72 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಪ್ರಾರಂಭ

ಶ್ರೀನಗರ, ಅಕ್ಟೋಬರ್ 14: ಬರೋಬ್ಬರಿ 72 ದಿನಗಳ ನಂತರ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಮೊಬೈಲ್ ಸೇವೆಯನ್ನು ಪುನರಾರಂಭ ಮಾಡಲಾಗಿದೆ. ಆದರೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಪ್ರಾರಂಭ ಮಾಡಲಾಗಿಲ್ಲ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಕಾರಣ ಕಣಿವೆ ರಾಜ್ಯದಲ್ಲಿ ಹಿಂಸೆ ಸೃಷ್ಟಿಯಾಗಬಹುದೆಂಬ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೊಬೈಲ್ ಕರೆ, ಇಂಟರ್ನೆಟ್ ಯಾವುದೂ ಇರಲಿಲ್ಲ. ಆದರೆ ಅಕ್ಟೋಬರ್ 14 ರ ಮಧ್ಯಾಹ್ನ ಮೊಬೈಲ್ ಕರೆ ಸೇವೆಗಳನ್ನು ಮುಕ್ತ ಮಾಡಲಾಗಿದೆ.

Recommended Video

      'ಮೋದಿಯ ತಂತ್ರವೆಲ್ಲಾ ನಮಗೆ ತಿಳಿದಿದೆ' ಎಂದು ಹೇಳಿದಾಕ್ಷಣ ರಶೀದ್ ಅವರಿಗೆ ಆಗಿದ್ದೇನು ? | Oneindia Kannada

      ರಾಜ್ಯದ ಸುಮಾರು 40 ಲಕ್ಷ ಪೋಸ್ಟ್‌ ಪೇಯ್ಡ್‌ ಮೊಬೈಲ್ ಸೇವೆಗಳು ಈಗ ಪ್ರಾರಂಭಗೊಂಡಿದ್ದು, ಮಧ್ಯಾಹ್ನದ ಮೇಲೆ ಕರೆಗಳು ಹೋಗುತ್ತಿವೆ. ಆದರೆ ಪ್ರೀಪೇಯ್ಡ್‌ ಮೊಬೈಲ್ ಕರೆಗಳ ಸೇವೆ ಇನ್ನಷ್ಟೆ ಮುಕ್ತ ಮಾಡಬೇಕಿದೆ.

      After 72 Days Mobile Call Service Open in Jammu Kashmir

      ಆಗಸ್ಟ್‌ 3 ರಿಂದ ಕಣಿವೆ ರಾಜ್ಯದಲ್ಲಿ ಎಲ್ಲ ಮೊಬೈಲ್ ಸೇವೆಗಳನ್ನು ಬಂದ್ ಮಾಡಲಾಗಿತ್ತು. ರಾಜ್ಯದ ಯಾವುದೇ ಮೊಬೈಲ್‌ಗೆ ಕರೆ ಬರುತ್ತಿರಲಿಲ್ಲ ಮತ್ತು ಹೋಗುತ್ತಿರಲಿಲ್ಲ. ಒಂದು ತಿಂಗಳ ನಂತರ ಕೇವಲ ಲ್ಯಾಂಡ್‌ ಲೈನ್‌ ಗಳನ್ನು ಮಾತ್ರವೇ ನೀಡಲಾಗಿತ್ತು. ಅಂತಿಮವಾಗಿ ಇಂದು ಮೊಬೈಲ್ ಕರೆ ಸೇವೆಗಳನ್ನು ನೀಡಲಾಗಿದೆ.

      ನಿಧಾನವಾಗಿ ಜಮ್ಮು ಕಾಶ್ಮೀರವನ್ನು ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ರಾಜ್ಯದ ಪ್ರವಾಸಿ ಸ್ಥಳಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಕಳೆದ ವಾರವಷ್ಟೆ ತೆರವು ಮಾಡಲಾಗಿದೆ. ಮೊಬೈಲ್ ಕರೆ ಸೇವೆಗಳನ್ನು ನೀಡಿರುವ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ನೀಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+