Yuzvendra Chahal: ಯುಜ್ವೇಂದ್ರ ಚಹಾಲ್- ಧನಶ್ರೀ ವರ್ಮಾ ಡಿವೋರ್ಸ್? ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ
ಮಾಜಿ ಆರ್ ಸಿಬಿ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಾಲ್ ಬಾಳಲ್ಲಿ ಬಿರುಗಾಳಿ ಎದ್ದಿರುವ ಮುನ್ಸೂಚನೆ ಸಿಕ್ಕಿದೆ. ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿಯ ನಡುವೆಯೇ ಇಬ್ಬರೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಚಹಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧನಶ್ರೀ ಜೊತೆಗಿರುವ ಫೋಟೊಗಳನ್ನು ಕೂಡ ಅಳಿಸಿದ್ದಾರೆ. ಧನಶ್ರೀ ಕೂಡ ಯುಜ್ವೇಂದ್ರ ಚಹಾಲ್‌ರನ್ನು ಅನ್‌ಫಾಲೋ ಮಾಡಿದ್ದು ಆದರೆ ಚಹಾಲ್ ಜೊತೆ ಇರುವ ಚಿತ್ರಗಳನ್ನು ಅಳಿಸಿಲ್ಲ.
ವಿಚ್ಛೇದನದ ವದಂತಿಗಳು ನಿಜ ಎಂದು ದಂಪತಿಗಳ ಹತ್ತಿರದ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಿಚ್ಛೇದನ ಅನಿವಾರ್ಯವಾಗಿದೆ ಅದರೆ ಇದು ಅಧಿಕೃತವಾಗಲು ಇನ್ನೂ ಸ್ಪಲ್ಪ ಸಮಯ ಬೇಕಾಗುತ್ತದೆ. ಇಬ್ಬರು ಬೇರೆಯಾಗಲು ನಿಖರ ಕಾರಣವೇನು ಎಂದು ಇನ್ನೂ ತಿಳಿದಿಲ್ಲ. ಆದರೆ ಇಬ್ಬರೂ ಕೂಡ ಬೇರೆಯಾಗಲಿ ನಿರ್ಧರಿಸಿದ್ದಾರೆ ಎನ್ನುವುದು ಸತ್ಯ ಎಂದು ನಂಬಲರ್ಹ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

2023ರಲ್ಲೇ ಇಬ್ಬರು ಬೇರೆಯಾಗುತ್ತಾರೆ ಎನ್ನುವ ವರದಿಗಳು ಹರಿದಾಡಿದ್ದವು, ಧನಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನಿಂದ 'ಚಹಾಲ್' ಉಪನಾಮವನ್ನು ಕೈಬಿಟ್ಟಿದ್ದು ವದಂತಿಗೆಗೆ ಕಾರಣವಾಗಿತ್ತು, ಅದಾದ ಬಳಿಕ ಯುಜ್ವೇಂದ್ರ ಚಹಾಲ್ ಕೂಡ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ "ಹೊಸ ಜೀವನ ಆರಂಭವಾಗುತ್ತಿದೆ" ಎಂದು ರಹಸ್ಯ ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ವಿಚ್ಛೇದನ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದ ಹೋಡಿ, ಈ ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಆದರೆ ಈ ಬಾರಿ ಇಬ್ಬರೂ ಬೇರೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಿಚ್ಛೇದನ ಸುದ್ದಿ ಹೊರಬಿದ್ದರೂ ಅಚ್ಚರಿ ಪಡಬೇಕಿಲ್ಲ. ಚಹಾಲ್ ಮತ್ತು ಧನಶ್ರೀ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ನಡುವೆ ಆರಂಭದಲ್ಲಿ ಅನ್ಯೋನ್ಯತೆ ಕೂಡ ಉತ್ತಮವಾಗಿತ್ತು ಈಗ ಇಬ್ಬರೂ ಬೇರೆಯಾಗುತ್ತಿರುವುದು ಚಹಾಲ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಡಿಸೆಂಬರ್ 11, 2020ರಲ್ಲಿ ಈ ಜೋಡಿ ಮದುವೆಯಾಗಿತ್ತು. ಧನಶ್ರೀ ವರ್ಮಾ ಡ್ಯಾನ್ಸರ್ ಆಗಿದ್ದು ಲಾಕ್‌ಡೌನ್ ಸಮಯದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯದ ಸಮಯದಲ್ಲಿ ಕ್ರಿಕೆಟಿಗರು ಮನೆಯಲ್ಲಿ ಕುಳಿತು ಬೇಸರಗೊಂಡಿದ್ದು. ಈ ಸಮಯದಲ್ಲಿ ಯುಜ್ವೇಂದ್ರ ಚಹಾಲ್ ಡ್ಯಾನ್ಸ್ ಕಲಿಯಲು ನಿರ್ಧರಿಸಿದ್ದರು.
ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಧನಶ್ರೀ ಡ್ಯಾನ್ಸ್ ನೋಡಿ ಅವರನ್ನು ಸಂಪರ್ಕಿಸಿದ್ದರು. ಧನಶ್ರೀ ಕೂಡ ಚಹಾಲ್‌ಗೆ ಡ್ಯಾನ್ಸ್ ಕಲಿಸಲು ಒಪ್ಪಿಕೊಂಡರು. ಅಲ್ಲಿಂದ ಶುರುವಾದ ಇಬ್ಬರ ಪಯಣ ಬಳಿಕ ಪ್ರೀತಿಯಾಗಿ, ಮದುವೆ ಕೂಡ ಆಗಿತ್ತು. 4 ವರ್ಷಗಳ ದಾಂಪತ್ಯದ ಬಳಿಕ ಈಗ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications