ಕಣಿವೆ ರಾಜ್ಯದ ಕುವರಿಗೆ ದೇಶದ ಅತಿ ಕಿರಿಯ ಮಹಿಳಾ ಪೈಲಟ್ ಹೆಗ್ಗಳಿಕೆ

ಶ್ರೀನಗರ, ಫೆಬ್ರುವರಿ 03: ವಾಯುಯಾನ ಕ್ಷೇತ್ರದಲ್ಲೀಗ ಹಲವು ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ವಾಯುಯಾನದಲ್ಲಿ ಮಹಿಳೆಯರು ಸಾಧನೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕಣಿವೆ ರಾಜ್ಯ ಎಂದೇ ಕರೆಸಿಕೊಂಡಿರುವ ಕಾಶ್ಮೀರದ ಈ ಕುವರಿಗೂ ಈಗ ಅತಿ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ದೊರೆತಿದೆ.

ಕಾಶ್ಮೀರ ಮೂಲದ 25ರ ಹರೆಯದ ಆಯೆಷಾ ಆಝಿಜ್ ಭಾರತದ ಅತಿ ಕಿರಿಯ ಮಹಿಳಾ ಪೈಲಟ್ ಎನಿಸಿಕೊಂಡಿದ್ದು, ಯುವಜನತೆಗೆ ಸ್ಫೂರ್ತಿಯಂತಿದ್ದಾರೆ. ಕಾಶ್ಮೀರದ ಮಹಿಳೆಯರಿಗೆ ಸಬಲೀಕರಣದ ಪ್ರಾತಿನಿಧ್ಯದಂತೆಯೂ ಗೋಚರಿಸುತ್ತಿದ್ದಾರೆ.

2011ರಲ್ಲಿ ತನ್ನ ಹದಿನೈದನೇ ವಯಸ್ಸಿಗೇ ಆಯೆಷಾ ವಾಯುಯಾನದ ಪರವಾನಗಿ ಪಡೆದುಕೊಂಡು ಕಿರಿಯ ವಿದ್ಯಾರ್ಥಿ ಪೈಲಟ್ ಎನಿಸಿಕೊಂಡಿದ್ದರು. ಆನಂತರ ರಷ್ಯಾದ ಸೋಕೋಲ್ ನಲ್ಲಿ ಮಿಗ್ 29 ಜೆಟ್ ಚಾಲನೆಯ ತರಬೇತಿ ಪಡೆದರು. ಇದಾದ ನಂತರ ಬಾಂಬೆ ಫ್ಲೈಯಿಂಗ್ ಕ್ಲಬ್ (ಬಿಎಫ್ ಸಿ)ಯಿಂದ ವಾಯುಯಾನದಲ್ಲಿ ಪದವಿ ಪಡೆದುಕೊಂಡು 2017ರಲ್ಲಿ ವಾಣಿಜ್ಯ ಪರವಾನಗಿಯನ್ನೂ ಕೈಗಿತ್ತುಕೊಂಡರು. ಇದೀಗ ಕಿರಿಯ ಮಹಿಳಾ ಪೈಲಟ್ ಆಗಿ ಹೊರಹೊಮ್ಮಿದ್ದಾರೆ.

25 Year Old Ayesha Aziz Became Indias Youngest Female Pilot

ತಮ್ಮ ಈ ಸಾಧನೆಯ ಕುರಿತು ಮಾತನಾಡಿರುವ ಆಯೆಷಾ, "ಈ ಕಠಿಣ ಸವಾಲನ್ನು ತೆಗೆದುಕೊಳ್ಳಲು ಖುಷಿ ಎನಿಸುತ್ತಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಹೀಗಾಗಿ ಈ ಕ್ಷೇತ್ರವನ್ನು ಆರಿಸಿಕೊಂಡೆ. ಈ ಮೂಲಕ ನಾನು ಹಲವರನ್ನು ಭೇಟಿಯಾಗುತ್ತಿದ್ದೇನೆ. ಅದೇ ನನಗೆ ಖುಷಿ" ಎಂದು ಹೇಳಿಕೊಂಡಿದ್ದಾರೆ.

ಕಾಶ್ಮೀರದ ಮಹಿಳೆಯರ ಕುರಿತು ಮಾತನಾಡಿರುವ ಅವರು, "ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಲ್ಲಿ ಮಹಿಳೆಯರು ಪ್ರಗತಿ ಸಾಧಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಾಧನೆಗಳನ್ನು ಮಾಡುತ್ತಿದ್ದಾ. ಪ್ರತಿ ಮಹಿಳೆಯು ಈಗ ಉನ್ನತ ಪದವಿ ಹಾಗೂ ಡಾಕ್ಟರೇಟ್ ಪಡೆಯುತ್ತಿದ್ದಾರೆ. ಕಣಿವೆಯ ಮಹಿಳೆಯರು ಮುಂದೆ ಬರುತ್ತಿರುವುದು ಅತಿ ಸಂತೋಷದ ವಿಷಯ" ಎಂದಿದ್ದಾರೆ.

25 Year Old Ayesha Aziz Became Indias Youngest Female Pilot

"ಈ ವೃತ್ತಿಯಲ್ಲಿರುವವರ ಮನಸ್ಥಿತಿ ಗಟ್ಟಿಯಾಗಿರಬೇಕು. ಏಕೆಂದರೆ ಸುಮಾರು 200 ಮಂದಿಯ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಹೀಗಾಗಿ ಇದು ಕಠಿಣ ಸವಾಲೇ ಹೌದು" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+