JKPM ತೊರೆದ ಷಾ ಫಸಲ್ ಮತ್ತೆ ಸರ್ಕಾರಿ ಹುದ್ದೆಗೆ?

ಶ್ರೀನಗರ, ಆ. 9: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ರೂಪವಾಗಿ ಐಎಎಸ್ ಹುದ್ದೆ ತೊರೆದು ರಾಜಕಾರಣಿಯಾಗಿದ್ದ ಷಾ ಫಸಲ್ ಈಗ ರಾಜಕೀಯ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮತ್ತೆ ಸರ್ಕಾರಿ ಹುದ್ದೆ ಸೇರುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್(JKPM)ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಸ್ವವಿವರದಲ್ಲಿ ಈ ಹುದ್ದೆ ಬಗ್ಗೆ ಈಗ ಮಾಹಿತಿ ಇಲ್ಲ. Edward S Fellow @HKS Harvard University, Medico. Fulbright. Centrist ಎಂದು ಮಾತ್ರ ಬರೆದುಕೊಂಡಿದ್ದಾರೆ.

''ದೇಶದಲ್ಲಿರುವ 20 ಕೋಟಿಗೂ ಅಧಿಕ ಮುಸ್ಲಿಮರು ತಲೆ ಎತ್ತಿ ಬಾಳುವಂಥ ಪರಿಸ್ಥಿತಿ ನಿರ್ಮಿಸಬೇಕಿದೆ. ಬಹುಸಂಖ್ಯಾತರ ದಬ್ಬಾಳಿಕೆಯಿಂದ ಮುಸ್ಲಿಮರು ಎರಡನೇ ದರ್ಜೆ ನಾಗರಿಕರಾಗಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ಖಂಡಿಸಿ ನಾನು ರಾಜೀನಾಮೆ ನೀಡಿದೆ'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Shah Faesal drops ‘JKPM president’ from his Twitter bio, likely to rejoin administration

2010ನೇ ಸಾಲಿನ ಐಎಎಸ್ ಅಧಿಕಾರಿ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿಯಾಗಿದ್ದಾರೆ. ಕೇಂದ್ರದ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆಯನ್ನು 2018ರಲ್ಲಿ ತ್ಯಜಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+