WPL 2025 Retention: ಎಲ್ಲಾ ಐದು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ
ಐಪಿಎಲ್‌ನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಇದೀಗ ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಗಾಗಿ ಎಲ್ಲಾ ಐದು ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಎಲ್ಲಾ ತಂಡಗಳಿಗೆ ಗರಿಷ್ಠ ಆರು ವಿದೇಶಿ ಆಟಗಾರರನ್ನು ಒಳಗೊಂಡಂತೆ 18 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.
ನಿರೀಕ್ಷೆಯಂತೆ ಎಲ್ಲಾ ಫ್ರಾಂಚೈಸಿಗಳು ಬಹುತೇಕ ಆಟಗಾರರನ್ನು ಉಳಿಸಿಕೊಂಡಿದ್ದು, ಕೆಲವೇ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಯಾವುದೇ ಹೆಚ್ಚಿನ ಬದಲಾವಣೆ ಮಾಡದೆ ಕಳೆದ ಬಾರಿಯ ತಂಡವನ್ನೇ ಉಳಿಸಿಕೊಂಡಿದೆ.

2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆರ್ ಸಿಬಿ 14 ಆಟಗಾರರನ್ನು ಉಳಿಸಿಕೊಂಡಿದೆ. ಸ್ಮೃತಿ ಮಂಧಾನ ನಾಯಕಿಯಾಗಿ ಮುಂದುವರೆಯಲಿದ್ದಾರೆ. ರಿಷಾ ಘೋಷ್, ಎಲ್ಲಿಸ್ ಪೆರ್‍ರಿ, ಸೋಫಿ ಡಿವೈನ್ ಸೇರಿದಂತೆ ಎಲ್ಲಾ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಎಲ್ಲಾ 5 ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಮತ್ತು ಉಳಿದಿರುವ ಪರ್ಸ ವಿವರ ಇಲ್ಲಿ ನೀಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಮೃತಿ ಮಂಧಾನ (ನಾಯಕಿ), ಶಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್‍ರಿ, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ದಾನಿ ವ್ಯಾಟ್ (ಯುಪಿಯಿಂದ ಟ್ರೇಡ್ ಮಾಡಲಾಗಿದೆ).
ಉಳಿದಿರುವ ಪರ್ಸ್ - ₹3.25 ಕೋಟಿ
ಮುಂಬೈ ಇಂಡಿಯನ್ಸ್
ಎಂಐ ಕೂಡ ಎಲ್ಲಾ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಆದರೆ ಅಚ್ಚರಿ ಎನ್ನುವಂತೆ ಮೊದಲ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ಇಸ್ಸಿ ವಾಂಗ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, 14 ಆಟಗಾರರನ್ನು ಉಳಿಸಿಕೊಂಡಿದೆ.
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹೇಲಿ ಮ್ಯಾಥ್ಯೂಸ್, ಜಿಂತಿಮಣಿ ಕಲಿತಾ, ನ್ಯಾಟ್-ಸಿವರ್ ಬ್ರಂಟ್, ಪೂಜಾ ವಸ್ತ್ರಾಕರ್, ಎಸ್ ಸಜನಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಅಮಂಜೋತ್ ಕೌರ್, ಅಮನ್‌ದೀಪ್ ಕೌರ್, ಕೀರ್ತನಾ.
ಉಳಿದಿರುವ ಪರ್ಸ್ - ₹2.65 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್
ಮೆಗ್ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ.
ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಆಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ರಾಧಾ ಯಾದವ್, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಜೆಸ್ ಜೋನಾಸೆನ್, ಟಿಟಾಸ್ ಸಾಧು, ಮಿನ್ನು ಮಣಿ, ಸ್ನೇಹಾ ದೀಪ್ತಿ.
ಪರ್ಸ್ ಎಡ - ₹2.5 ಕೋಟಿ
ಯುಪಿ ವಾರಿಯರ್ಸ್
ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಚಾಮರಿ ಅಟಾಪಟ್ಟು, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ತಹಿಲಾ ಮೆಗ್ರಾತ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಠಾಕೋರ್, ಅಂಜಲಿ ಸರ್ವಾಣಿ, ಗೌಹರ್ ಸುಲ್ತಾನಾ, ಪೂನಂ ಖೇನ್ಮಾರ್, ಉಮಾ ಚೆಟ್ರಿ, ವೃಂದಾ ದಿನೇಶ್.
ಉಳಿದಿರುವ ಪರ್ಸ್- ₹3.9 ಕೋಟಿ
ಗುಜರಾತ್ ಜೈಂಟ್ಸ್
ಗುಜರಾತ್ ಜೈಂಟ್ಸ್ ಹಂಗಾಮಿ ನಾಯಕಿಯಾಗಿದ್ದ ಸ್ನೇಹ್ ರಾಣಾರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಲೀ ತಹುಹು ಮತ್ತು ಕ್ಯಾಥರಿನ್ ಬ್ರೈಸ್ ಅವರನ್ನು ಕೂಡ ಬಿಡುಗಡೆ ಮಾಡಿದೆ.
ಬೆತ್ ಮೂನಿ (ನಾಯಕಿ), ಲಾರಾ ವೊಲ್ವಾರ್ಡ್ಟ್, ಫೋಬೆ ಲಿಚ್‌ಫೀಲ್ಡ್, ಆಶ್ಲೆ ಗಾರ್ಡನರ್, ಹರ್ಲೀನ್ ಡಿಯೋಲ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್, ಶಬ್ನಮ್ ಶಕಿಲ್, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಸಯಾಲಿ ಸತ್ಘರೆ.
ಉಳಿದಿರುವ ಪರ್ಸ್ - ₹4.4 ಕೋಟಿ












Click it and Unblock the Notifications