RCB Vs MI: ಮುಂಬೈ ಇಂಡಿಯನ್ಸ್ ವಿರುದ್ಧ ತವರಲ್ಲಿ ಅಬ್ಬರಿಸಲು ಆರ್‌ಸಿಬಿ ಸಜ್ಜು: ತಂಡಗಳು ಹೀಗಿವೆ
RCB: ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದ ಆರ್‌ಸಿಬಿ ತಂಡ 4 ಪಾಂಯಿಂಟ್ಸ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಂದಿನ (ಫೆಬ್ರವರಿ 21) ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲ್ಲುವ ತವಕದಲ್ಲಿದ್ದು, ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ ಇದೆ. ತಂಡಗಳು ಹೇಗಿವೆ ಎಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚೆಗಷ್ಟೇ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎರಡನೇ ಗೆಲವು, ಮೊದಲ ಉದ್ಘಾಟನಾ ಪಂದ್ಯದಲ್ಲಿ ಗುಜಾರಾತ್ ತಂಡವನ್ನು ಸೋಲಿಸಿ ಇದೀಗ ಮೂರನೇ ಪಂದ್ಯವನ್ನು ಇಂದು ಮುಬೈ ವಿರುದ್ಧ ಕಾದಾಡಲಿದೆ. ಈ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಸತತ ಹ್ಯಾಟ್ರಿಕ್ ಗೆಲುವಿನ ಭರವಸೆಯನ್ನು ಸ್ಮೃತಿ ಮಂದಾನಾ ಪಡೆ ಮೂಡಿಸಿದೆ. ಈ ಪಂದ್ಯ ವೀಕ್ಷಣೆಗಾಗಿ ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿದೆ.

ಐಪಿಎಲ್, ಡಬ್ಲ್ಯೂಪಿಎಲ್ ವೇಳೆ ಆರ್‌ಸಿಬಿ ಚೈನ್ನೈ, ಮುಂಬೈ ನಡುವೆ ನಡೆಯುವ ಪಂದ್ಯವನ್ನು ವೀಕ್ಷಣೆ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಹಾಗೆಯೇ ಇಂದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮತ್ತು ಮುಂಬೈ ನಡುವೆ ಹೈ ವೋಲ್ಟೇಜ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ 7ನೇ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಮತ್ತೊಂದೆಡೆ ತವರಿನಲ್ಲಿ ಸತತ ಮೂರನೇ ಗೆಲುವು ದಾಖಲಿಸಲು ಸ್ಮೃತಿ ಮಂದಾನಾ ಭರ್ಜರಿ ತಯಾರಿ ನಡೆಸಿದೆ. ಮತ್ತೊಂದೆಡೆ ಆರ್‌ಸಿಬಿಗೆ ಟಕ್ಕರ್ ಕೊಡುವುದಕ್ಕೆ ಹರ್ಮನ್ ಪ್ರೀತ್ ಕೌರ್ ಪಡೆ ಕೂಡ ಸಿದ್ಧತೆ ನಡೆಸಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದ್ದು, 7.30ಕ್ಕೆ ಪಂದ್ಯ ಆರಂಭ ಆಗಲಿದೆ.
ಮಹಿಳಾ ಪ್ರೀಮಿಯರ್ ಲೀಗ್-2025ರ ಅತ್ಯಂತ ವಿಶೇಷ ವಿಷಯ ಏನೆಂದರೆ ಪಂದ್ಯಗಳು ನಡೆಯುತ್ತಿರುವ ಸ್ಥಳ. ಮೊದಲ ಸೀಸನ್ ಕೇವಲ ಒಂದೇ ಸ್ಥಳದಲ್ಲಿ ನಡೆದಿತ್ತು. ಈ ಇಡೀ ಸೀಸನ್ ಮುಂಬೈನಲ್ಲಿ ನಡೆದಿತ್ತು. ಎರಡನೇ ಸೀಸನ್ ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ ನಡೆದಿತ್ತು. ಈ ಬಾರಿ ಒಟ್ಟು ನಾಲ್ಕು ಸ್ಥಳಗಳಲ್ಲಿ WPL ನಡೆಯುತ್ತಿದೆ. ಈಗಾಗಲೇ ವಡೋದರಾದಲ್ಲಿ 6 ಪಂದ್ಯಗಳು ಪೂರ್ಣಗೊಂಡಿವೆ. ಅಂತಿಮ ಹಂತದಲ್ಲಿ 4 ಪಂದ್ಯಗಳು ಲಕ್ನೋದಲ್ಲಿ ಮತ್ತು 4 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಟೂರ್ನಿಯ ಎಲಿಮಿನೇಟರ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂದಾನ (ಕ್ಯಾಪ್ಟನ್), ಅಭಿನೇನಿ, ಚಾರ್ಲಿ ಡೀನ್, ಎಲಿಸ್ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ಹೀದರ್ ಗ್ರಹಾಂ, ಕನಿಕಾ ಅಹುಜಾ, ರಾಘ್ವಿ ಬಿಸ್ಟ್, ಸ್ನೇಹ ರಾಣಾ, ನುಝತ್ ಪರ್ವೀನ್, ರಿಚಾ ಘೋಷ್ (ವಿಕೆಟ್ ಕೀಪರ್), ಏಕ್ತಾ ಬಿಶ್ತ್, ಜಾಗ್ರವಿ ಪವಾರ್, ವಿ.ಜೆ.ಜೋಶಿತಾ, ಕಿಮ್ ಗಾರ್ತ್, ಪ್ರೇಮಾ ರಾವತ್, ರೇಣುಕಾ ಸಿಂಗ್.
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ ನಾಯಕಿ (ನಾಯಕಿ), ಅಕ್ಷಿತಾ ಸೂರ್ಯಪ್ರಕಾಶ್ ಮಹೇಶ್ವರಿ, ಅಮಂದೀಪ್ ಕೌರ್, ಅಮನ್‌ಜೋತ್ ಕೌರ್, ಅಮೆಲಿಯಾ ಕೇರ್, ಕೋಯ್ಲ್ ಟ್ರಯಾನ್, ಹೇಲಿ ಮ್ಯಾಥ್ಯೂಸ್, ನಡಿನೆ ಡಿ ಕ್ಲರ್ಕ್, ನಾಟ್ ಸಿವರ್ ಬ್ರಂಟ್, ಪೂಜಾ ವಸ್ತ್ರಕರ್, ಸಜೀವನ್ ಸಾಜನಾ, ಕಮಲಿನಿ ಗುಣಾಲನ್ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ, ಜಂತಿಮಣಿ ಕಲಿತಾ, ಅರ್ತಮೂರ್ತಿ ಕೀರ್ತನಾ, ಬ್ಯಾರನೆಸ್ ಸಿಸೋಡಿಯಾ, ಸೈಕಾ ಇಶಾಕ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್ .












Click it and Unblock the Notifications