WTC Final: ಆಸ್ಟ್ರೇಲಿಯಾವನ್ನು ಮಣಿಸಲು ಅಶ್ವಿನ್ ಅಳವಡಿಸಿಕೊಂಡಿರುವ ಮಂತ್ರವಿದು!
ಭಾರತ-ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿವೆ. ಎರಡೂ ತಂಡಗಳು ಪ್ರತಿಷ್ಠಿತ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಗೆಲುವಿಗಾಗಿ ರಣತಂತ್ರ ರೂಪಿಸಿವೆ. ಟೆಸ್ಟ್ ಕ್ರಿಕೆಟ್ ಅಂದರೆ, ಅಲ್ಲಿ ಪಕ್ಕಾ ಪ್ಲಾನಿಂಗ್, ತಾಳ್ಮೆ ಎಲ್ಲವೂ ಮುಖ್ಯ. ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ.
ಅಶ್ವಿನ್ ಆಸ್ಟ್ರೇಲಿಯಾದ ಪ್ರತಿಯೊಬ್ಬರ ಆಟಗಾರನನ್ನು ಔಟ್ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ಅಧ್ಯಯನ ಕೂಡ ನಡೆಸಿದ್ದಾರೆ. ಪಿಚ್ ಹೇಗಿದೆ, ಎಷ್ಟು ಟರ್ನ್ ಸಿಗಬಹುದು, ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಗಳಾದ ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಪಿನ್ ವಿರುದ್ಧ ಯಾವ ರೀತಿ ಆಡುತ್ತಾರೆ, ಯಾವ ರೀತಿ ಅವರನ್ನು ಔಟ್ ಮಾಡಬಹುದು ಎನ್ನುವ ಬಗ್ಗೆ ಅಶ್ವಿನ್ ಸಾಕಷ್ಟು ಅಭ್ಯಾಸ ಮಾಡಿದ್ದಾರೆ.

ಇಂಗ್ಲೆಂಡ್‌ನ ಸಮಯಕ್ಕೆ ಹೊಂದಿಕೊಳ್ಳಲು ಅಶ್ವಿನ್ ಐಪಿಎಲ್ ಆಡುವ ಸಮಯದಲ್ಲೇ ತಮ್ಮ ದಿನಚರಿಯನ್ನು ಬದಲಾಯಿಸಿಕೊಂಡಿದ್ದರು. ಬೇಗನೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಇಂಗ್ಲೆಂಡ್‌ನ ಸಮಯಕ್ಕೆ ಹೊಂದಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ ಆಡುವಾಗ ತಾಜಾತನದಿಂದ ಇರುವುದು ಮುಖ್ಯವಾಘುತ್ತದೆ. ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೆಚ್ಚಿನ ಅಂತರ ಇಲ್ಲದೇ ಇರುವಾಗ, ಕಡಿಮೆ ಸಮಯದಲ್ಲೇ ಹೊಂದಿಕೊಳ್ಳಬೇಕಾಗುತ್ತದೆ.
ಎರಡು ತಿಂಗಳು ಟಿ20 ಪಂದ್ಯಗಳನ್ನಾಡಿದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಳ್ಳುವುದು ಸುಲಭವಲ್ಲ. "ಅಶ್ವಿನ್ ನಿದ್ರೆಯ ಸಮಯವನ್ನು ಬದಲಾಯಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಸಿದ್ಧತೆ ಆರಂಭಿಸಿದರು. ಹಲವು ಅಭ್ಯಾಸಗಳನ್ನು ಬದಲಿಸಿಕೊಂಡಿದ್ದರು, ಐಪಿಎಲ್ ವೇಳೆ ಪಂದ್ಯಗಳು ಇಲ್ಲದ ಸಮಯದಲ್ಲಿ ಅವರು ಬೇಗನೆ ಮಲಗುತ್ತಿದ್ದರು" ಎಂದು ಪ್ರಸನ್ನ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಡಾಟಾ ಅನಾಲಿಸ್ಟ್ ಜೊತೆ ಸುಧೀರ್ಘ ಒಡನಾಟ
ಪ್ರಸನ್ನ ಅಗೋರಂ ಬೆಂಗಳೂರು ಮೂಲದ ದತ್ತಾಂಶ ವಿಶ್ಲೇಷಕರು ದಕ್ಷಿಣ ಆಫ್ರಿಕಾದೊಂದಿಗೆ ಸುದೀರ್ಘ ಯಶಸ್ವಿ ಅವಧಿಯನ್ನು ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್‌ಗಳೊಂದಿಗೆ ಕೂಡ ಕೆಲಸ ಮಾಡಿದ್ದಾರೆ.
ಪ್ರಸನ್ನ ಜೊತೆ ಅಶ್ವಿನ್ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರು ಥಿಂಕಿಂಗ್ ಮಾಸ್ಟರ್ ಆಗಿರುವ ಅಶ್ವಿನ್ ಆಸ್ಟ್ರೇಲಿಯಾ ಬ್ಯಾಟರ್‌ಗಳ ದುರ್ಬಲ ಲಿಂಕ್ಸ್ ಪತ್ತೆಹಚ್ಚಲು ಡೇಟಾವನ್ನು ಬಳಸಿಕೊಂಡಿದ್ದಾರೆ. ಓವಲ್ ಪಿಚ್ ನಿಗೂಡವಾಗಿರುವ ಕಾರಣ, ಅಶ್ವಿನ್ ಪ್ರಸನ್ನ ಅವರ ಸಹಾಯ ಕೇಳಿದ್ದಾರೆ.
ಅಶ್ವಿನ್ ಮಾಡ್ತಿರುವ ಮಾಸ್ಟರ್ ಪ್ಲಾನ್ ಏನು?
ಇಂಗ್ಲೆಂಡ್‌ನಲ್ಲಿ ನಡೆಯುವ ಕೌಂಟಿ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಯಾವ ರೀತಿಯ ಹೊಡೆತಗಳನ್ನು ಆಡಿದ್ದಾರೆ ಎನ್ನುವುದನ್ನು ರವಿಚಂದ್ರನ್ ಅಶ್ವಿನ್ ವಿಶ್ಲೇಷಿಸುತ್ತಿದ್ದಾರೆ. ಯಾವ ಎಸೆತಗಳಿಗೆ ಔಟ್ ಆಗಿದ್ದಾರೆ ಎನ್ನುವದನ್ನು ಅವರು ಗಮನಿಸುತ್ತಿದ್ದಾರೆ, ಯಾವ ಬ್ಯಾಟರ್‌ಗೆ ಯಾವ ಲೆಂತ್‌ನಲ್ಲಿ ಬೌಲಿಂಗ್ ಮಾಡಬೇಕು ಎನ್ನುವುದರ ಬಗ್ಗೆ ಅಶ್ವಿನ್ ಈಗಾಗಲೇ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.
ಅಶ್ವಿನ್ - ಉಮೇಶ್ ಯಾದವ್ ನಡುವೆ ಪೈಪೋಟಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ಪೈಪೋಟಿ ಶುರುವಾಗಿದೆ. ಅಶ್ವಿನ್ ಬ್ಯಾಟಿಂಗ್‌ನಲ್ಲಿ ಕೂಡ ಮಿಂಚುವ ಸಾಮರ್ಥ್ಯ ಹೊಂದಿರುವುದರಿಂದ, ಅಲ್ಲದೆ ಅಪಾರ ಅನುಭವ ಇರುವುದರಿಂದ ಅವರೇ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ.












Click it and Unblock the Notifications