WPL 2027 Auction: 146 ಆಟಗಾರ್ತಿಯರ ಅಂತಿಮ ಪಟ್ಟಿ; ₹50 ಲಕ್ಷ ಮೂಲ ಬೆಲೆಯಲ್ಲಿರುವ ಆಟಗಾರ್ತಿಯರು

WPL 2027 Auction: ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜಿಗಾಗಿ ಒಟ್ಟು 146 ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಕೊಚ್ಚಿಯಲ್ಲಿ ನಡೆಯಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್‌ ಮತ್ತು ಇಂಗ್ಲೆಂಡ್‌ನ ದೇವಿಕಾ ಡಂಕ್ಲಿ ಅತ್ಯಂತ ಹೆಚ್ಚಿನ ಅಂದರೆ ₹50 ಲಕ್ಷ ಮೂಲ ಬೆಲೆಗೆ ಹೆಸರು ನೋದಾಯಿಸಿಕೊಂಡಿದ್ದಾರೆ.

ಬಿಡುಗಡೆ ಮಾಡಲಾಗಿರುವ 146 ಆಟಗಾರ್ತಿಯರ ಅಂತಿಮ ಪಟ್ಟಿಯಲ್ಲಿ ಎಷ್ಟು ಮಂದಿ ಭಾರತೀಯರು ಹಾಗೂ ವಿದೇಶಿಯರ ಸಂಖ್ಯೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

WPL 2027 Auction 146 Players Shortlisted Sophie Molineux and Sophia Dunkley Set 50 Lakh Base Price

ಹರಾಜು ಪಟ್ಟಿಯ ಪ್ರಮುಖ ವಿವರಗಳು

* ಹರಾಜಿನಲ್ಲಿ ಭಾಗವಹಿಸುತ್ತಿರುವ 146 ಆಟಗಾರ್ತಿಯರಲ್ಲಿ 119 ಭಾರತೀಯರು ಹಾಗೂ 27 ವಿದೇಶಿ ಆಟಗಾರ್ತಿಯರಿದ್ದಾರೆ.

* ಅಂತಿಮ ಪಟ್ಟಿಯಲ್ಲಿ 95 ಕ್ಯಾಪ್ಡ್ (ದೇಶದ ಪರ ಆಡಿದ) ಮತ್ತು 51 ಅನ್‌ಕ್ಯಾಪ್ಡ್ ಆಟಗಾರರು ಜಾಗ ಪಡೆದಿದ್ದಾರೆ.

* ಐದು ಡಬ್ಲ್ಯೂಪಿಎಲ್ ಫ್ರಾಂಚೈಸಿಗಳಲ್ಲಿ ಒಟ್ಟು 30 ಆಟಗಾರ್ತಿಯರ ಸ್ಲಾಟ್‌ಗಳು ಖಾಲಿಯಿದ್ದು, ಅದರಲ್ಲಿ ಗರಿಷ್ಠ 9 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

ಆಟಗಾರ್ತಿಯರ ಮೂಲ ಬೆಲೆಯ ವಿಭಾಗಗಳು

* ₹50 ಲಕ್ಷ: ಈ ಗರಿಷ್ಠ ಬೆಲೆಯ ವಿಭಾಗದಲ್ಲಿ ಸೋಫಿ ಮೊಲಿನೆಕ್ಸ್ ಮತ್ತು ಸೋಫಿಯಾ ಡಂಕ್ಲಿ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಆಟಗಾರ್ತಿಯರಿದ್ದಾರೆ.

* ₹40 ಲಕ್ಷ ವಿಭಾಗ: ಭಾರತದ ಅನುಭವಿ ಆಟಗಾರ್ತಿಯರಾದ ಸ್ನೇಹ ರಾಣಾ, ಪುನಮ್ ಯಾದವ್ ಮತ್ತು ವೇಗಿ ಶಿಖಾ ಪಾಂಡೆ ಅವರ ಜೊತೆಗೆ ಕೆಲವು ಪ್ರಮುಖ ವಿದೇಶಿ ಆಟಗಾರರು ಈ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

* ₹30 ಲಕ್ಷ: ಯುವ ಹಾಗೂ ದೇಶೀಯ (ಅನ್‌ಕ್ಯಾಪ್ಡ್) ಕ್ರಿಕೆಟಿಗರು ₹10 ಲಕ್ಷದಿಂದ ₹30 ಲಕ್ಷದವರೆಗಿನ ಮೂಲ ಬೆಲೆಯ ವಿಭಾಗದಲ್ಲಿ ಹರಾಜಿಗೆ ಬರಲಿದ್ದಾರೆ. ಮುಂಬರುವ ಡಬ್ಲ್ಯೂಪಿಎಲ್‌ 2027 ಟೂರ್ನಿಗಾಗಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಲು ಬಲಿಷ್ಠ ಆಲ್‌ರೌಂಡರ್‌ಗಳು ಮತ್ತು ಅನುಭವಿ ಬೌಲರ್‌ಗಳ ಮೇಲೆ ಕಣ್ಣಿಟ್ಟಿವೆ.

ತೀವ್ರ ಪೈಪೋಟಿ ನಡೆಸುವ ಸಾಧ್ಯತೆ

ಭಾರತದ 119 ಆಟಗಾರ್ತಿಯರ ಪೈಕಿ 22 ಮಂದಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ (ಕ್ಯಾಪ್ಡ್) ಅನುಭವ ಹೊಂದಿದ್ದರೆ, ಉಳಿದ 97 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ. ಇನ್ನು ವಿದೇಶಿ ಆಟಗಾರ್ತಿಯರಲ್ಲಿ 14 ಮಂದಿ ಕ್ಯಾಪ್ಡ್ ಹಾಗೂ 13 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ. ಐದೂ ಫ್ರಾಂಚೈಸಿಗಳು ತಮ್ಮ ತಂಡದ ಅಗತ್ಯಕ್ಕೆ ತಕ್ಕಂತೆ ಆಲ್‌ರೌಂಡರ್‌ಗಳು ಹಾಗೂ ಯುವ ಭಾರತೀಯ ಪ್ರತಿಭೆಗಳನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+