WPL 2026 RCB: ಆರ್‌ಸಿಬಿಯಿಂದ ₹85,00,000ದ ಸ್ಟಾರ್ ಆಲ್‌ರೌಂಡರ್ ಔಟ್: ಮಾಹಿತಿ ಇಲ್ಲಿದೆ ತಿಳಿಯಿರಿ
WPL 2026 RCB: ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿತು. ಈ ನಡುವೆಯೇ ಇದೀಗ ಸ್ಟಾರ್ ಆಲ್‌ರೌಂಡರ್ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಹಾಗಾದ್ರೆ, ಕಾರಣ ಏನು ಹಾಗೂ ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರಮುಖ ಕಾರಣವೇ ನಾಡಿನ್ ಡಿ ಕ್ಲರ್ಕ್ ಮಾರಕ ಬೌಲಿಂಗ್ ದಾಳಿ ಹಾಗೂ ಸ್ಫೋಟಕ ಬ್ಯಾಟಿಂಗ್. ನಾಲ್ಕು ಓವರ್ ಬೌಲಿಂಗ್ ಮಾಡಿ 26 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು. ಮತ್ತೊಂದೆಡೆ ಬ್ಯಾಟಿಂಗ್‌ನಲ್ಲೂ ಕೂಡ ಹೊಡಿಬಡಿ ಆಟ ಆಡಿ ಮಿಂಚಿದರು.

ಸೋಲುವ ಹಂತದಲ್ಲಿ ಆರ್‌ಸಿಬಿ ತಂಡಕ್ಕೆ ಆಸರೆಯಾಗಿ ನಿಂತು ಏಕಾಂಗಿ ಹೋರಾಟ ನಡೆಸಿ ಗೆಲುವಿನ ದಡ ಸೇರಿಸಿದರು. ಸ್ಫೋಟಕ ಬ್ಯಾಸ್ ಬೀಸಿ 2 ಸಿಕ್ಸ್, 7 ಬೌಂಡರಿಗಳ ಸಹಿತ 63 ರನ್‌ಗಳನ್ನು ಸಿಡಿಸಿ ತಂಡವನ್ನು ಗೆಲ್ಲಿಸಿ ನಾಟ್‌ಔಟ್ ಆಗಿ ಉಳಿದರು. ಹೀಗೆ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಬೆವರಿಳಿಸಿದ ನಾಡಿನ್ ಡಿ ಕ್ಲರ್ಕ್ ಆಟ ನೋಡಿ ಬಹುತೇಕ ಮಂದಿ ಬೆಂಗಳೂರು ತಂಡಕ್ಕೆ ಮತ್ತೊಬ್ಬ ಪೆರ್ರಿ ಎಂಟ್ರಿ ಕೊಟ್ಟಿದ್ದಾರೆ ಅಂತಾ ಹೇಳುತ್ತಿದ್ದಾರೆ.
ಆದರೆ, ಡಬ್ಲ್ಯೂಪಿಎಲ್ 2026ರ ಚೊಚ್ಚಲ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿದ ನಡುವೆಯೇ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿಗೆ ಆಘಾತ ಎದುರಾಗಿದೆ. ಹೌದು.. ಸ್ಟಾರ್ ಆಲ್‌ರೌಂಡರ್ ಆಟಗಾರ್ತು ಪೂಜಾ ವಸ್ತ್ರಕರ್ ಗಾಯಗೊಂಡು ಅರ್ಧ ಸೀಸನ್‌ನಿಂದ ಹೊರಗುಳಿದಿದ್ದು, ಇದರಿಂದ ತಂಡಕ್ಕೆ ಹಿನ್ನಡೆ ಆದಂತಾಗಿದೆ.
ಆರ್‌ಸಿಬಿಗೆ ಆಘಾತ: ಮಂಡಿ ನೋವಿನಿಂದ ಪೂಜಾ ವಸ್ತ್ರಕರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಏನಿಲ್ಲ ಅಂದರೂ ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಪೂಜಾ ವಸ್ತ್ರಕರ್ ಈಗ ಈ ಆವೃತ್ತಿಯ ಅರ್ಧದಷ್ಟು ಸಮಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಆರ್‌ಸಿಬಿ ಭಾರತೀಯ ಕ್ರಿಕೆಟ್ ಆಟಗಾರ್ತಿ ಪೂಜಾ ಅವರನ್ನು 85,00,000 ರೂಪಾಯಿಗೆ ಖರೀದಿ ಮಾಡಿದೆ. ಇನ್ನೂ ಇದೀಗ ಅವರು ಮಂಡಿನೋವಿನ ಗಾಯಕ್ಕೆ ಒಳಗಾಗಿರುವ ಕಾರಣ ಮುಂದಿನ ಯುಪಿ ವಾರಿಯರ್ಸ್ ವಿರುದ್ಧವೂ ಆಡುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ.
ಮುಂಬೈ ಪರ ಆಡಿದ ಪೂಜಾ: ಕಳೆದ ಆವೃತ್ತಿಯಲ್ಲಿ ಪೂಜಾ ವಸ್ತ್ರಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಆದರೆ, ಈ ಬಾರಿ ಎಂಐ ಫ್ರಾಂಚೈಸಿ ಕೈಬಿಟ್ಟಿತ್ತು. ಅವರು ಕಳೆದ ಮೂರು ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದಾರೆ. ಮುಂಬೈ ಎಲ್ಲಾ ಮೂರು ಸೀಸನ್‌ಗಳಲ್ಲಿ ಅವರಿಗೆ ₹1.90 ಕೋಟಿ ರೂಪಾಯಿ ಪಾವತಿ ಮಾಡಿತ್ತು.
ಯಾವೆಲ್ಲಾ ಪಂದ್ಯಗಳಲ್ಲಿ ಆಡಿದ್ದಾರೆ?: ಪೂಜಾ ವಸ್ತ್ರಕರ್ ಈವರೆಗೆ ಡಬ್ಲ್ಯೂಪಿಎಲ್‌ನ 16 ಪಂದ್ಯಗಳಲ್ಲಿ ಆಡಿದ್ದಾರೆ. 28.85 ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿ 16 ಪಂದ್ಯಗಳಲ್ಲಿ 116.66 ಸ್ಟ್ರೈಕ್ ರೇಟ್‌ನಲ್ಲಿ 126 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನೂ ಭಾರತ ತಂಡದಲ್ಲಿ ಪೂಜಾ ಅವರ ಪ್ರದರ್ಶನ ನೋಡುವುದಾದರೆ, ಅವರು ಈವರೆಗೆ 5 ಟೆಸ್ಟ್, 33 ಏಕದಿನ ಮತ್ತು 72 ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಗಿಟ್ಟಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾ ಟೀಮ್ ಇಂಡಿಯಾ ಪರ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 27 ವಿಕೆಟ್, ಟಿ-20ಐಗಳಲ್ಲಿ 58 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ 111 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ, ಪೂಜಾ 4 ಅರ್ಧಶತಕಗಳನ್ನು ಒಳಗೊಂಡಂತೆ 585 ರನ್‌ಗಳನ್ನು ಕಲೆಹಾಕಿದ್ದಾರೆ. ಟಿ-20ಐ ಸ್ವರೂಪದಲ್ಲಿಯೂ ಅವರು 332 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನೂ ಇದೀಗ ಆರ್‌ಸಿಬಿ ಈ ಬಾರಿ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿ ಮಾಡಿದೆ. ಸದ್ಯ ಅವರು ಗಾಯದಿಂದ ಹೊರಗುಳಿದಿದ್ದು, ಇದರು ತಂಡಕ್ಕೆ ಆಘಾತ ಆದಂತಾಗಿದೆ.












Click it and Unblock the Notifications