Amarnath Yatra 2022; ಜೂನ್ 30ರಿಂದ ಅಮರನಾಥ ಯಾತ್ರೆ ಆರಂಭ

ಶ್ರೀನಗರ, ಮಾರ್ಚ್ 27; ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ಜೂನ್ 30ರಂದು ಚಾಲನೆ ದೊರೆಯಲಿದೆ. ಈ ವರ್ಷದ ತೀರ್ಥಯಾತ್ರೆ ಒಟ್ಟು 43 ದಿನಗಳ ಕಾಲ ನಡೆಯಲಿದೆ.

ಭಾನುವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌವರ್ನರ್ ಮನೋಜ್ ನಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ 2022ನೇ ಸಾಲಿನ ಅಮರನಾಥ ಯಾತ್ರೆ ದಿನಾಂಕ ನಿಗದಿ ಮಾಡಲಾಗಿದೆ.

"ಕೋವಿಡ್ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅಮರನಾಥ ಯಾತ್ರೆಯು ಜೂನ್ 30ರಂದು ಆರಂಭಗೊಂಡು ಸಂಪ್ರದಾಯದಂತೆ ರಕ್ಷಾ ಬಂಧನದ ದಿನ ಮುಕ್ತಾಯಗೊಳ್ಳುತ್ತದೆ" ಎಂದು ಸಭೆಯ ಬಳಿಕ ಮನೋನ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

Amarnath Yatra 2022 To Begin On June 30

2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೆಲವು ದಿನಗಳ ಮೊದಲು ಅಮರನಾಥ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡನೆ ಮಾಡಲಾಯಿತು.

ನಂತರದ 2 ವರ್ಷ ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಕೇವಲ ಸಾಂಪ್ರದಾಯಿಕವಾಗಿ ಮಾತ್ರ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಯಾವುದೇ ಅಡ್ಡಿ ಇಲ್ಲದೇ ಜನರು ಅಮರನಾಥ ಯಾತ್ರೆ ಮಾಡಲು ಅವಕಾಶ ಮಾಡಿಕೊಡಲು ತಯಾರಿ ನಡೆಯುತ್ತಿದೆ.

2000ನೇ ಇಸವಿಯಲ್ಲಿ ಶ್ರೀ ಅಮರನಾಥಜಿ ಆಡಳಿತ ಮಂಡಳಿ ರಚನೆ ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಇದರ ಮುಖ್ಯಸ್ಥರು. ಈಗ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌವರ್ನರ್ ಇದರ ಮುಖ್ಯಸ್ಥರಾಗಿದ್ದಾರೆ. ಭಾನುವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೇ ದಿನಾಂಕ ನಿಗದಿ ಮಾಡಲಾಗಿದೆ.

ಪ್ರತಿ ವರ್ಷ ಅಮರನಾಥ ಯಾತ್ರೆ ಮಾಡಬೇಕು ಎಂದು ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ. ಕೊರೆಯುವ ಚಳಿಯ ನಡುವೆ ಕಾಲ್ನಡಿಗೆಯಲ್ಲಿ ಗುಡ್ಡ ಬೆಟ್ಟಗಳಲ್ಲಿ ಹೆಜ್ಜೆ ಹಾಕಿ ಶಿವನನ್ನು ಕಂಡು ಧನ್ಯರಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+