2001ರ ನಂತರ ಭೀಕರ ಆತ್ಮಾಹುತಿ ದಾಳಿಗೆ ತುತ್ತಾದ ಪುಲ್ವಾಮಾ

ಶ್ರೀನಗರ, ಫೆಬ್ರವರಿ 14: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರ್ ಪ್ರದೇಶದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ. 40ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸೌಧದ ಮೇಲೆ ಉಗ್ರರು ನಡೆಸಿದ್ದ ದಾಳಿಯ ನಂತರ ಇದು ಅತಿದೊಡ್ಡ ಉಗ್ರರ ಆತ್ಮಾಹುತಿ ದಾಳಿ ಎನ್ನಬಹುದು.

78 ಬಸ್ ಗಳಿದ್ದ 2547ಕ್ಕೂ ಅಧಿಕ ಯೋಧರು ಶ್ರೀನಗರದ ಆವಂತಿಪೊರ್​- ಪುಲ್ವಾಮ್​ಮಾರ್ಗ ಮಧ್ಯೆ ಹೋಗುವಾಗ ಸ್ಕಾರ್ಪಿಯೋ ಕಾರು ಅಡ್ಡವಾಗಿ ಬಂದು ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ.

Pulwama suicide strike worst since 2001 J&K legislative assembly fidayeen bombing

ಆತ್ಮಾಹುತಿಯಾದವನನ್ನು ಜೈಶ್ ಎ ಮೊಹಮ್ಮದ್ ಸಂಘಟನೆಯ ಆದಿಲ್ ಆಹ್ಮದ್ ದಾರ್ ಅಲಿಯಾಸ್ ವಾಖಾಸ್ ಕಮ್ಯಾಂಡೋ ಎಂದು ಗುರುತಿಸಲಾಗಿದೆ. ಸುಧಾರಿತ ಎಲ್ ಇಡಿ ಬಳಸಿ ಕಾರು ಜತೆ ತಾನು ಸ್ಫೋಟಗೊಂಡಿದ್ದಾನೆ.

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಆದಿಲ್ ತನ್ನ ಜತೆ 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಹೊಂದಿದ್ದ ಎಂಬ ಮಾಹಿತಿಯಿದೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕಟ್ಟಡಕ್ಕೆ ಕಾರನ್ನು ನುಗ್ಗಿಸಲಾಗಿತ್ತು. ಈ ಕಾರ್ ಬಾಂಬ್​ಸ್ಫೋಟದಲ್ಲಿ ಸುಮಾರು 38 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಇದಾದ ಬಳಿಕ 2004ರಲ್ಲಿ 28 ಬಿಎಸ್​ಎಫ್ ಯೋಧರು ಹಾಗೂ 2016 ರಲ್ಲಿ 19 ಯೋಧರು ಹಾಗೂ ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+