ಅಮರನಾಥ ಯಾತ್ರೆ 2022: ಪವಿತ್ರ ಗುಹೆಯ ಬಳಿ ಭಾರೀ ಮಳೆ, ಯಾತ್ರಾರ್ಥಿಗಳ ಸ್ಥಳಾಂತರ
ಶ್ರೀನಗರ, ಜುಲೈ 26: ಅಮರನಾಥ ಪವಿತ್ರ ಗುಹೆಯ ಬಳಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇದರಿಂದಾಗಿ 4000 ಕ್ಕೂ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಮಳೆ ಮತ್ತು ಭೂಕುಸಿತದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೊಮ್ಮೆ ಪುನರಾರಂಭಗೊಂಡಿದೆ. ಹವಾಮಾನ ತೆರವಾದ ನಂತರ ಜಮ್ಮುವಿನಿಂದ ಅಮರನಾಥ ಯಾತ್ರೆಯನ್ನು ಪುನರಾರಂಭಿಸಲಾಯಿತು. ಬಾಬಾ ಬರ್ಫಾನಿಯ ದರ್ಶನಕ್ಕೆ ಭಕ್ತರಲ್ಲಿ ಅಪಾರ ಉತ್ಸಾಹವಿದೆ.
ಇದರೊಂದಿಗೆ ಪಹಲ್ಗಾಮ್ ಮತ್ತು ಬಲ್ಟಾಲ್‌ನಿಂದ ಭಕ್ತರನ್ನು ಪವಿತ್ರ ಗುಹೆಗೆ ಕಳುಹಿಸಲಾಯಿತು. ಶನಿವಾರ ಮುಂಜಾನೆ, ಜಮ್ಮುವಿನಿಂದ ಹೊರಟಿದ್ದ ಬ್ಯಾಚ್ ರಾಂಬನ್ ಜಿಲ್ಲೆಯ ಹಲವೆಡೆ ಭೂಕುಸಿತ ಸಂಭವಿಸಿದ್ದರಿಂದ ಉಧಂಪುರದ ಟಿಕ್ರಿಯಿಂದ ಹಿಂತಿರುಗಬೇಕಾಯಿತು. ಈ ಸಮಯದಲ್ಲಿ, ಮತ್ತೊಮ್ಮೆ ಹವಾಮಾನವು ಹದಗೆಟ್ಟಿದೆ. ಬಾಬಾ ಅಮರನಾಥರ ಪವಿತ್ರ ಗುಹೆಯ ಸುತ್ತಲಿನ ಎತ್ತರದ ಪರ್ವತಗಳಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳು ಮತ್ತು ಹತ್ತಿರದ ಬುಗ್ಗೆಗಳಿಗೆ ನೀರನ್ನು ತುಂಬಿದೆ.
ಮಾಹಿತಿ ಪ್ರಕಾರ ಮಂಗಳವಾರ (ಜುಲೈ 26) ಮಧ್ಯಾಹ್ನ 3 ಗಂಟೆ ಸುಮಾರಿಗೆ ಪವಿತ್ರ ಗುಹೆಯ ಸುತ್ತಲಿನ ಎತ್ತರದ ಪರ್ವತಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹರಿಯುವ ನೀರು ಹಾಗೂ ಸಮೀಪದ ಬುಗ್ಗೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಈ ಎಚ್ಚರಿಕೆಯ ಬಳಿಕ 4000 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ತಕ್ಷಣದ ಅಲರ್ಟ್ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಾತಾವರಣ ತಿಳಿಯಾಗುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿ ಇಲ್ಲದಿರುವುದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ.

ಪ್ರವಾಹ ಭೀತಿ, ಯಾತ್ರಾರ್ಥಿಗಳ ಸ್ಥಳಾಂತರ
ಮಾಧ್ಯಮ ವರದಿಗಳ ಪ್ರಕಾರ, ಯಾತ್ರಾರ್ಥಿಗಳನ್ನು ಪವಿತ್ರ ಗುಹೆ ಪ್ರದೇಶದಿಂದ ಪಂಚತಾರ್ನಿಯ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಪ್ರಸ್ತುತ, ಸ್ಪಷ್ಟ ಹವಾಮಾನ ಮತ್ತು ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಪರಿಸ್ಥಿತಿ ಸಾಮಾನ್ಯವಾಗಿದೆ. ಈ ಹಿಂದೆ, ಗುಹೆಯ ಬಳಿ ಮೇಘ ಸ್ಫೋಟದ ನಂತರ ಬಾಲ್ಟಾಲ್ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದರು. ಜನರನ್ನು ರಕ್ಷಿಸಲು ಸೇನೆಯ ರಕ್ಷಣಾ ಕಾರ್ಯಾಚರಣೆ ಎರಡು ದಿನಗಳ ಕಾಲ ನಡೆಯಿತು. 43 ದಿನಗಳ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಿದೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ಅಂದರೆ ಆಗಸ್ಟ್ 11 ರಂದು ಕೊನೆಗೊಳ್ಳುತ್ತದೆ.

23 ಸ್ಥಳಗಳಲ್ಲಿ ನದಿ ನೀರಿನ ಮಟ್ಟ ಮೇಲ್ವಿಚಾರಣೆ
ಅಲ್ಮೋರಾ, ಪಿಥೋರಗಢ, ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಝಜ್ರಾದಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರು ನದಿಗಳು ಮತ್ತು ಚರಂಡಿಗಳ ಕಡೆಗೆ ಹೋಗದಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಎಲ್ಲಾ ಗೋದಾಮುಗಳಲ್ಲಿ ಮೂರು ತಿಂಗಳ ಮುಂಗಡ ಆಹಾರ ಧಾನ್ಯಗಳು ಲಭ್ಯವಾಗುವಂತೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಪ್ರವಾಹ ನಿಯಂತ್ರಣ ಕೊಠಡಿ ಮತ್ತು ಡೆಹ್ರಾಡೂನ್‌ನಲ್ಲಿ ಕೇಂದ್ರೀಯ ಪ್ರವಾಹ ನಿಯಂತ್ರಣ ಕೇಂದ್ರವನ್ನು ನೀರಾವರಿ ಇಲಾಖೆ ಸ್ಥಾಪಿಸಿದೆ. ನೀರಾವರಿ ಇಲಾಖೆಯು 23 ಸ್ಥಳಗಳಲ್ಲಿ ನದಿಗಳ ನೀರಿನ ಮಟ್ಟ ಮೇಲ್ವಿಚಾರಣೆ ಮಾಡುತ್ತಿದೆ. ಉತ್ತರಾಖಂಡ ಜಲ ಸಂಸ್ಥಾನದಿಂದ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ.

ಯಾತ್ರಾರ್ಥಿಗಳಿಗೆ ಸೂಚನೆ
ಇನ್ನೂ ಚಾರ್‌ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಹಲವಾರು ಜನ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಅನೇಕ ಯಾತ್ರಾರ್ಥಿಗಳು ಸಾವನ್ನಪ್ಪಿರುವ ವರದಿಗಳಾಗಿವೆ. ಇದರ ನಡುವೆ ಪ್ರವಾಹದ ಭೀತಿ ಕೂಡ ಇದೆ. ಹೀಗಾಗಿ ಯಾತ್ರಾರ್ಥಿಗಳಿಗೆ ವಾಸಸ್ಥಳದಿಂದ ಹೊರಬಾರದಂತೆ ಸೂಚಿಸಲಾಗಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಯಾತ್ರಿಗಳ ಸಂಖ್ಯೆ ಇಳಿಕೆ
ಚಾರ್ಧಾಮ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಈವರೆಗೆ 20 ಲಕ್ಷ ದಾಟಿದೆ. ಚಾರ್ಧಾಮ್ ಯಾತ್ರೆಯು ಮೇ 3 ರಿಂದ ಪ್ರಾರಂಭವಾಯಿತು. ಬದರಿನಾಥ ಧಾಮ್ ಬಾಗಿಲು ತೆರೆದ ದಿನಾಂಕ ಮೇ 8 ರಿಂದ ಇಲ್ಲಿಯವರೆಗೆ 718312ಕ್ಕೂ ಹೆಚ್ಚು ಯಾತ್ರಿಕರು ಭೇಟಿ ನೀಡಿದ್ದಾರೆ. ಅದೇ ರೀತಿ, 698590ಕ್ಕೂ ಹೆಚ್ಚು ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದು, ಅದರಲ್ಲಿ 71273 ಯಾತ್ರಿಕರು ಹೆಲಿಸೇವಾ ಮೂಲಕ ತಲುಪಿದ್ದಾರೆ. ಇಲ್ಲಿಯವರೆಗೆ 333909ಕ್ಕೂ ಹೆಚ್ಚು ಯಾತ್ರಿಕರು ಗಂಗೋತ್ರಿ ಧಾಮವನ್ನು ಮತ್ತು 550398 ಯಾತ್ರಿಕರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. 43 ದಿನಗಳ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಿದೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ಅಂದರೆ ಆಗಸ್ಟ್ 11 ರಂದು ಕೊನೆಗೊಳ್ಳುತ್ತದೆ.
ಬಾಗಿಲು ತೆರೆಯುವ ದಿನಾಂಕವಾದ ಮೇ 22 ರಿಂದ ಗುರುದ್ವಾರ ಹೇಮಕುಂಟ್ ಸಾಹಿಬ್ ತಲುಪಿದ ಯಾತ್ರಾರ್ಥಿಗಳ ಸಂಖ್ಯೆ 63124ಕ್ಕೂ ಹೆಚ್ಚಾಗಿದೆ. ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಈ ಹಿಂದೆ ಪ್ರವಾಹದಿಂದಾಗಿ ಹಲವಾರು ಜನ ಪ್ರಾಣಗಳಿದುಕೊಂಡಿದ್ದು ಬಹುತೇಕ ಜನ ಕಾಣೆಯಾಗಿದ್ದಾರೆ. ಹೀಗಾಗಿ ಮಳೆ ಹೆಚ್ಚಾಗುತ್ತಿರುವುದರಿಂದ ಈ ಪ್ರದೇಶದಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications