ಡೋಪಿಂಗ್ ನಿಯಮ ಉಲ್ಲಂಘನೆ ಆರೋಪ: ಟೀಂ ಇಂಡಿಯಾ ಕ್ರಿಕೆಟರ್ಸ್‌ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾಗೆ ನೋಟಿಸ್

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಅವರಿಗೆ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (NADA) ನೋಟಿಸ್ ನೀಡಿದೆ. ನಿಗದಿತ ಡೋಪಿಂಗ್ ಪರೀಕ್ಷೆಯ ಸಮಯದಲ್ಲಿ ತಾವು ಘೋಷಿಸಿದ್ದ ಸ್ಥಳದಲ್ಲಿ ಈ ಇಬ್ಬರೂ ಲಭ್ಯವಿರದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ನೋಂದಾಯಿತ ಪರೀಕ್ಷಾ ಪೂಲ್ (RTP) ಪಟ್ಟಿಯಲ್ಲಿರುವ ಕ್ರೀಡಾಪಟುಗಳು ಪರೀಕ್ಷೆಗಾಗಿ ತಾವು ಇರುವ ಸ್ಥಳದ ವಿವರವನ್ನು ಮೊದಲೇ ನೀಡಬೇಕಾಗುತ್ತದೆ. ಯಶಸ್ವಿ ಜೈಸ್ವಾಲ್ ಅವರು ಕಳೆದ ವರ್ಷ ಡಿಸೆಂಬರ್ 17ರಂದು ಇವರ ಪರೀಕ್ಷೆಗೆ ಅಧಿಕಾರಿಗಳು ಬಂದಾಗ ಇವರು ಲಭ್ಯವಿರಲಿಲ್ಲ. ಮತ್ತೊಂದೆಡೆ ಮಹಿಳಾ ಕ್ರಿಕೆಟ್‌ ತಂಡದ ಶಫಾಲಿ ವರ್ಮಾ ಅವರು ನವೆಂಬರ್ 7ರಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ ಇವರೂ ಸಹ ಘೋಷಿತ ಸ್ಥಳದಲ್ಲಿ ಇರಲಿಲ್ಲ.

Yashasvi Jaiswal Shafali Verma Receive NADA Notice Over Missed Dope Tests Know Complete details

ಜೈಸ್ವಾಲ್, ಶಫಾಲಿಗೆ ನೋಟಿಸ್

ಈ ಬಗ್ಗೆ ಫೆಬ್ರವರಿ ಫೆಬ್ರವರಿ 18 ಮತ್ತು 20ರಂದು ವಿವರಣೆ ಕೇಳಿ ಪತ್ರ ಬರೆದಿದ್ದರೂ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈಗ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಬಿಸಿಸಿಐಗೂ ಮಾಹಿತಿ ನೀಡಲಾಗಿದೆ. ಕ್ರೀಡಾಪಟುಗಳು ಸ್ಪರ್ಧೆಯ ಹೊರಗಿನ ಪರೀಕ್ಷೆಗಾಗಿ ಒಂದು ನಿರ್ದಿಷ್ಟ ಸಮಯ ಮತ್ತು ಸ್ಥಳವನ್ನು ಮೊದಲೇ ತಿಳಿಸಬೇಕು. ಆ ಸಮಯದಲ್ಲಿ ಹಾಜರಿಲ್ಲದಿದ್ದರೆ ಅವರು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

ಒಂದು ಬಾರಿ ಪರೀಕ್ಷೆ ತಪ್ಪಿಸಿಕೊಂಡರೆ ಅದು ದೊಡ್ಡ ಅಪರಾಧವಲ್ಲ. ಆದರೆ 12 ತಿಂಗಳ ಅವಧಿಯಲ್ಲಿ ಮೂರು ಬಾರಿ ಪರೀಕ್ಷೆಗೆ ಹಾಜರಾಗಲು ವಿಫಲವಾದರೆ, ಅದನ್ನು ಡೋಪಿಂಗ್ ವಿರೋಧಿ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಮಯದಲ್ಲಿ ಆಟಗಾರರು 2 ವರ್ಷಗಳವರೆಗೆ ನಿಷೇಧ ಪ್ರಕ್ರಿಯೆಯನ್ನು ಎದುರಿಸಬೇಕಾಗಬಹುದು.

ಜೈಸ್ವಾಲ್, ಶಫಾಲಿಗೆ ಸಂಕಷ್ಟ ತಂದಿಟ್ಟ ನೋಟಿಸ್‌

ಇದೀಗ ಈ ನೋಟಿಸ್ ಈ ಕ್ರಿಕೆಟಿಗರಿಗೆ ಸಂಕಷ್ಟ ತಂದೊಡ್ಡಿದೆ. ಪ್ರಸ್ತುತ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದರೆ, ಶಫಾಲಿ ವರ್ಮಾ ಜೂನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಸಿದ್ಧತೆಯಲ್ಲಿದ್ದಾರೆ. ಹಿಂದೆ 2019ರಲ್ಲಿ ಪೃಥ್ವಿ ಶಾ ಅವರು ನಿಷೇಧಿತ ಕೆಮ್ಮಿನ ಸಿರಪ್ ಸೇವಿಸಿದ ಕಾರಣಕ್ಕಾಗಿ 8 ತಿಂಗಳ ನಿಷೇಧಕ್ಕೊಳಗಾಗಿದ್ದರು. ಸದ್ಯಕ್ಕೆ ಇದೀಗ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ತಮ್ಮ ಮೊದಲ ಅಪರಾಧವಾಗಿರುವುದರಿಂದ ವಿವರಣೆ ನೀಡಲು ಇವರಿಗೆ ಅವಕಾಶವಿದೆ.

2019ರಲ್ಲಿ ಪೃಥ್ವಿ ಶಾ ಕೆಮ್ಮಿನ ಸಿರಪ್‌ನಲ್ಲಿ ಕಂಡುಬರುವ ನಿಷೇಧಿತ ವಸ್ತುವನ್ನು ಅಜಾಗರೂಕತೆಯಿಂದ ಸೇವಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಬಳಿಕ ಅವರಿಗೆ 8 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಫೆಬ್ರವರಿ 2019ರಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಂದರ್ಭದಲ್ಲಿ ಸಂಗ್ರಹಿಸಲಾದ ಶಾ ಅವರ ಮೂತ್ರದ ಮಾದರಿಯಲ್ಲಿ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ಸಂಹಿತೆಯಡಿಯಲ್ಲಿ ಸ್ಪರ್ಧೆಯ ಒಳಗೆ ಮತ್ತು ಹೊರಗೆ ನಿಷೇಧಿಸಲಾದ ವಸ್ತುವಾದ ಟೆರ್ಬುಟಲಿನ್ ಇರುವುದು ಪತ್ತೆ ಆಗಿತ್ತು. ಒಟ್ಟಿನಲ್ಲಿ ಇದೀಗ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಅವರು ಪರೀಕ್ಷೆಗೆ ಹಾಜರಾಗದಿರುವುದರಿಂದ ಇವರಿಗೂ ನಿಷೇಧದ ಸಂಕಷ್ಟ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+