ಬುಧ ಸಂಕ್ರಮಣದಿಂದ ಐದು ರಾಶಿಯವರ ಸುವರ್ಣ ಯುಗ ಆರಂಭ: ಹೆಚ್ಚಾಗುವುದು ಧನ ಸಂಪತ್ತು

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬುದ್ಧಿವಂತಿಕೆ, ಮಾತು, ವ್ಯವಹಾರ, ಮತ್ತು ತರ್ಕದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಸಂಕ್ರಮಣವಾದಾಗ ಅದರ ಪರಿಣಾಮ ಎಲ್ಲಾ 12 ರಾಶಿಯವರ ಜಾತಕಫಲದ ಮೇಲೆ ನೇರವಾಗಿ ಬೀರುತ್ತದೆ. ಇದೀಗ ಬುಧನ ಚಲನೆ ಬದಲಾಗಿದೆ. ಅಂದರೆ ಬುಧ ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಮೂಲಕ ಎಲ್ಲಾ ರಾಶಿಯವರ ಮೇಲೂ ತನ್ನ ಪ್ರಭಾವ ಬೀರುತ್ತಿದ್ದಾನೆ. ಬುಧ ಸಂಕ್ರಮಣ ಐದು ರಾಶಿಯವರ ಜೀವನದಲ್ಲಿ ಸುವರ್ಣ ಸಮಯವನ್ನು ತರುತ್ತಿದೆ.

ಖ್ಯಾತ ಜ್ಯೋತಿಷಿ ದಯಾನಂದ ಶಾಸ್ತ್ರಿ ಅವರ ಪ್ರಕಾರ, ಏಪ್ರಿಲ್ 11, 2026 ರಂದು ಬುಧ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಕಾಲಿಟಿದ್ದಾನೆ. ಏಪ್ರಿಲ್ 30 ರವರೆಗೆ ಅಂದರೆ ನಾಳೆಯವರೆಗೆ ಇದೇ ರಾಶಿಯಲ್ಲಿ ಬುಧನ ಸಂಚಾರ ನಡೆಯುತ್ತದೆ. ಬುಧನ ಈ ಸಂಕ್ರಮಣದ ಶುಭ ಪ್ರಭಾವವು ಐದು ರಾಶಿಯವರು ಅಂದರೆ ವೃಷಭ, ಮಕರ, ಕುಂಭ, ಧನು ಮತ್ತು ಮೀನ ರಾಶಿಯವರ ಮೇಲೆ ಮೇ 20 ರವರೆಗೆ ಇರುತ್ತದೆ. ಈ ರಾಶಿಯವರು ತಮ್ಮ ವೃತ್ತಿ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುವರು.

Mercury Transit 2026

ಬುಧ ಗೋಚರ 2026 ರ ಪರಿಣಾಮ:

ವೃಷಭ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗುವುದು. ಹೊಸ ಜವಾಬ್ದಾರಿಗಳು ಹೆಗಲೇರುವುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ನಿಮ್ಮ ಸಂವಹನ ಕೌಶಲ್ಯದ ಮೂಲಕವೇ ದೊಡ್ಡ ಮಟ್ಟದ ಪ್ರಯೋಜನವಾಗುವುದು.

ಮಕರ ರಾಶಿ: ವೃತ್ತಿಜೀವನ ಹೊಸ ದಿಕ್ಕಿನತ್ತ ಸಾಗುವುದು. ಉದ್ಯೋಗದಲ್ಲಿ ಪ್ರಗತಿಯಾಗುವುದು. ಹೊಸ ಉದ್ಯೋಗಾವಕಾಶಗಳು ಸಿಗುವುದು. ನೀವು ಮಾಡುವ ಕೆಲಸಕ್ಕೆ ಎಲ್ಲರ ಮೆಚ್ಚುಗೆ ಸಿಗುವುದು.

ಕುಂಭ ರಾಶಿ: ಬುಧ ಸಂಚಾರವು ಕುಂಭ ರಾಶಿಯವರಿಗೆ ಮಾನಸಿಕ ಸ್ಪಷ್ಟತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನೀಡುತ್ತದೆ. ಕೈಗೊಳ್ಳುವ ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ಧನು ರಾಶಿ: ಇದು ನಿಮ್ಮ ಪಾಲಿಗೆ ಅದೃಷ್ಟದ ಸಮಯ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಅವಕಾಶಗಳು ಒಲಿದು ಬರಬಹುದು.

ಮೀನ ರಾಶಿ: ಈ ಸಮಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಈ ನಿರ್ಧಾರ ನಿಮ್ಮ ಯಶಸ್ಸಿಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು.

ಬುಧ ಗ್ರಹದ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು?:

ಜಾತಕದಲ್ಲಿ ಬುಧ ಬಲ ಹೆಚ್ಚಾಗಬೇಕಾದರೆ ಬುಧವಾರದಂದು ಗಣೇಶನನ್ನು ಪೂಜಿಸಬೇಕು. ಸಾಧ್ಯವಾದರೆ, ಓಂ ಬಂ ಬುಧಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿಬೇಕು. ಬುಧವಾರ ಹಸಿರು ಬಟ್ಟೆಗಳನ್ನು ಧರಿಸುವುದು ಶುಭ. ಹೆಸರುಕಾಳು ಅಥವಾ ಹಸಿರು ತರಕಾರಿಗಳನ್ನು ಬಡವರಿಗೆ ದಾನ ಮಾಡಬೇಕು. ಸರಿಯಾದ ದಿಕ್ಕಿನಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿಕೊಂಡು ಈ ಪರಿಹಾರ ಮಾರ್ಗಗಳನ್ನು ಅನುಸರಿಸಿದರೆ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+