ಪುಲ್ವಾಮಾ ಮಾದರಿಯ ಮತ್ತೊಂದು ದಾಳಿ ತಡೆದ ಸೇನಾ ಪಡೆ: 52 ಕೆ.ಜಿ. ಸ್ಫೋಟಕ ವಶ
ಶ್ರೀನಗರ, ಸೆಪ್ಟೆಂಬರ್ 18: ಪುಲ್ವಾಮಾ ಮಾದರಿಯ ಸಂಭವನೀಯ ದಾಳಿಯೊಂದನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಕಲ್‌ನ ಕರೇವಾ ಪ್ರದೇಶದಲ್ಲಿ ಸಿಂಟೆಕ್ಸ್ ಟ್ಯಾಂಕ್ ಒಂದರಲ್ಲಿ ಸುಮಾರು 52 ಕೆಜಿ ತೂಕದ ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಗಳನ್ನು ಆಧರಿಸಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಕರೇವಾದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ 42 ರಾಷ್ಟ್ರೀಯ ರೈಫಲ್ಸ್, ಸಿಂಟೆಕ್ಸ್ ಟ್ಯಾಂಕ್ ಒಂದರಲ್ಲಿ ಭರ್ತಿ ಮಾಡಲಾಗಿದ್ದ 52 ಕೆಜಿ ತೂಕದಷ್ಟು 416 ಪ್ಯಾಕೆಟ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ಪ್ಯಾಕೆಟ್ 125 ಗ್ರಾಂ ತೂಗುತ್ತಿತ್ತು.
ಮತ್ತಷ್ಟು ಪರಿಶೀಲನೆ ನಡೆಸಿದ ಸೇನಾ ಪಡೆ, ಕರೇವಾದಲ್ಲಿ ಮತ್ತೊಂದು ಸಿಂಟೆಕ್ಸ್ ಟ್ಯಾಂಕ್‌ನಿಂದ 50 ಡೆಟೊನೇಟರ್ಸ್‌ಗಳನ್ನು ಸಹ ವಶಪಡಿಸಿಕೊಂಡಿದೆ. ಲೆಟಪೊರಾದ ಆಗ್ನೇಯ ದಿಕ್ಕಿನಿಂದ 9 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಸಮೀಪವೇ ಈ ಸ್ಫೋಟಗಳು ಪತ್ತೆಯಾಗಿವೆ. ಪುಲ್ವಾಮಾ ದಾಳಿ ನಡೆದ ಸ್ಥಳ ಕೂಡ ಹೆಚ್ಚು ದೂರವಿಲ್ಲ.

ಕಳೆದ ವರ್ಷದ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಕರೆಯುತ್ತಿದ್ದ ಸೇನಾ ವಾಹನದ ಮೇಲೆ ಪುಲ್ವಾಮಾ ಜಿಲ್ಲೆಯ ಆವಂತಿಪೊರದ ಗೋರಿಪುರ ಪ್ರದೇಶದಲ್ಲಿ ಆತ್ಮಾಹುತಿ ವಾಹನ ಬಾಂಬ್ ದಾಳಿ ನಡೆಸಲಾಗಿತ್ತು. ಇದರಿಂದ 40 ಯೋಧರು ಮೃತಪಟ್ಟಿದ್ದರು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.












Click it and Unblock the Notifications