ಲಡಾಕ್‌ನಲ್ಲಿ ಸೈನಿಕರೊಂದಿಗೆ ಸಮಯ ಕಳೆದ ಲೆ.ಕರ್ನಲ್ ಧೋನಿ
ಲಡಾಕ್, ಆಗಸ್ಟ್ 15: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಗುರುವಾರ ಲಡಾಕ್‌ನಲ್ಲಿ ಸೈನಿಕರ ಜತೆ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.
ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಾನ್ವಿತ ಹುದ್ದೆ ಹೊಂದಿರುವ ಧೋನಿ, ಬುಧವಾರ ಲಡಾಕ್‌ಗೆ ಪ್ಯಾರಾಚೂಟ್ ರೆಜಿಮೆಂಟ್ ಸೈನಿಕರ ಜತೆ ತಲುಪಿದ್ದರು. ಲಡಾಕ್‌ನ ಸೇನಾ ಆಸ್ಪತ್ರೆಯಲ್ಲಿ ಯೋಧರೊಂದಿಗೆ ಹರಟುವ ಮೂಲಕ ಅವರು ಸಮಯ ಕಳೆದರು. ಸೈನಿಕರೊಂದಿಗೆ ಬೆರೆತ ಅವರ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಧೋನಿ ಸಿಯಾಚಿನ್ ನೆಲೆಯಲ್ಲಿರುವ ಸೇನಾ ಘಟಕಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಸಿಯಾಚಿನ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸಲಿದ್ದಾರೆ.

''ಧೋನಿ ಅವರು ಭಾರತೀಯ ಸೇನೆಯ ರಾಯಭಾರಿ. ಅವರು ತಮ್ಮ ಘಟಕದ ಸದಸ್ಯರಲ್ಲಿ ಉತ್ತೇಜನ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ. ಜತೆಗೆ ಸೈನಿಕರೊಂದಿಗೆ ವಾಲಿಬಾಲ್, ಫುಟ್‌ಬಾಲ್ ಕ್ರೀಡೆ ಆಡಿದ್ದಾರೆ. ಇದರ ಜತೆಗೆ ಅವರು ಸೈನಿಕರೊಂದಿಗೆ ಯುದ್ಧ ತರಬೇತಿ ಅಭ್ಯಾಸಗಳನ್ನೂ ನಡೆಸಿದ್ದಾರೆ'' ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವು ದಿನಗಳಿಂದ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ, ಗಸ್ತು ತಿರುಗುವುದು, ಕಾವಲು ಕಾಯುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications