Get Updates
Get notified of breaking news, exclusive insights, and must-see stories!

Yuvraj Singh: ಆರು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಅಖಾಡಕ್ಕೆ ಸಿಕ್ಸರ್‌ ಕಿಂಗ್‌

ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕವೇ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನವನ್ನು ಮೂಡಿಸಿದ್ದ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌, ಐಪಿಎಲ್‌ನಲ್ಲಿ ಆರು ವರ್ಷಗಳ ಬಳಿಕ ಮತ್ತೊಮ್ಮೆ ಅಖಾಡಕ್ಕೆ ಇಳಿಯಲು ಸಜ್ಜಾರಾಗಿದ್ದಾರೆ. ಹಾಗಿದ್ದರೆ ಇವರು, ಈ ಬಾರಿ ಯಾವ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ?, ಪಾತ್ರ ಏನು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಯುವರಾಜ್‌ ಸಿಂಗ್‌ ಮತ್ತೊಮ್ಮೆ ಅಭಿಮಾನಿಗಳನ್ನು ತನ್ನತ್ತ ಸೆಳೆಯಲು ಸಿದ್ಧರಾಗಿದ್ದಾರೆ. ಆಗಮ್ಮೆ ಧಮಾಕೆದಾರ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ್ದ ಯುವಿ, ಈಗ ಮತ್ತೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜಲ್ವಾ ತೋರಿಸಲು ಬರುತ್ತಿದ್ದಾರೆ. ಮತ್ತೆ ಯುವರಾಜ್‌ ಸಿಂಗ್‌ ಡ್ರೆಸಿಂಗ್ ರೂಮ್‌ ಸೇರಿಕೊಳ್ಳುತ್ತಾರೆ ಎಂಬ ಸುದ್ದಿ, ನಿಜಕ್ಕೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆದರೆ ಈ ಬಾರಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

Yuvraj Singh May Become Gujarat Titans Head Coach Amid Nehra and Solanki s Potential Exit

ಅಂದಹಾಗೆ ಈ ಬಾರಿ ಯುವಿ ಒಬ್ಬ ಆಟಗಾರನಾಗಿ ಅಂಗಳ ಪ್ರವೇಶಿಸುತ್ತಿಲ್ಲ. ಬದಲಿಗೆ ಗುರುವಾಗಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು, ಗುಜರಾತ್ ಟೈಟಾನ್ಸ್ ತಂಡಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಗುಜರಾತ್ ಟೈಟಾನ್ಸ್‌ ತೊರೆಯ ಬಹುದು ಎಂದು ಹೇಳಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಸಿಂಗ್ ತಂಡದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ಮಾತಿದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ತಂಡದ ಮಾರ್ಗದರ್ಶಕ ಗ್ಯಾರಿ ಕರ್ಸ್ಟನ್ ಈಗಾಗಲೇ ತಂಡದಿಂದ ಬೇರ್ಪಟ್ಟಿದ್ದಾರೆ.

ಗುಜರಾತ್ ತಂಡದಲ್ಲಿ ದೊಡ್ಡ ಬದಲಾವಣೆಗಳಿರಬಹುದು

ಮುಂಬರುವ ದಿನಗಳಲ್ಲಿ ಗುಜರಾತ್ ಟೈಟಾನ್ಸ್‌ನಲ್ಲಿ ಹಲವು ಬದಲಾವಣೆಗಳಾಗಬಹುದು ಎಂದು ಸ್ಪೋರ್ಟ್ಸ್ 18 ತನ್ನ ವರದಿಯಲ್ಲಿ ತಿಳಿಸಿದೆ. ಆಶಿಶ್ ನೆಹ್ರಾ ಮತ್ತು ವಿಕ್ರಮ್ ಸೋಲಂಕಿ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಇದಲ್ಲದೇ ಯುವರಾಜ್ ಸಿಂಗ್ ತಂಡದ ಮುಂದಿನ ಮುಖ್ಯ ಕೋಚ್ ಆಗಬಹುದು. ಜಿಟಿಯ ಪ್ರಸ್ತುತ ಕೋಚಿಂಗ್ ಸಿಬ್ಬಂದಿ ಕೂಡ ತಮಗಾಗಿ ಹೊಸ ಆಯ್ಕೆಗಳನ್ನು ಹುಡುಕತೊಡಗಿದ್ದಾರೆ.

ಗುರು ಶಿಷ್ಯರ ಜುಗಲ್‌ಬಂಧಿ

ಶುಭಮನ್ ಗಿಲ್ ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ. ಯುವರಾಜ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಅವರು ತಮ್ಮ ಆಟದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇದಲ್ಲದೆ, ಗಿಲ್ ಅವರ ಯಶಸ್ಸಿನ ಕ್ರೆಡಿಟ್ ಅನ್ನು ಯುವರಾಜ್ ಸಿಂಗ್ ಅವರಿಗೆ ಹಲವು ಬಾರಿ ನೀಡಿದ್ದಾರೆ. ಹೀಗಿರುವಾಗ ಇಬ್ಬರೂ ಐಪಿಎಲ್‌ನಲ್ಲಿ ಸಂಚಲನ ಮೂಡಿಸಬಹುದು.

ಸೀಮಿತ ಓವರ್‌ಗಳ ದಾದಾ

ಆಟಗಾರನಾಗಿ, ಸೀಮಿತ ಓವರ್‌ಗಳಲ್ಲಿ ಯುವರಾಜ್ ಸಿಂಗ್ ಅವರ ದಾಖಲೆಯು ಅತ್ಯುತ್ತಮವಾಗಿದೆ. ಭಾರತ 2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ. ಅವರು ಐಪಿಎಲ್‌ನಲ್ಲೂ ಅನೇಕ ದೊಡ್ಡ ತಂಡಗಳ ಪರ ಆಡಿದ್ದಾರೆ. ಅವರು ಐಪಿಎಲ್‌ನಲ್ಲಿ ಮುಂಬೈ, ಹೈದರಾಬಾದ್, ಆರ್‌ಸಿಬಿ, ದೆಹಲಿ ಮತ್ತು ಪುಣೆ ಪರ ಆಡಿದ್ದಾರೆ. ಅವರಿಗೆ ಐಪಿಎಲ್‌ನಲ್ಲಿ ಆಡಿದ ಸಾಕಷ್ಟು ಅನುಭವವಿದೆ. ಈ ಮೂಲಕ ಅವರು ಆಶಿಶ್ ನೆಹ್ರಾ ಅವರ ಸ್ಥಾನವನ್ನು ತುಂಬಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+