WPL 2026 RCB: ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
WPL 2026 RCB: ಡಬ್ಲ್ಯೂಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿದೆ. ಇದೀಗ ಎಲ್ಲರ ಚಿತ್ತ 2026 ರತ್ತ ನೆಟ್ಟಿದೆ. ಉದ್ಘಾಟನಾ ಪಂದ್ಯ ಆರ್‌ಸಿಬಿ ಹಾಗೂ ಎಂಐ ನಡುವೆ ಜನವರಿ 9ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದ್ರೆ ಈ ಬಾರಿಯ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಪಂದ್ಯಗಳನ್ನಾಡಲಿದೆ ಹಾಗೂ ಯಾವ ತಂಡಗಳ ಮೇಲೆ ಎನ್ನುವ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಉದ್ಘಾಟನಾ ಪಂದ್ಯದ ವಿವರ: ಮಹಿಳಾ ಪ್ರೀಮಿಯರ್ ಲೀಗ್ 2026ರ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜನವರಿ 9ರಂದು ನವಿ ಮುಂಬೈನಲ್ಲಿ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ತಂಡವ ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ.

ಡಬ್ಲ್ಯೂಪಿಎಲ್ ಆರಂಭ ಯಾವಾಗ?: ಡಬ್ಲ್ಯೂಪಿಎಲ್ ಪಂದ್ಯ ಜನವರಿ 9ರಿಂದ ಆರಂಭವಾಗಲಿದ್ದು, ಫೈನಲ್ ಫೆಬ್ರವರಿ 5ರಂದು ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಂದರೆ ಜನವರಿ 9ರಂದು ಆರ್‌ಸಿಬಿಯು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಆರ್‌ಸಿಬಿ 2024ರಲ್ಲಿ ಟ್ರೋಫಿ ಗೆದ್ದುಕೊಂಡಿದ್ದು, 2025ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿತ್ತು. ಇದೀಗ ಈ ಬಾರಿ ಇವೆರಡು ಟ್ರೋಫಿ ಗೆಲ್ಲುವ ಸಾಲಿನ ತಂಡಗಳಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ಕಳೆದ ಬಾರಿ ಸೋಲು ಕಂಡು ಹೊರಬಿದ್ದ ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲಲ್ಲೇವೆನ್ನುವ ಪಣತೊಟ್ಟು ನಿಂತಿದೆ.
ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳ
* ಜನವರಿ 9: ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ - ನವಿ ಮುಂಬೈ
* ಜನವರಿ 12: ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್ - ನವಿ ಮುಂಬೈ
* ಜನವರಿ 16: ಆರ್‌ಸಿಬಿ ಹಾಗೂ ಗುಜರಾತ್ ಜೈಂಟ್ಸ್ - ನವಿ ಮುಂಬೈ
* ಜನವರಿ 17: ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ - ನವಿ ಮುಂಬೈ
* ಜನವರಿ 19: ಆರ್‌ಸಿಬಿ ಹಾಗೂ ಗುಜರಾತ್ ಜೈಂಟ್ಸ್ - ವಡೋದರ
* ಜನವರಿ 24: ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ - ವಡೋದರ
* ಜನವರಿ 26: ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ - ವಡೋದರ
* ಜನವರಿ 29: ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್ - ವಡೋದರ
ಪಂದ್ಯಗಳ ಸಮಯದ ವಿವರ: ಇನ್ನೂ ಎಲಿಮಿನಟರ್ ಪಂದ್ಯ ಫೆಬ್ರವರಿ 3ರಂದು ವಡೋದರದಲ್ಲಿ ನಡೆಯಲಿದ್ದು, ಇದೇ ಮೈದಾನದಲ್ಲಿ ಫೆಬ್ರವರಿ 5ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನೂ ಈ ಆವೃತ್ತಿಯಲ್ಲಿ ಆರ್‌ಸಿಬಿಯು ನಾಲ್ಕು ಪಂದ್ಯಗಳ್ನು ನವಿ ಮುಂಬೈ ಮತ್ತು ನಾಲ್ಕು ಪಂದ್ಯಗಳನ್ನು ವಡೋದರದಲ್ಲಿ ಆಡಲಿದೆ. ಈ ಎಂಟು ಪಂದ್ಯಗಳ ಸಮಯ ಸಂಜೆ 7:30. ಒಟ್ಟಿನಲ್ಲಿ ಈ ಬಾರಿ ಟ್ರೋಫಿ ಗೆದ್ದೇ ಗೆಲ್ಲಬೇಕು ಎಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗ ಪಣ ತೊಟ್ಟು ನಿಂತಿದೆ.
ಆರ್‌ಸಿಬಿ ಮಹಿಳಾ ತಂಡ: ಸ್ಮೃತಿ ಮಂದಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ದಯಾಲನ್ ಹೇಮಲತಾ, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್.












Click it and Unblock the Notifications