• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಲ್ವಾನ್ ಸಂಘರ್ಷ: ಗಾಯಗೊಂಡಿದ್ದ 4 ಸೈನಿಕರ ಸ್ಥಿತಿ ಹೇಗಿದೆ?

|

ಲಡಾಕ್, ಜೂನ್ 17: ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ಭಾರತೀಯ ಯೋಧರ ಆರೋಗ್ಯ ಸ್ಥಿತಿ ಬಗ್ಗೆ ಇದೀಗ ಅಪ್ಡೇಟ್ ಸಿಕ್ಕಿದೆ.

ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮಾತುಕತೆ ನಡೆದಿರುವ ವೇಳೆಗೆ ಚೀನಾದ ಸೇನೆಯು ಗಡಿ ದಾಟಿ ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಜೂನ್ 15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಸಂಘರ್ಷ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿತ್ತು.ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 43 ಮಂದಿ ಚೀನಾ ಯೋಧರು ಮೃತಪಟ್ಟಿರುವುದು ವರದಿಯಾಗಿದೆ.

ಕಣಿವೆ ಕದನ: ಗುಲಾಂ ರಸೂಲ್ ಗಾಲ್ವಾನ್ ಯಾರು?

ಹಿಂಸಾತ್ಮಕ ಚಕಮಕಿಯಲ್ಲಿ ನಾಲ್ವರು ಭಾರತೀಯ ಯೋಧರು ತೀವ್ರವಾಗಿ ಗಾಯಗೊಂಡಿದ್ದರು ಎಂದು ಬೆಳಗ್ಗೆ ಎಎನ್ಐ ವರದಿ ಮಾಡಿತ್ತು. ಈಗ ಈ ಬಗ್ಗೆ ಅಪ್ಡೇಟ್ ನೀಡಿರುವ ಭಾರತೀಯ ಸೇನೆಯ ಎಡಿಜಿಪಿ, ನಾಲ್ವರು ಕೂಡಾ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ್ದು, ನಾಲ್ವರು ಕೂಡಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿಸಿದ್ದಾರೆ.

ಕಬ್ಬಿಣದ ಸರಳುಗಳು ಸುತ್ತಿರುವ ಆಯುಧ ಮತ್ತು ಕಲ್ಲುಗಳಿಂದ ಈ ದಾಳಿಯಾಗಿದ್ದು, ಈ ಘರ್ಷಣೆಯಲ್ಲಿ ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ. 1962ರ ಭಾರತ-ಚೀನಾ ಯುದ್ಧದ ನಂತರದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 1975ರ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ ರಕ್ತಪಾತ ಕಂಡು ಬಂದಿದೆ.

English summary
4 Critically Injured Soldiers Now Stable | "Four soldiers, who were critically injured in the Galwan Valley clash with Chinese troops, are now stable," the Additional Directorate General of Public Information, Army said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X