WPL 2025: ವಿವಿಧ ತಂಡಗಳಿಗೆ ಹರಾಜಾದ ಆಟಗಾರರ ಪಟ್ಟಿ
ಮಹಿಳಾ ಪ್ರೀಮಿಯರ್ ಲೀಗ್ 2025ರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಮಿನಿ ಹರಾಜು ಆದರೂ ಕೆಲವು ಆಟಗಾರರು ಕೋಟಿ ಕೋಟಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 120 ಆಟಗಾರರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರೂ, 18 ಆಟಗಾರರು ಮಾತ್ರ ಹರಾಜಾದರು. ಕೆಲವು ಆಟಗಾರರು ಕೋಟಿ ಮೊತ್ತ ಪಡೆದರೆ ಇನ್ನೂ ಕೆಲವು ಆಟಗಾರರು ಮೂಲ ಬೆಲೆಗೆ ಹರಾಜಾದರು. ಹಿರಿಯ ಆಟಗಾರರಿಗಿಂತ ಕಿರಿಯ ಆಟಗಾರರಿಗೆ ಈ ಬಾರಿ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಇತ್ತು.
ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬರೋಬ್ಬರಿ 1.70 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ಪಾಲಾಗುವ ಮೂಲಕ ಹರಾಜು ಪ್ರಕ್ರಿಯೆ ಆರಂಭವಾಯಿತು. ಆಲ್‌ರೌಂಡರ್ ಸಿಮ್ರಾನ್ ಶೇಕ್, ತಮಿಳುನಾಡಿನ 16 ವರ್ಷದ ಬ್ಯಾಟರ್ ಕಮಲಿನಿ ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿದರು.

ಸಿಮ್ರಾನ್ ಶೇಕ್‌ರನ್ನು ಖರೀದಿ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ತೀವ್ರ ಪೈಪೋಟಿ ನಡೆದರೂ ಕೊನೆಗೆ ಗುಜರಾತ್ 1.90 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ಮೇಲುಗೈ ಸಾಧಿಸಿತು. 16 ವರ್ಷದ ಬ್ಯಾಟರ್ ಕಮಲಿನಿ ಭಾನುವಾರ ನಡೆದ ಅಂಡರ್ 19 ಮಹಿಳಾ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 44 ರನ್ ಗಳಿಸಿದ ಬಳಿಕ 1.60 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರು.
ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮಾರಾಟವಾದ ಆಟಗಾರರು
ಸಿಮ್ರಾನ್ ಶೇಖ್ - ₹1.90 ಕೋಟಿ - ಗುಜರಾತ್ ಜೈಂಟ್ಸ್
ಡಿಯಾಂಡ್ರಾ ಡಾಟಿನ್ - ₹1.70 ಕೋಟಿ - ಗುಜರಾತ್ ಜೈಂಟ್ಸ್
ಜಿ ಕಮಲಿನಿ - ₹1.60 ಕೋಟಿ - ಮುಂಬೈ ಇಂಡಿಯನ್ಸ್
ಪ್ರೇಮಾ ರಾವತ್ - ₹1.2 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಎನ್ ಚರಣಿ - ₹55 ಲಕ್ಷ - ಡೆಲ್ಲಿ ಕ್ಯಾಪಿಟಲ್ಸ್
ನಡಿನ್ ಡಿ ಕ್ಲರ್ಕ್ - ₹30 ಲಕ್ಷ - ಮುಂಬೈ ಇಂಡಿಯನ್ಸ್
ಡೇನಿಯಲ್ ಗಿಬ್ಸನ್ - ₹30 ಲಕ್ಷ - ಗುಜರಾತ್ ಜೈಂಟ್ಸ್
ಅಲಾನಾ ಕಿಂಗ್ - ₹30 ಲಕ್ಷ - ಯುಪಿ ವಾರಿಯರ್ಸ್
ಅಕ್ಷಿತಾ ಮಹೇಶ್ವರಿ - ₹20 ಲಕ್ಷ ರೂ. - ಮುಂಬೈ ಇಂಡಿಯನ್ಸ್
ಅರುಷಿ ಗೋಸ್ - ₹10 ಲಕ್ಷ - ಯುಪಿ ವಾರಿಯರ್ಸ್
ಕ್ರಾಂತಿ ಗೌಡ್ - ₹10 ಲಕ್ಷ - ಯುಪಿ ವಾರಿಯರ್ಸ್
ಸಂಸ್ಕೃತಿ ಗುಪ್ತಾ - ₹10 ಲಕ್ಷ - ಮುಂಬೈ ಇಂಡಿಯನ್ಸ್
ಸಾರಾ ಬ್ರೈಸ್ - ₹10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ನಂದಿನಿ ಕಶ್ಯಪ್ - ₹10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ನಿಕಿ ಪ್ರಸಾದ್ - ₹10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ಪ್ರಕಾಶಿಕಾ ನಾಯಕ್ - ₹10 ಲಕ್ಷ - ಗುಜರಾತ್ ಜೈಂಟ್ಸ್
ಜೋಶಿತಾ ವಿಜೆ - ₹10 ಲಕ್ಷ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಘ್ವಿ ಬಿಸ್ಟ್ - ₹10 ಲಕ್ಷ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಜಾಗ್ರವಿ ಪವಾರ್ - ₹10 ಲಕ್ಷ - ರಾಯಲ್ ಚಾಲೆಂಜರ್ಸ್ ಬೆಂಗಳೂರು












Click it and Unblock the Notifications