Year Ender 2024: ಈ ವರ್ಷದ ಫ್ಲಾಪ್ ಟೆಸ್ಟ್ ಇಲೆವೆನ್; ಕೊಹ್ಲಿ, ರೋಹಿತ್, ಸ್ಟೋಕ್ಸ್‌ಗೆ ಸ್ಥಾನ!
2024 ಮುಗಿಯಲು ಇನ್ನು ಕೆಲವೇ ದಿನಗಳಿದ್ದು 2025ರ ಆರಂಭಕ್ಕೆ ಜಗತ್ತು ಸಜ್ಜಾಗಿದೆ. ಈ ವರ್ಷ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಕ್ಕಿದೆ. ಟಿ20 ವಿಶ್ವಕಪ್, ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ, ಭಾರತ ನ್ಯೂಜಿಲೆಂಡ್ ಟೆಸ್ಟ್ ಸರಣಿ ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದೆ. ಆದರೆ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಭಾರತಕ್ಕೆ ನ್ಯೂಜಿಲೆಂಡ್ ಆಘಾತ ಕೊಟ್ಟಿತ್ತು.
2024ರಲ್ಲಿ ಭಾರತ ತಂಡದಲ್ಲಿ ಹಲವು ಹೊಸ ಆಟಗಾರರು ಅವಕಾಶ ಪಡೆದರು. ಆದರೆ ಹಿರಿಯ ಅನುಭವಿ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಭಾರತ ಮಾತ್ರವಲ್ಲದೆ ವಿವಿಧ ದೇಶಗಳ ತಂಡದಲ್ಲಿ ಕೂಡ ಪ್ರಮುಖ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ಆಗಿಲ್ಲ.

ಅಂತಹ ಪ್ರಮುಖ ಆಟಗಾರರನ್ನು ಒಳಗೊಂಡು ಈ ವರ್ಷದ ಫ್ಲಾಪ್ ಪ್ಲೇಯಿಂಗ್ 11 ಟೆಸ್ಟ್ ತಂಡವನ್ನು ಮಾಡಲಾಗಿದ್ದು, ಇದರಲ್ಲಿ ಭಾರತ ತಂಡದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕೊಹ್ಲಿ, ರೋಹಿತ್ ವೈಫಲ್ಯ
ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದರೂ ಅವರು ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರೆ. ಆಫ್‌ಸೈಡ್ ಹೋಗುವ ಚೆಂಡನ್ನು ಪದೇ ಪದೇ ಆಡಲು ಹೋಗಿ ವಿಕೆಟ್ ಒಪ್ಪಿಸುತ್ತಿರುವುದಕ್ಕೆ ಹಿರಿಯ ಆಟಗಾರರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ನಿವೃತ್ತಿ ಘೋಷಣೆ ಮಾಡಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಈ ವರ್ಷ ಬೌಲಿಂಗ್‌ನಲ್ಲಿ ವಿಫಲರಾಗಿದ್ದಾರೆ.
ರೋಹಿತ್ ಶರ್ಮಾ ನಾಯಕನಾಗಿ ಮಾತ್ರವಲ್ಲಿ ಬ್ಯಾಟರ್ ಆಗಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅವರು ಈ ವರೆಗೆ ಕೇವಲ 22 ರನ್ ಮಾತ್ರ ಗಳಿಸಿದ್ದಾರೆ. ರೋಹಿತ್ ಜೊತೆಗೆ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲಾಥಮ್ ಕೂಡ ಕಳಪೆ ಪ್ರದರ್ಶನ ನೀಡಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್‌ಸ್ಟೋಕ್ಸ್ ಕೂಡ ಈ ವರ್ಷ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ಗೂ ಬರುವಲ್ಲಿ ಇಂಗ್ಲೆಂಡ್ ವಿಫಲವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆ ತಂದರೂ ತಂಡಕ್ಕೆ ನಿರೀಕ್ಷಿತ ಗೆಲುವು ಸಿಗದೇ ಇರುವುದು ಚಿಂತೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಮತ್ತು ಸ್ಪಿನ್ನರ್ ನಾಥನ್ ಲಿಯಾನ್ ಕೂಡ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
2024 ರ ಫ್ಲಾಪ್ ಟೆಸ್ಟ್ ಇಲೆವೆನ್
ರೋಹಿತ್ ಶರ್ಮಾ, ಟಾಮ್ ಲ್ಯಾಥಮ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶಾನೆ, ವಿರಾಟ್ ಕೊಹ್ಲಿ, ಆಲಿ ಪೋಪ್, ಬೆನ್ ಸ್ಟೋಕ್ಸ್, ಶಕೀಬ್ ಅಲ್ ಹಸನ್, ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ನಾಥನ್ ಲಿಯಾನ್.












Click it and Unblock the Notifications