WPL 2026 RCB: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು: ತಂಡದಲ್ಲಿ ಮತ್ತೊಬ್ಬ ಪೆರ್ರಿ ದರ್ಶನ
WPL 2026 RCB: ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಯು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಹಾಗಾದ್ರೆ, ಈ ಗೆಲುವಿಗೆ ಪ್ರಮುಖ ರುವಾರಿ ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯ ಜನವರಿ 9ರ ಶುಕ್ರವಾರ ನವಿ ಮುಂಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ನಾಡಿನ್ ಡಿ ಕ್ಲರ್ಕ್ ಆಲ್‌ರೌಂಡರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದು, ಇದರಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.

ಮುಂಬೈ ವಿರುದ್ಧ ಆರ್‌ಸಿಬಿ ಗೆಲುವು: ಟಾಸ್ ಗೆದ್ದು ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕುವ ಮೂಲಕ ಆರ್‌ಸಿಬಿಗೆ ಸಾಧಾರಣ 155 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕುವ ಮೂಲಕ ಮುಂಬೈ ವಿರುದ್ಧ ಗೆದ್ದು ಬೀಗಿತು.
ಆರ್‌ಸಿಬಿ ಗೆಲುವಿನ ರುವಾರಿ: ಇನ್ನೇನು ಆರ್‌ಸಿಬಿ ಸೋಲು ಕಾಣುತ್ತದೆ ಎನ್ನುವ ಸಮಯದಲ್ಲಿ ನಾಡಿನ್ ಡಿ ಕ್ಲರ್ಕ್ ಕೊನೆಯವರೆಗೂ ಆಸರೆಯಾಗಿ ನಿಂತು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಅವರು 44 ಬಾಲ್‌ಗಳಲ್ಲಿ 2 ಸಿಕ್ಸ್, 7 ಬೌಂಡರಿಗಳ ಸಹಿತ 63 ರನ್‌ಗಳನ್ನು ಸಿಡಿಸಿ ತಂಡವನ್ನು ಗೆಲ್ಲಿಸಿ ನಾಟ್ ಔಟ್ ಆಗಿ ಉಳಿದರು. ಇವರ ಬ್ಯಾಟಿಂಗ್ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್ ಬೌಲರ್‌ಗಳು ತತ್ತರಿಸಿದಂತೂ ನಿಜ. ಅಷ್ಟರ ಮಟ್ಟಿಗೆ ಕೊನೆವರೆಗೂ ಏಕಾಂಗಿಯಾಗಿ ಸ್ಪೋಟಕ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದರು.
ಮುಂಬೈ ಇಂಡಿಯನ್ಸ್ ನೀಡಿದ 155 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಕೇವಲ 3 ಓವರ್‌ಗಳಲ್ಲೇ ನಾಯಕಿ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ 40 ರನ್ ಸೇರಿಸಿತು. ಆದರೆ, 4ನೇ ಓವರ್‌ನಲ್ಲಿ 18 ರನ್ ಗಳಿಸಿದ್ದ ಮಂಧಾನ ವಿಕೆಟ್ ಒಪ್ಪಿಸಿದರು. ಆಗ ಸರದಿಯಲ್ಲಿ ವಿಕೆಟ್ ಬಿದ್ದವು. ಆದರೆ, ನಾಡಿನ್ ಡಿ ಕ್ಲರ್ಕ್ ಮಾತ್ರ ಕೊನೆವರೆಗೂ ನಿಂತು ಉತ್ತಮ ಆಟ ಆಡಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಬೆವರಿಳಿಸಿದರು.
ಯಾರು ಎಷ್ಟು ರನ್ ಬಾರಿಸಿದರು?: ಆರ್‌ಸಿಬಿ ಪರ ಬ್ಯಾಟ್ ಬೀಸಿದ ಗ್ರೇಸ್ ಹ್ಯಾರಿಸ್ 25(12), ನಾಯಕಿ ಸ್ಮೃತಿ ಮಂಧಾನ 18(13), ದಯಾಲನ್ ಹೇಮಲತಾ 7(12), ರಿಚಾ ಘೋಷ್ 6(6), ರಾಧಾ ಯಾದವ್ 1(2), ಶ್ರೇಯಾಂಕ ಪಾಟೀಲ್ 1(2) ರನ್‌ಗಳನ್ನಷ್ಟೇ ಕಲೆಹಾಕಿದರು. ಈ ವೇಳೆ ತಂಡ ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿತ್ತು.
ಆದರೆ, ನಾಡಿನ್ ಡಿ ಕ್ಲರ್ಕ್ ಸ್ಫೋಟಕ ಬ್ಯಾಟ್ ಬೀಸುವ ಮೂಲಕ ತಂಡಕ್ಕೆ ಆಸರೆಯಾದರು. ಇವರಿಗೆ ಪ್ರೇಮಾ ರಾವತ್ ಉತ್ತಮ ಸಾಥ್ ನೀಡಿದರು. ನಾಡಿನ್ ಡಿ ಕ್ಲರ್ಕ್ 63 ರನ್ ಹಾಗೂ ಪ್ರೇಮಾ ರಾವತ್ 8 ರನ್ ಕಲೆಹಾಕಿ ತಂಡವನ್ನು ಗೆಲ್ಲಿಸಿ ನಾಟ್ ಔಟ್ ಆಗಿ ಉಳಿದರು. ಹೀಗೆ ಇವರು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣರಾದರು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ನಾಡಿನ್ ಡಿ ಕ್ಲರ್ಕ್ ಕೊನೆಯ ಓವರ್‌ನಲ್ಲಿ ಅವರು 18 ರನ್ ಬಾರಿಸಿ ಗಮನ ಸೆಳೆದರು.
ಅಷ್ಟೇ ಅಲ್ಲದೆ, ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್‌ಗಳಿಗೂ ಸಹ ಬೌಲಿಂಗ್ ದಾಳಿ ಮೂಲಕ ನಾಡಿನ್ ಡಿ ಕ್ಲರ್ಕ್ ಕಾಡಿದರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಅವರು 26 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟು ನಾಲ್ಕು ವಿಕೆಟ್ ಕಬಳಿಸಿದರು. ಈ ಮೂಲಕ ಮುಂಬೈ ಅನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕುವಲ್ಲಿಯೂ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಲಾರೆನ್ ಬೆಲ್ ಹಾಗೂ ಶ್ರೇಯಾಂಕಾ ಪಾಟೀಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಒಟ್ಟಿನಲ್ಲಿ ಹೇಳುವುದಾದ್ರೆ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಗಲುವಿನ ರೂಪಾರಿ ನಾಡಿನ್ ಡಿ ಕ್ಲರ್ಕ್ ಆಗಿದ್ದಾರೆ. ಮತ್ತೊಂದೆಡೆ, ಇವರು ಪೆರ್ರಿ ಸ್ಥಾನ ತುಂಬಲು ಸೂಕ್ತ ಆಟಗಾರ್ತಿ ಅಂತಲೂ ಹೇಳಬಹುದು. ಆರ್‌ಸಿಬಿ ಪರ ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿ ಮಾಡಿದರು.












Click it and Unblock the Notifications