ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: ಐವರಿಗೆ ಗಂಭೀರ ಗಾಯ
ಶ್ರೀನಗರ, ಮೇ 5: ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ನಡೆದಿದ್ದು, ಸಿಆರ್‌ಪಿಎಫ್ ಯೋಧರು ,ಪೊಲೀಸರು ಸೇರಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಬುಡ್ಗಾಮ್‌ನಲ್ಲಿ ಉಗ್ರರು ಮಂಗಳವಾರ ದಾಳಿ ನಡೆಸಿದ್ದರು. ಭದ್ರತಾ ಸಿಬ್ಬಂದಿಗಳಿದ್ದ ಬಸ್ ಬಳಿ ದಾಳಿ ನಡೆದಿದೆ.
ಮಾರುಕಟ್ಟೆಯಲ್ಲಿ ಕರ್ತವ್ಯ ನಿರತರಾದ ಭದ್ರತಾ ಪಡೆಯ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದರು. ಆದರೆ ಗುರಿ ತಪ್ಪಿದ ಗ್ರೆನೇಡ್ ದೂರದಲ್ಲಿ ಸ್ಫೋಟಗೊಂಡಿತ್ತು.

ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಸೋಮವಾರ ನಡೆದ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ ಮೂವರು ಯೋಧರು ಹಾಗೂ ನಾಗರಿಕರೊಬ್ಬರು ಹುತ್ಮಾತರಾಗಿದ್ದರು. ಇದಾದ ಬೆನ್ನಲ್ಲೇ ಗ್ರೆನೇಡ್ ದಾಳಿ ಮುಂದುವರಿದಿದೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications