ಬಸ್ ಉರುಳಿ ಬಿದ್ದು 7 ಮಂದಿ ಸಾವು, 24 ಮಂದಿಗೆ ಗಂಭೀರ ಗಾಯ
ಶ್ರೀನಗರ, ಜನವರಿ.02: ಕಣಿವೆಯ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಬಸ್ ದುರಂತ ಸಂಭವಿಸಿದೆ. ಬಸ್ ಅಪಘಾತದಲ್ಲಿ 7 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಹೌದು, ರಜೌರಿ ಜಿಲ್ಲೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಸಿಯೋಟ್-ಲಂಬಾರಿ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ 7 ಮಂದಿ ಪ್ರಯಾಣಿಕರು ಸಾವಿನ ಮನೆ ಸೇರಿದ್ದರೆ, 24ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು, ಬಸ್ ನಲ್ಲಿದ್ದ 24ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಮ್ಮುವಿನಲ್ಲಿರುವ ಜಿಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications