Daali Dhananjay: ನಮ್ಮ ಪ್ರಪಂಚ ದೊಡ್ಡದಾಗುತ್ತಿದೆ: ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟ ಡಾಲಿ ಧನಂಜಯ್-ಧನ್ಯತಾ ಜೋಡಿ
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ದಂಪತಿ ಶೀಘ್ರದಲ್ಲೇ ಅಪ್ಪ-ಅಮ್ಮನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ, ಈಗ ತಮ್ಮ ಸುಂದರವಾದ ಬೇಬಿ ಬಂಪ್ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಪ್ರಕೃತಿಯ ಮಡಿಲಲ್ಲಿ ಮುದ್ದಾದ ಫೋಟೋಶೂಟ್
ಇತ್ತೀಚೆಗಷ್ಟೇ ತಂದೆಯಾಗುತ್ತಿರುವ ವಿಷಯವನ್ನು ತಿಳಿಸಿದ್ದ ಧನಂಜಯ್, ಅಂದಿನಿಂದ ಯಾವುದೇ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ. ಆದರೆ ಈಗ ಮೊದಲ ಬಾರಿಗೆ ಧನಂಜಯ್ ಮತ್ತು ಧನ್ಯತಾ ಅವರು ಪ್ರಕೃತಿಯ ಮಡಿಲಿನಲ್ಲಿ ಮಾಡಿಸಿರುವ ಆಕರ್ಷಕ ಫೋಟೋಶೂಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಮಾಡಿದ್ದಾರೆ. ಈ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿರುವ ದಂಪತಿ, "ನಮ್ಮ ಪ್ರಪಂಚ ದೊಡ್ಡದಾಗುತ್ತಿದೆ" ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಖುಷಿಯ ಕಡಲಲ್ಲಿ 'ಡಾಲಿ' ದಂಪತಿ
ಫೋಟೋಗಳಲ್ಲಿ ಧನ್ಯತಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣುತ್ತಿದ್ದು, ಧನಂಜಯ್ ಅವರು ತಂದೆಯಾಗುವ ಉತ್ಸಾಹದಲ್ಲಿದ್ದಾರೆ. ಈ ದಂಪತಿಯ ಮುಖದಲ್ಲಿನ ಮಂದಹಾಸ ಮತ್ತು ಪ್ರಕೃತಿಯ ಸೌಂದರ್ಯದ ನಡುವಿನ ಈ ಚಿತ್ರಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗೆಳೆಯರು ಈ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಟಗರು, ಹೆಡ್‌ಬುಷ್ ಸೇರಿದಂತೆ ಸಾಲು ಸಾಲು ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹಾಗೂ ಪುಷ್ಪ ಸಿನಿಮಾ ಮೂಲಕ ಟಾಲಿವುಡ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ನಟ ಡಾಲಿ ಧನಂಜಯ್ ಅವರು ಡಾ.ಧನ್ಯತಾ ಅವರೊಂದಿಗೆ 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಅದ್ಧೂರಿ ಮದುವೆ ಮತ್ತು ಆರತಕ್ಷತೆ ಸಮಾರಂಭದಲ್ಲಿ ಸಿನಿಮಾರಂಗದ ದಿಗ್ಗಜರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು. ಈ ದಂಪತಿ ಈಗ ತಮ್ಮ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರೆ.
ನಟ ಡಾಲಿ ಧನಂಜಯ್ ಅವರು ವಿವಾಹವಾಗಿರುವ ಡಾ. ಧನ್ಯತಾ ಅವರು ಮೂಲತಃ ಚಿತ್ರದುರ್ಗದವರು. ಧನಂಜಯ್ ಮತ್ತು ಧನ್ಯತಾ ಅವರು ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯವಿದ್ದು, ಉತ್ತಮ ಸ್ನೇಹಿತರಾಗಿದ್ದರು. ಕಾಲಕ್ರಮೇಣ ಈ ಸ್ನೇಹವು ಪ್ರೀತಿಗೆ ತಿರುಗಿ, ಇಬ್ಬರೂ ಪರಸ್ಪರ ಇಷ್ಟಪಟ್ಟಿದ್ದರು. ಇವರ ಪ್ರೀತಿಗೆ ಎರಡೂ ಕುಟುಂಬದ ಪೋಷಕರು ಕೂಡ ಸಮ್ಮತಿ ಸೂಚಿಸಿ, ಹಸಿರು ನಿಶಾನೆ ತೋರಿಸಿದ್ದರು. ಪೋಷಕರ ಒಪ್ಪಿಗೆಯ ಮೇರೆಗೆ ಈ ಜೋಡಿಯು ಮೈಸೂರಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಸದ್ಯ ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications