WPL 2026 RCB: ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
WPL 2026 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 15 ರನ್‌ಗಳಿಂದ ಸೋಲನುಭವಿಸಿದೆ. ಹಾಗಾದ್ರೆ ಈ ಸೋಲಿಗೆ ಕಾರಣಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15 ರನ್‌ಗಳ ಗೆಲುವು ದಾಖಲಿಸಿತು. ಈ ಜಯದೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇನ್ನೂ ನ್ಯಾಟ್ ಸಿವರ್-ಬ್ರಂಟ್ ಸಿಡಿಸಿದ ಶತಕ ಡಬ್ಲ್ಯೂಪಿಎಲ್ ಇತಿಹಾಸದದಲ್ಲೇ ಮೊದಲನೇಯದ್ದಾಗಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ನಿಗಧಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ, 200 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ನಿಗಧಿತ 20 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು 184 ರನ್‌ಗಳನ್ನಷ್ಟೇ ಕಲೆಹಾಕಿ ಸೋಲನುಭವಿಸಿತು. ಈ ಪಂದ್ಯದಲ್ಲಿ ಗೆದ್ದಿದ್ದರೆ, ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುತ್ತಿತ್ತು. ಇನ್ನೂ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳ ವಿವರ ಇಲ್ಲಿದ ನೋಡಿ.
ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
ಮೊದಲನೇ ಕಾರಣ: ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಗೆ ಹಲವು ಪ್ರಮುಖ ಕಾರಣಗಳಿವೆ ಮೊದಲನೆಯದಾಗಿ, ಬೌಲಿಂಗ್ ವೈಫಲ್ಯ ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿತು. ಮುಂಬೈ ಪರ ಸ್ಫೋಟಕ ಬ್ಯಾಟ್ ಬೀಸಿದ ನ್ಯಾಟ್ ಸಿವರ್-ಬ್ರಂಟ್ ನಿಯಂತ್ರಿಸುವಲ್ಲಿ ಆರ್‌ಸಿಬಿ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಮಧ್ಯದ ಓವರ್‌ಗಳಲ್ಲಿ ರನ್‌ಗಳಿಗೆ ಬ್ರೇಕ್ ಹಾಕುವಲ್ಲಿ ವಿಫಲರಾದರು. ಪರಿಣಾಮ ಮುಂಬೈ ಇಂಡಿಯನ್ಸ್ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯ ಆಯಿತು.
ಎರಡನೇ ಕಾರಣ: ಮಿಸ್ ಫೀಲ್ಡಿಂಗ್ ಕೂಡ ಮುಂಬೈ ಇಂಡಿಯನ್ಸ್ ಗರಿಷ್ಠ ಮೊತ್ತಕ್ಕೆ ಕಾರಣವಾದವು. ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಹೆಚ್ಚುವರಿ ರನ್‌ಗಳನ್ನು ನೀಡಿತು.
ಮೂರನೇ ಕಾರಣ: ಆರ್‌ಸಿಬಿ ಪರ ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡುಬಂದಿತು. ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಲು ಸಾಧ್ಯವಾಗದೆ ಬೇಗನೇ ವಿಕೆಟ್ ಒಪ್ಪಿಸಿದರು. ಇದರಿಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಹೆಚ್ಚು ಒತ್ತಡ ಬಿದ್ದಿತು.
ಅಲ್ಲದೆ, ರನ್ ಚೇಸ್ ಸಮಯದಲ್ಲಿ ತಾಳ್ಮೆಯ ಕೊರತೆ ಕಂಡುಬಂದಿತು. ಅಗತ್ಯ ರನ್‌ರೇಟ್ ಹೆಚ್ಚಾದಾಗ ಅನಗತ್ಯ ಶಾಟ್‌ಗಳನ್ನು ಮಾಡಿದ್ದು ವಿಕೆಟ್‌ಗಳ ಪತನಕ್ಕೆ ಕಾರಣವಾಯಿತು. ಒಟ್ಟಿನಲ್ಲಿ, ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಮೂರು ವಿಭಾಗಗಳಲ್ಲೂ ಸಹ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. ಇವುಗಳೇ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಬಹುದು.
ಮುಂಬೈ ಇಂಡಿಯನ್ಸ್ ನೀಡಿದ 200 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಲ್ಲೇ ವಿಕೆಟ್‌ದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ ಪಂದ್ಯಕ್ಕೆ ಜೀವ ತುಂಬಿದರೂ, ತಂಡ 9 ವಿಕೆಟ್ ನಷ್ಟಕ್ಕೆ 184 ರನ್‌ಗಳಷ್ಟೇ ಗಳಿಸಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ರಿಚಾ ಘೋಷ್ 50 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 90 ರನ್ ಸಿಡಿಸಿ ಅಬ್ಬರಿಸಿದರೂ ಸಹ ಆರ್‌ಸಿಬಿ ಗೆಲ್ಲಲು ಸಾಧ್ಯವಾಗಲಿಲ್ಲ. 15 ರನ್‌ಗಳಿಗೆ ಸೋಲೊಪ್ಪಿಕೊಂಡಿತು. ಆರಂಭಿಕ ಉತ್ತಮ ರನ್‌ಗಳು ಬಂದಿದ್ದರೆ, ನಂತರ ಬಂದತಹ ಬ್ಯಾಟರ್‌ಗಳ ಮೇಲೆ ಒತ್ತಡ ಬೀಳುತ್ತಿರಲಿಲ್ಲ. ತಂಡವೂ ಕೂಡ ಸೋಲುತ್ತಿರಲಿಲ್ಲ.
ಆರ್‌ಸಿಬಿ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್.












Click it and Unblock the Notifications