WPL 2025: ಬೆಂಗಳೂರಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು; ದಿನಾಂಕ, ತಂಡಗಳ ವಿವರ

ಐಪಿಎಲ್ ಮೆಗಾ ಹರಾಜು ಮುಗಿದ ಬೆನ್ನಲ್ಲೇ 2025 ರ ಋತುವಿನ ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜು ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ (WPL) ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡಗಳ ಪರ್ಸ್‌ ಅನ್ನು 13.5 ಕೋಟಿ ರೂಪಾಯಿಯಿಂದ 15 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಐದು ಫ್ರಾಂಚೈಸಿಗಳು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ.

ಇಂಗ್ಲೆಂಡ್ ನಾಯಕಿ ಹೀಥರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲಿಯಾ ತಹುಹು, ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರು ಮಿನಿ ಹರಾಜಿನಲ್ಲಿರು ಪ್ರಮುಖ ಅಂತಾರಾಷ್ಟ್ರೀಯ ಆಟಗಾರ್ತಿಯರಾಗಿದ್ದಾರೆ. ಆಲ್‌ರೌಂಡರ್ ಸ್ನೇಹ್ ರಾಣಾ, ಲೆಗ್‌ಸ್ಪಿನ್ನರ್ ಪೂನಮ್ ಯಾದವ್ ಮತ್ತು ಬ್ಯಾಟರ್ ವೇದಾ ಕೃಷ್ಣಮೂರ್ತಿ ಪ್ರಮುಖ ಪ್ರಮುಖ ಭಾರತೀಯ ಆಟಗಾರ್ತಿಯರಾಗಿದ್ದಾರೆ.

Wpl 2025 mini auction december 15 bengaluru

ಫ್ರಾಂಚೈಸಿಗಳ ಪರ್ಸ್ ಎಷ್ಟಿದೆ?

ಮೆಗ್ ಲ್ಯಾನಿಂಗ್ ನೇತೃತ್ವದ ಮತ್ತು 2023 ಮತ್ತು 2024 ರಲ್ಲಿ ರನ್ನರ್-ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್, ₹2.5 ಕೋಟಿ ಪರ್ಸ್ ಹೊಂದಿದ್ದು, ಕಡಿಮೆ ಪರ್ಸ್‌ನೊಂದಿಗೆ ಹರಾಜಿಗೆ ಬರಲಿದೆ. ಎರಡು ಆವೃತ್ತಿಯಲ್ಲಿ ಕೊನೆಯ ಸ್ಥಾನ ಗಳಿಸಿರುವ ಗುಜರಾತ್ ಜೈಂಟ್ಸ್ ₹4.4 ಕೋಟಿ ಪರ್ಸ್ ಹೊಂದಿದ್ದು ಹೆಚ್ಚಿನ ಹಣ ಹೊಂದಿರುವ ತಂಡವಾಗಿದೆ. ಏಳು ಆಟಗಾರರನ್ನು ಬಿಡುಗಡೆ ಮಾಡಿದ್ದು ತಂಡವನ್ನು ಮತ್ತೆ ಕಟ್ಟಲು ಸಜ್ಜಾಗಿದೆ.

ಆರ್‌ಸಿಬಿ ಪರ್ಸ್ ಎಷ್ಟಿದೆ?

ಸ್ಮೃತಿ ಮಂಧಾನ ಮತ್ತು ನ್ಯೂಜಿಲೆಂಡ್‌ನ ಟಿ 20 ವಿಶ್ವಕಪ್ ವಿಜೇತ ನಾಯಕಿ ಸೋಫಿ ಡಿವೈನ್ ಸೇರಿದಂತೆ ಪ್ರಮುಖ ಆಟಗಾರರನ್ನು ಹೊಂದಿರುವ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಏಳು ಆಟಗಾರರನ್ನು ಬಿಡುಗಡೆ ಮಾಡಿದೆ. ಕಪ್ ಗೆದ್ದ ತಂಡವನ್ನು ಹಾಗೇ ಉಳಿಸಿಕೊಂಡಿದ್ದು ಮತ್ತಷ್ಟು ಉತ್ತಮ ಆಟಗಾರರನ್ನು ಕೊಳ್ಳಲು ಸಜ್ಜಾಗಿದೆ. 3.25 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಹರಾಜಿಗೆ ಪ್ರವೇಶಿಸಲಿದೆ.

ಇಂಗ್ಲೆಂಡ್‌ ಡ್ಯಾನಿ ವ್ಯಾಟ್‌ ಯುಪಿ ವಾರಿಯರ್ಸ್‌ ತಂಡದಿಂದ ಆರ್ ಸಿಬಿ ತಂಡಕ್ಕೆ ಟ್ರೇಡ್ ಆಗಿದ್ದಾರೆ. 2024ರಲ್ಲಿ ಯುಪಿ ವಾರಿಯರ್ಸ್ ತಂಡದಲ್ಲಿದ್ದ ಅವರು, ಒಂದೇ ಒಂದು ಪಂದ್ಯದಲ್ಲಿ ಕೂಡ ಆಡಲು ಅವಕಾಶ ಸಿಕ್ಕಿರಲಿಲ್ಲ.

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿ ಮುಂಬೈನಲ್ಲಿ ನಡೆಯಿತು. ಎರಡನೇ ಆವೃತ್ತಿಯಲ್ಲಿ 22 ಪಂದ್ಯಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆದವು. ಬಿಸಿಸಿಐ ಹೊಸ ಸ್ಥಳಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಆಯೋಜನೆ ಮಾಡಲು ಉತ್ಸಾಹದಲ್ಲಿದೆ. ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯು ಫೆಬ್ರವರಿ-ಮಾರ್ಚ್ 2025ರಲ್ಲಿ ನಡೆಯಲಿದೆ. 2026ರಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಪಂದ್ಯಾವಳಿ ನಡೆಯಲು ಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+