• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

|

ಶ್ರೀನಗರ, ಫೆಬ್ರವರಿ 22 : ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ದಕ್ಷಿಣ ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ಶುಕ್ರವಾರ ಹೊಡೆದುರುಳಿಸಲಾಗಿದೆ. ಅವರಿಬ್ಬರ ಗುರುತು ಇನ್ನೂ ಪತ್ತೆ ಹಚ್ಚಬೇಕಾಗಿದೆ.

ಗುಂಡಿನ ಚಕಮಕಿಯಲ್ಲಿ ಭಾರತದ ಭದ್ರತಾ ಸಿಬ್ಬಂದಿಗೆ ಯಾವುದೇ ಪ್ರಾಣ ಹಾನಿಯಾಗಲಿ, ಗಾಯಗಳಾಗಲಿ ಆಗಿಲ್ಲ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಕುಮಾರ್ ಗೋಯಲ್ ಅವರು ತಿಳಿಸಿದ್ದಾರೆ.

ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!

ಪರಿಸ್ಥಿತಿ ಇನ್ನೂ ಉದ್ವಿಘ್ನವಾಗಿದ್ದು, ಸಾರ್ವಜನಿಕರು ಈ ಪ್ರದೇಶದಲ್ಲಿ ಅಡ್ಡಾಡಬಾರದು ಎಂದು ಅವರು ಕೋರಿದ್ದಾರೆ. ಪುಲ್ವಾಮಾದಲ್ಲಿ ಇತ್ತೀಚೆಗೆ ಇಬ್ಬರು ಉಗ್ರರನ್ನು ಹತ್ಯೆಗೈದ ನಂತರ ಇದು ಪ್ರಮುಖ ದಾಳಿಯಾಗಿದೆ.

ಶುಕ್ರವಾರವೇ ಉತ್ತರ ಪ್ರದೇಶದಲ್ಲಿ ಉಗ್ರ ನಿಗ್ರಹ ದಳದ ಅಧಿಕಾರಿಗಳು ಜೈಷ್ ಇ ಮೊಹಮ್ಮದ್ ಸಂಘಟನೆಯ ಶಹನವಾಜ್ ಅಹ್ಮದ್ ಮತ್ತು ಆಕಿಬ್ ಅಹ್ಮದ್ ಮಲಿಕ್ ಎಂಬುವವರನ್ನು ಬಂಧಿಸಿದ್ದಾರೆ. ಶಹನವಾಜ್ ಕುಲ್ಗಾಂನವನಾದರೆ, ಮಲಿಕ್ ಪುಲ್ವಾಮಾದವನು ಎಂದು ಗುರುತಿಸಲಾಗಿದೆ.

ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್

ಪುಲ್ವಾಮಾ ಭಯೋತ್ಪಾದಕ ದಾಳಿಯ ರೂವಾರಿ, ಜೈಷ್-ಎ-ಮೊಹಮ್ಮದ್ ಮುಖಂಡ ಮಸೂದ್ ಅಜರ್ ನ ಬಲಗೈ ಬಂಟ ಕಮ್ರನ್ ಮತ್ತೊಬ್ಬನನ್ನು ಹತ್ಯೆಗೈದ ನಂತರ ಇದು ಭಾರತೀಯ ಸೈನಿಕರು ನಡೆಸಿದ ಪ್ರಮುಖ ದಾಳಿಯಾಗಿದೆ. ಫೆಬ್ರವರಿ 14ರಂದು ಪುಲ್ವಾಮಾ ಬಳಿ ನಡೆದಿದ್ದ ಭಯೋತ್ಪಾದಕ ಆತ್ಮಹತ್ಯಾ ದಾಳಿಯಲ್ಲಿ ಸಿಆರ್ ಪಿಎಫ್ ನ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು.

English summary
Two top terrorists of Jaish-e-Mohammed were eliminated. There was no collateral damage & no injuries to security personnel. Identities yet to be ascertained. The public is requested not to venture into the operational area until it is sanitised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X