WPL 2026 RCB Matches: ವೇಳಾಪಟ್ಟಿ ಪ್ರಕಟ: ಆರ್‌ಸಿಬಿ ಪಂದ್ಯಗಳ ದಿನಾಂಕ ಮತ್ತು ಸ್ಥಳಗಳ ವಿವರ
WPL 2026 RCB Matches: ಡಬ್ಲ್ಯೂಪಿಎಲ್ 2026 ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಇಂದು (ನವೆಂಬರ್ 29) ಪ್ರಕಟಿಸಿದೆ. ಹಾಗಾದ್ರೆ ಯಾವಾಗಿನಿಂದ ಆರಂಭ ಹಾಗೂ ಆರ್‌ಸಿಬಿ ಯಾವೆಲ್ಲಾ ತಂಡಗಳ ಮೇಳೆ ಆಡಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಡಬ್ಲ್ಯೂಪಿಎಲ್ ಮೂರು ಆವೃತ್ತಿಯಾಗಿದ್ದು, 2023ರಲ್ಲಿ ಮುಂಬೈ ಇಂಡಿಯನ್ಸ್, 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025ರಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಎಲ್ಲರ ಚಿತ್ತ ನಾಲ್ಕನೇ ಆವೃತ್ತಿಯತ್ತ ನೆಟ್ಟಿದೆ. 2026 ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಇದೀಗ ಪಂದ್ಯಾವಳಿಯ ವೇಳಾಪಟ್ಟಿ ಕೂಡ ಇಂದು ಪ್ರಕಟವಾಗಿದೆ. ಆರ್‌ಸಿಬಿ ಯಾವಾಗ ಯಾವ ತಂಡಗಳ ಮೇಲೆ ಆಡಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

2026 ಜನವರಿ 9ರಂದು ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಯಾವ್ಯಾವ ತಂಡಗಳ ಮೇಲೆ ಆಡಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ ಜನವರಿ 9 ರಿಂದ ಫೆಬ್ರವರಿವೆ 5ರ ವರೆಗೆ ನಡೆಯಲಿದೆ. ಫೈನಲ್ ಪಂದ್ಯಕ್ಕೂ ಅಹ ಮುಹೂರ್ತ ಫಿಕ್ಸ್ ಆಗಿದ್ದು,ಲೀಗ್ ಹಂತದಲ್ಲಿ 20 ಪಂದ್ಯಗಳು ನಡೆಯಲಿವೆ. ಫೆಬ್ರವರಿ 3 ರಂದು ಎಲಿಮಿನೇಟರ್ ನಡೆಯಲಿದ್ದು, ಎರಡು ದಿನಗಳ ಬಳಿಕ ಫೈನಲ್ ಇರಲಿದೆ.
ಡಬ್ಲ್ಯೂಪಿಎಲ್ 2026 ವೇಳಾಪಟ್ಟಿ
* ಜನವರಿ 9 - ಮುಂಬೈ ಇಂಡಿಯನ್ಸ್ (MI) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ನವೀ ಮುಂಬೈ
* ಜನವರಿ 10 - ಯುಪಿ ವಾರಿಯರ್ಸ್ (UPW) vs ಗುಜರಾತ್ ಜೈಂಟ್ಸ್ (GG): ನವೀ ಮುಂಬೈ
* ಜನವರಿ 10 - ಮುಂಬೈ ಇಂಡಿಯನ್ಸ್ (MI) vs ಡೆಲ್ಲಿ ಕ್ಯಾಪಿಟಲ್ಸ್ (DC): ನವೀ ಮುಂಬೈ
* ಜನವರಿ 11 - ಡೆಲ್ಲಿ ಕ್ಯಾಪಿಟಲ್ಸ್ (DC) vs ಗುಜರಾತ್ ಜೈಂಟ್ಸ್: ನವೀ ಮುಂಬೈ
* ಜನವರಿ 12 - ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) Vs ಯುಪಿ ವಾರಿಯರ್ಸ್ (UPW): ನವೀ ಮುಂಬೈ
* ಜನವರಿ 13 - ಮುಂಬೈ ಇಂಡಿಯನ್ಸ್ (MI) vs ಗುಜರಾತ್ ಜೈಂಟ್ಸ್: ನವೀ ಮುಂಬೈ
* ಜನವರಿ 14 - ಯುಪಿ ವಾರಿಯರ್ಸ್ (UPW) vs ಡೆಲ್ಲಿ ಕ್ಯಾಪಿಟಲ್ಸ್ (DC): ನವೀ ಮುಂಬೈ
* ಜನವರಿ 15 - ಮುಂಬೈ ಇಂಡಿಯನ್ಸ್ (MI) vs ಯುಪಿ ವಾರಿಯರ್ಸ್ (UPW): ನವೀ ಮುಂಬೈ
* ಜನವರಿ 16 - ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಗುಜರಾತ್ ಜೈಂಟ್ಸ್ : ನವೀ ಮುಂಬೈ
* ಜನವರಿ 17 - ಯುಪಿ ವಾರಿಯರ್ಸ್ (UPW) vs ಮುಂಬೈ ಇಂಡಿಯನ್ಸ್ (MI): ನವೀ ಮುಂಬೈ
* ಜನವರಿ 17 - ಡೆಲ್ಲಿ ಕ್ಯಾಪಿಟಲ್ಸ್ (DC) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ನವೀ ಮುಂಬೈ
* ಜನವರಿ 19 - ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವಡೋದರ
* ಜನವರಿ 20 - ಡೆಲ್ಲಿ ಕ್ಯಾಪಿಟಲ್ಸ್ (DC) vs ಮುಂಬೈ ಇಂಡಿಯನ್ಸ್ (MI): ವಡೋದರ
* ಜನವರಿ 22 - ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಜ್ (UPW): ವಡೋದರ
* ಜನವರಿ 24 - ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಡೆಲ್ಲಿ ಕ್ಯಾಪಿಟಲ್ಸ್ (DC): ವಡೋದರ
* ಜನವರಿ 26 - ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಮುಂಬೈ ಇಂಡಿಯನ್ಸ್ (MI): ವಡೋದರ
* ಜನವರಿ 27 - ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (DC): ವಡೋದರ
* ಜನವರಿ 29 - ಯುಪಿ ವಾರಿಯರ್ಜ್ (UPW) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವಡೋದರ
* ಜನವರಿ 30 - ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (MI): ವಡೋದರ
* ಫೆಬ್ರವರಿ 1 - ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಜ್ (UPW): ವಡೋದರ
* ಫೆಬ್ರವರಿ 3 - ಎಲಿಮಿನೇಟರ್
* ಫೆಬ್ರವರಿ 5 - ಫೈನಲ್












Click it and Unblock the Notifications