ಮದುವೆಯಾದ ಒಂದೂವರೆ ವರ್ಷಕ್ಕೆ ಸಂಸಾರ ಸಾಕಾಗಿತ್ತು: ಚಹಲ್‌-ಧನಶ್ರೀ ದೂರಾಗಿದ್ದೇಕೆ?

ಭಾರತದ ಕ್ರಿಕೆಟ್‌ ಪ್ರಿಯರಿಗೆ ಶಾಕ್‌ ಕೊಟ್ಟಿದ್ದ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ವಿಚ್ಛೇದನ ಈಗ ಅಧಿಕೃತವಾಗಿದೆ. ಈ ಜೋಡಿ ಕಾನೂನಿನ ಮೂಲಕ ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ. 2020ರಲ್ಲಿ ವಿವಾಹವಾದ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ 2025ರ ಫೆಬ್ರವರಿ 5ರಂದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದರು.

ಎರಡು ದಿನಗಳ ಹಿಂದೆ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಇಬ್ಬರೂ ತಮ್ಮ ವಿಚ್ಛೇದನದ ಅಂತಿಮ ಪ್ರಕ್ರಿಯೆಗೆ ಹಾಜರಾಗಿದ್ದು, ಇಬ್ಬರೂ ಬೇರೆ ಬೇರೆ ಆಗಲು ನ್ಯಾಯಾಲಯ ಅಧೀಕೃತವಾಗಿ ಅನುಮತಿ ನೀಡಿದೆ. ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ವಿಚ್ಛೇದನ ಅಧಿಕೃತವಾಗುತ್ತಿದ್ದಂತೆ ಈ ಜೋಡಿ ಕುರಿತು ಕೆಲವು ಶಾಕಿಂಗ್ ವಿಚಾರಗಳು ಹೊರಬಿದ್ದಿದೆ.

Yuzvendra Chahal and Dhanashree Divorce Finalised After 19 Months of Marriage

2020ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದ ಈ ಜೋಡಿ 2022ರ ಜೂನ್ ಅಷ್ಟರಲ್ಲಿ ದೂರಾಗಿದ್ದಾರೆ. ಚಾಹಲ್ ಹಾಗೂ ಧನಶ್ರೀ ಮದುವೆಯಾಗಿ ಕೇವಲ 19 ತಿಂಗಳಿಗೆ ದೂರ ಆಗಿದ್ದಾರೆ ಎಂದು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದ ಯುಜುವೇಂದ್ರ ಚಹಲ್ ಅಭಿಮಾನಿಗಳಿಗೆ ಶಾಕ್‌ ಆಗಿದ್ದು, ಈ ಜೋಡಿ ಪ್ರೀತಿ ಹಾಗೂ ಮದುವೆಯ ನಾಟಕವಾಡಿದರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನು ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ನಡುವಿನ ಹೊಂದಾಣಿಕೆ ಎಷ್ಟರ ಮಟ್ಟಿಗೆ ಹಳಿ ತಪ್ಪಿತ್ತು ಎಂದರೆ ಈ ಜೋಡಿ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದ ತಕ್ಷಣ ವಿಚ್ಛೇದನ ನೀಡವಂತೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಕೆಲವೊಂದು ಪ್ರಕರಣದಲ್ಲಿ ಆರು ತಿಂಗಳ ಸಮಯಾವಕಾಶದಲ್ಲಿ ಪತಿ ಹಾಗೂ ಪತ್ನಿಯ ಮನಸ್ಸು ಬದಲಾಗುವ ಸಾಧ್ಯತೆ ಇದ್ದು, ಕಾಲಾವಕಾಶ ಪಡೆಯುವಂತೆ ತಿಳಿಸಿದೆ ಎನ್ನಲಾಗಿದೆ.

ಆದರೆ ಚಹಲ್ ಮತ್ತು ಧನಶ್ರೀ ಜೋಡಿ ಆರು ತಿಂಗಳ ಕಾಯುವಿಕೆ ನಮಗೆ ಅಗತ್ಯವಿಲ್ಲ ಎಂದು ಮತ್ತೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಇದೀಗ ಈ ಜೋಡಿಯ ವಿಚ್ಛೇದನ ಅಧಿಕೃತವಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಿದ್ದಾರೆ. ಇನ್ನು ಧನಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಜೀವನಾಂಶ ನೀಡಲು ಯುಜುವೇಂದ್ರ ಚಹಲ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+