Yuzvendra Chahal: ಡಿವೋರ್ಸ್ ಪಡೆಯಲು ಧನಶ್ರೀ ವರ್ಮಾಗೆ ₹60 ಕೋಟಿ ಜೀವನಾಂಶ ಕೊಡ್ತಾರಾ ಯುಜ್ವೇಂದ್ರ ಚಹಾಲ್?

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಇಬ್ಬರೂ ಹೇಳಿಕೆ ನೀಡಿಲ್ಲವಾದರೂ, ವಿಚ್ಛೇದನ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಚಹಾಲ್ ಕುಟುಂಬವನ್ನು ಹತ್ತಿರದಿಂದ ಬಲ್ಲವರು ತಿಳಿಸಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಬೆನ್ನಲ್ಲೇ ಮತ್ತೊಂದು ವದಂತಿಯೊಂದು ಸಖತ್ ಸದ್ದು ಮಾಡುತ್ತಿದೆ.

ಧನಶ್ರೀ ವರ್ಮಾ ಪತಿಯಿಂದ ಬೇರೆ ವಾಸಿಸುತ್ತಿದ್ದು ಸ್ನೇಹಿತನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ರಾಷ್ಟ್ರೀಯ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಇದೀಗ ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆಯಲು ಚಹಾಲ್ ದೊಡ್ಡ ಮೊತ್ತವನ್ನು ನೀಡಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ.

yuzvendra chahal dhanashree verma divorce 60 crore alimony rumours

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದ್ದು ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ವಿಚ್ಛೇದನ ಪಡೆಯಲು ಧನಶ್ರೀ ವರ್ಮಾರಿಗೆ 60 ಕೋಟಿ ರೂಪಾಯಿ ಜೀವನಾಂಶ ಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ.

ಚಹಾಲ್-ಧನಶ್ರೀ ಹೇಳಿದ್ದೇನು?

ಹಲವು ತಿಂಗಳಿನಿಂದ ವಿಚ್ಛೇದನದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಚಹಾಲ್ ಮತ್ತು ಧನಶ್ರೀ ಸ್ಪಷ್ಟನೆ ನೀಡಿಲ್ಲ. ವದಂತಿಗಳ ಆರಂಭದಲ್ಲಿ ಧನಶ್ರೀ ವರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಧಾರರಹಿತ ಹೇಳಿಕೆಗಳು ಮತ್ತು ಟ್ರೋಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಎಲ್ಲಿಯೂ ನಾನು ಚಹಾಲ್ ವಿಚ್ಛೇದನ ಪಡೆಯುತ್ತಿಲ್ಲ ಜೊತೆಯಲ್ಲಿ ಇದ್ದೇವೆ ಎಂದು ಹೇಳಿಕೆ ನೀಡಿರಲಿಲ್ಲ. ವಿಚ್ಛೇದನದ ಸುದ್ದಿಯ ಬಗ್ಗೆ ಇನ್ನೂ ಖಚಿತತೆ ಇಲ್ಲದ ಕಾರಣ, ದೊಡ್ಡ ಮೊತ್ತದ ಜೀವನಾಂಶ ಕೂಡ ಅಭಿಮಾನಿಗಳು ನಡೆಸುತ್ತಿರುವ ಚರ್ಚೆಯಾಗಿದೆ.

2025 ರ ಜನವರಿ ಆರಮಭದಲ್ಲಿ ಚಹಾಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಜವಾಗಿರಬಹುದಾದ ಅಥವಾ ಇಲ್ಲದಿರಬಹುದಾದ ವಿಷಯಗಳ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಗಾಳಿಸುದ್ದಿಗಳನ್ನು ಹರಡುವುದನ್ನು ಗಮನಿಸಿದ್ದೇನೆ ಎಂದು ಹೇಳಿದರು.

ವಿಶೇಷವಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಇರುವ ಕುತೂಹಲವನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ ಚಾಹಲ್, "ಒಬ್ಬ ಮಗ, ಸಹೋದರ ಮತ್ತು ಸ್ನೇಹಿತನಾಗಿ, ಈ ಊಹಾಪೋಹಗಳಲ್ಲಿ ಭಾಗಿಯಾಗಬೇಡಿ ಎಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ, ಏಕೆಂದರೆ ಅವು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟುಮಾಡಿವೆ." ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಚಹಾಲ್ ಮತ್ತು ಧನಶ್ರೀ ವರ್ಮಾ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದರಿಂದ ವಿಚ್ಛೇದನದ ವದಂತಿಗಳು ಆರಂಭವಾಗಿದ್ದವು. ಚಹಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧನಶ್ರೀ ಜೊತೆಗಿನ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಧನಶ್ರೀ ಚಹಾಲ್ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+