India
  • search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರ್ವ ಲಡಾಖ್‌ನಲ್ಲಿ ಹತ್ತಾರು ಚೀನಾ ಮಿಲಿಟರಿ ವಿಮಾನಗಳ ಹಾರಾಟ

|
Google Oneindia Kannada News

ನವದೆಹಲಿ, ಜೂನ್ 08: ಪೂರ್ವ ಲಡಾಖ್‌ನಲ್ಲಿ ಹತ್ತಾರು ಚೀನಾ ಮಿಲಿಟರಿ ವಿಮಾನಗಳು ಹಾರಾಟ ನಡೆಸಿರುವುದನ್ನು ಭಾರತೀಯ ಸೇನೆ ವೀಕ್ಷಿಸಿದೆ.

ಜೆ-11ಎಸ್ ಮತ್ತು ಕೆಲವು ಜೆ-16 ಯುದ್ಧ ವಿಮಾನಗಳು ಸೇರಿದಂತೆ ಸುಮಾರು 21 ರಿಂದ 22 ಚೀನಾದ ಯುದ್ಧ ವಿಮಾನಗಳು ಪೂರ್ವ ಲಡಾಖ್‌ನಲ್ಲಿ ಭಾರತದ ಗಡಿಗೆ ಎದುರಿಗೆ ಹಾರಾಟ ನಡೆಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತದೊಂದಿಗೆ ಶೇಕಡಾ 71ರಷ್ಟು ವಹಿವಾಟು ಹೆಚ್ಚಳ: ಚೀನಾ ಕಸ್ಟಮ್ಸ್ ಅಂಕಿಅಂಶ ಉಲ್ಲೇಖಭಾರತದೊಂದಿಗೆ ಶೇಕಡಾ 71ರಷ್ಟು ವಹಿವಾಟು ಹೆಚ್ಚಳ: ಚೀನಾ ಕಸ್ಟಮ್ಸ್ ಅಂಕಿಅಂಶ ಉಲ್ಲೇಖ

ಕಳೆದ ಒಂದು ವರ್ಷದಿಂದ ಪೂರ್ವ ಲಡಾಖ್‌ನಲ್ಲಿ ಗಡಿಗೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತದ ನಡುವೆ ಭಿನ್ನಾಭಿಪ್ರಾಯಗಳಿವೆ. ಉಭಯ ರಾಷ್ಟ್ರಗಳ ನಾಯಕರು ಒಂದೆಡೆ ಕುಳಿತು ಚರ್ಚೆ ನಡೆಸಿದ್ದರೂ ಕೂಡ ಹಲವು ಬಾರಿ ಚೀನಾವು ಒಪ್ಪಂದವನ್ನು ಮೀರಿ ತನ್ನ ದುರ್ಬುದ್ಧಿ ತೋರಿಸಿತ್ತು.

 ಚೀನಾ ವಿಮಾನಗಳ ಚಟುವಟಿಕೆ ಹೆಚ್ಚಳ

ಚೀನಾ ವಿಮಾನಗಳ ಚಟುವಟಿಕೆ ಹೆಚ್ಚಳ

ಲಡಾಖ್‌ನಲ್ಲಿ ಕಳೆದ ವರ್ಷದಿಂದಲೂ ಚೀನಾ ಯುದ್ಧ ವಿಮಾನಗಳ ಚಟುವಟಿಕೆಯೂ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿದೆ. ಪಾಂಗಾಂಗ್ ಸರೋವರ ಪ್ರದೇಶದಿಂದ ತನ್ನ ಸೇನೆಯನ್ನು ಚೀನಾ ಹಿಂತೆಗೆದುಕೊಂಡಿದ್ದರೂ, ವಿಮಾನಗಳನ್ನು ಧೀರ್ಘ ವ್ಯಾಪ್ತಿಯವರೆಗೂ ಗುರಿಯಾಗಿಸಬಲ್ಲಾ ಹೆಚ್ ಕ್ಯೂ-9 ಮತ್ತು ಹೆಚ್ ಕ್ಯೂ-16 ಸೇರಿದಂತೆ ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಅವರು ಹಿಂಪಡೆದಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ.

 ಭಾರತದ ಜತೆ ಚೀನಾ ಸಂಘರ್ಷ

ಭಾರತದ ಜತೆ ಚೀನಾ ಸಂಘರ್ಷ

ಸುಮಾರು ಒಂದು ವರ್ಷದಿಂದಲೂ ಭಾರತ ಹಾಗೂ ಚೀನಾ ಮಿಲಿಟರಿ ವಿವಾದವೇರ್ಪಟ್ಟಿರುವಂತೆಯೇ ಇದೀಗ, ಚೀನಾದ ವಾಯುಪಡೆ ಇತ್ತೀಚಿಗೆ ಪೂರ್ವ ಲಡಾಖ್ ನಲ್ಲಿ ದೊಡ್ಡ ವೈಮಾನಿಕ ಪ್ರದರ್ಶನ ನಡೆಸಿವೆ. ಇದನ್ನು ಭಾರತೀಯ ಸೇನೆ ಹತ್ತಿರದಿಂದ ವೀಕ್ಷಿಸಿದೆ.

 ಚೀನಾ ಮಿಲಿಟರಿ ಕಾರ್ಯಾಚರಣೆ

ಚೀನಾ ಮಿಲಿಟರಿ ಕಾರ್ಯಾಚರಣೆ

ಇತ್ತೀಚಿಗೆ ಈ ಕಾರ್ಯಾಚರಣೆ ನಡೆದಿದ್ದು, ಭಾರತೀಯ ಸೇನೆ ಹತ್ತಿರದಿಂದ ಅವುಗಳನ್ನು ವೀಕ್ಷಿಸಿವೆ. ಎಲ್ಲಾ ವಿಧದ ಯುದ್ಧದ ಕಾರ್ಯಾಚರಣೆಗೆ ಸಮರ್ಥ ರೀತಿಯಲ್ಲಿ ಇತ್ತೀಚಿಗೆ ಆಧುನೀಕರಿಸಿರುವ ಹೊಟಾನ್, ಗರ್ ಗುನ್ಸಾ ಮತ್ತು ಕಾಸ್ಘರ್ ವಾಯುನೆಲೆ ಸೇರಿದಂತೆ ತನ್ನ ವಾಯುನೆಲೆಗಳಲ್ಲಿ ಚೀನಾದ ಯುದ್ಧ ವಿಮಾನಗಳು ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿವೆ.

 ಚೀನಾ ವಿಮಾನಗಳ ಕಾರ್ಯಾಚರಣೆ ಎಲ್ಲೆಲ್ಲಿ?

ಚೀನಾ ವಿಮಾನಗಳ ಕಾರ್ಯಾಚರಣೆ ಎಲ್ಲೆಲ್ಲಿ?

ಕ್ಸಿನ್ಜಿಯಾಂಗ್ ಮತ್ತು ಟಿಬೆಟ್ ಪ್ರದೇಶದ ಪಂಗಟ್ ಮತ್ತು ಹೂಟನ್ ಗರ್ ಗುನ್ಸಾ, ಕಾಸ್ಘರ್, ಹೊಪ್ಪಿಂಗ್, ಡಿಜಾಂಗ್, ಲಿಂಝಿ ವಾಯುನೆಲೆ ಸೇರಿದಂತೆ ಚೀನಾದ ವಾಯುಪಡೆಯ ಚಟುವಟಿಕೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿದೆ.

English summary
With India and China engaged in a military standoff for more than a year now, the Chinese Air Force recently carried out a big aerial exercise from its airbases opposite Eastern Ladakh which was watched closely by the Indian side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X