್ಥಿತಿಯನ್ನು ಅಮೆರಿಕ ಗಮನಿಸುತ್ತಿದ್ದು, ಹಾಗೆಯೇ ಆ ಪ್ರದೇಶದಲ್ಲಿ ನಿರ್ಬಂಧ ಮುಂದುವರೆದಿದ್ದು, ಸಾಕಷ್ಟು ಮಂದಿಯ ಬಂಧನದ ಸುದ್ದಿಯನ್ನು ನಾವು ಕೇಳಿದ್ದೇವೆ ಎಂದು ಅಮೆರಿಕ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿ ಉಳಿದಿದೆ ಎಂದು ಭಾರತ ಒತ್ತಿಹೇಳಿದೆ. ಆದರೂ ಕೂಡ ಅಮೆರಿಕ ಮಾನವ ಹಕ್ಕುಗಳಿಗೆ ಗೌರವ ನೀಡುತ್ತಿದೆ, ಕಾನೂನು ಕಾರ್ಯವಿಧಾನಗಳ ಅನುಸರಣೆ, ಆ ಪ್ರದೇಶದವರೊಂದಿಗೆ ಸಂವಾದ ಹಾಗೂ ಮಾನವ ಹಕ್ಕುಗಳ ಸಮಸ್ಯೆಗಳನ್ನು ಸತತವಾಗಿ ಗಮನಿಸುತ್ತಿದೆ.

ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ: ಅಂಗಡಿ ಮಾಲೀಕನ ಹತ್ಯೆ

ಈಗಾಗಲೇ, ಶೇ.85 ಪೊಲೀಸ್ ಠಾಣೆಗಳು ಯಾವುದೇ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಮತ್ತು 50,000 ಹೊಸ ಉದ್ಯೋಗಗಳ ಸೃಷ್ಟಿ ಬಗ್ಗೆ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ಪಾಕಿಸ್ತಾನಕ್ಕೆ ಪರೋಕ್ಷವಾಗಿ ಅಮೆರಿಕ ವಕ್ತಾರ ಎಚ್ಚರಿಕೆ ನೀಡಿದ್ದಾರೆ. ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಗಟ್ಟುವ ಅಗತ್ಯವನ್ನು ಪುನಃ ಉಚ್ಛರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮತ್ತೆದೇ ರಾಜಕೀಯ ಸ್ಥಿತಿಗೆ ಮರಳಲಿದೆ

ಜಮ್ಮು ಮತ್ತು ಕಾಶ್ಮೀರ ಮತ್ತೆದೇ ರಾಜಕೀಯ ಸ್ಥಿತಿಗೆ ಮರಳಲಿದೆ

ಜಮ್ಮು ಮತ್ತು ಕಾಶ್ಮೀರ ಶೀಘ್ರದಲ್ಲೇ ಸಹಜ ರಾಜಕೀಯ ಸ್ಥಿತಿಗೆ ಮರಳಲಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಕಾಶ್ಮೀರ ಮತ್ತು ಇತರ ಕಾಳಜಿಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಸಂವಾದವನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದರು.

ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!

ಮೂರು ದಿನಗಳ ಶೃಂಗ ಸಭೆಯಲ್ಲಿ ಏನಾಯ್ತು

ಮೂರು ದಿನಗಳ ಶೃಂಗ ಸಭೆಯಲ್ಲಿ ಏನಾಯ್ತು

ಮೂರು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆದ ಜಿ 7 ಶೃಂಗಸಭೆಯ ಹೊರತಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಹಳ ದೀರ್ಘವಾಗಿ ಚರ್ಚಿಸಿದ್ದರು.

ಬೇರೆ ರಾಷ್ಟ್ರಗಳ ಮಧ್ಯಸ್ಥಿಕೆ ತಿರಸ್ಕರಿಸಿದ ಮೋದಿ

ಬೇರೆ ರಾಷ್ಟ್ರಗಳ ಮಧ್ಯಸ್ಥಿಕೆ ತಿರಸ್ಕರಿಸಿದ ಮೋದಿ

ಚರ್ಚೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು 1947 ಕ್ಕಿಂತ ಮೊದಲು ಭಾರತ ಮತ್ತು ಪಾಕಿಸ್ತಾನ ಒಂದಾಗಿತ್ತು ಮತ್ತು ಇಬ್ಬರ ನಡುವಿನ ಎಲ್ಲಾ ಸಮಸ್ಯೆಗಳು ದ್ವಿಪಕ್ಷೀಯವಾಗಿವೆ - ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದರು.

ಭಾರತಕ್ಕೆ ತೆರಳುವ ವಾಯುಮಾರ್ಗ ಮುಚ್ಚಿಲ್ಲ, ವರಸೆ ಬದಲಿಸಿದ ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಸ್ಯೆ ಅನೇಕ

ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಸ್ಯೆ ಅನೇಕ

ಭಾರತ ಮತ್ತು ಪಾಕಿಸ್ತಾನದ ನಡುವೆ ಅನೇಕ ದ್ವಿಪಕ್ಷೀಯ ಸಮಸ್ಯೆಗಳಿವೆ ಮತ್ತು ಯಾವುದೇ ಮೂರನೇ ಮಧ್ಯಸ್ಥಿಕೆ ವಹಿಸಲು ನಾವು ಅನುವು ಮಾಡಿಕೊಡುವುದಿಲ್ಲ, ಈ ಸಮಸ್ಯೆಗಳನ್ನು ನಾವು ದ್ವಿಪಕ್ಷೀಯವಾಗಿ ಚರ್ಚಿಸಬಹುದು ಮತ್ತು ಪರಿಹರಿಸಬಹುದು ಎಂದು ಮೋದಿ ಹೇಳಿದ್ದಾರೆ.

English summary
US Says We Have Complete Reports Of Jammu And Kashmir Present Situation . The US is watching the situation in Jammu and Kashmir and continues to be very concerned by reports of detentions and the continued restrictions on the residents of the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X