Ind vs Aus: ವಿಶ್ವದಾಖಲೆ ಬರೆಯಲು ಸಜ್ಜಾದ ನರೇಂದ್ರ ಮೋದಿ ಕ್ರೀಡಾಂಗಣ
ಏಕದಿನ ವಿಶ್ವಕಪ್ 2023 ಪಂದ್ಯಾವಳಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಶತಕಗಳ ವಿಚಾರದಲ್ಲಿ ಈ ಬಾರಿ ವಿಶ್ವಕಪ್ ಹೊಸ ದಾಖಲೆ ಬರೆದಿದೆ. ವಿಶ್ವಕಪ್ ಆವೃತ್ತಿಯಲ್ಲಿ ಮೊದಲ ಬಾರಿಗೆ 700ಕ್ಕೂ ಅಧಿಕ ರನ್ ಗಳಿಸಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ. ವರದಿಗಳ ಪ್ರಕಾರ, ಸುಮಾರು 1,320,000 ಜನರು ಪಂದ್ಯವನ್ನು ನೋಡಲು ಬರಲಿದ್ದಾರೆ, ಬಹಳಷ್ಟು ಗಣ್ಯರು ಪಂದ್ಯಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ, ಬಿಸಿಸಿಐ ಸಹ ಭವ್ಯವಾದ ಐಎಎಫ್ ಸೂರ್ಯಕಿರಣ ಶೋ, ಕಲಾವಿದರ ಪ್ರದರ್ಶನ ಮತ್ತು ಲೇಸರ್ ಮತ್ತು ಲೈಟ್ ಶೋ ಅನ್ನು ಯೋಜಿಸಿದೆ.

ಐಪಿಎಲ್ 2023 ರ ಫೈನಲ್ ಪಂದ್ಯವನ್ನು, ಸುಮಾರು 1,10,000 ಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದರು. ಇದು ಗಿನ್ನೆಸ್ ದಾಖಲೆಯ ಪುಟ ಸೇರಿತ್ತು. ಮಳೆಯಿಂದಾಗಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು ಆದರೂ ಅಭಿಮಾನಿಗಳು ಉತ್ಸಾಹದಲ್ಲೇ ಪಂದ್ಯವನ್ನು ವೀಕ್ಷಣೆ ಮಾಡಿದ್ದರು.
ಹೊಸ ದಾಖಲೆ ನಿರ್ಮಾಣ?
ಈ ಬಾರಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರ ವಿಚಾರದಲ್ಲಿ ಕೂಡ ದಾಖಲೆ ಮಾಡಲು ಸಜ್ಜಾಗಿದೆ. 1.30 ಲಕ್ಷ ಈ ಫೈನಲ್ ಪಂದ್ಯವನ್ನು ಮೈದಾನದಲ್ಲಿ ವೀಕ್ಷಣೆ ಮಾಡಿದರೆ, ಮತ್ತೊಂದು ಗಿನ್ನೆಸ್ ದಾಖಲೆ ನಿರ್ಮಾಣವಾಗಲಿದೆ.
ನವೆಂಬರ್ 16ರಂದು ಮುಂಬೈನಲ್ಲಿ ನಡೆದ ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯ ಡಿಸ್ನಿ+ ಹಾಟ್‌ಸ್ಟಾರ್ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಬರೆದಿತ್ತು. ಈ ಪಂದ್ಯವನ್ನು 53 ಮಿಲಿಯನ್ ಏಕಕಾಲೀನ ವೀಕ್ಷಕರನ್ನು ಸೆಳೆಯುವ ಮೂಲಕ ದಾಖಲೆ ಬರೆದಿತ್ತು.
ನ್ಯೂಜಿಲೆಂಡ್ ವಿರುದ್ಧದ ಭಾರತದ ಸೆಮಿಫೈನಲ್ ಪಂದ್ಯವನ್ನು 5.3 ಕೋಟಿ ವೀಕ್ಷಕರನ್ನು ಹೊಂದಿತ್ತು. ಇದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಒಟ್ಟು ಜನಸಂಖ್ಯೆಯನ್ನು 1.5 ಪಟ್ಟು ಹೆಚ್ಚು!. ಈಗ ಫೈನಲ್ ಪಂದ್ಯದಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ವೀಕ್ಷಕರ ಸಂಖ್ಯೆ ಹೊಸ ದಾಖಲೆ ಬರೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಭಾರತ ಒಂದು ದಶಕದ ಬಳಿಕ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಜ್ಜಾಗಿದೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು, ಶ್ರೀಲಂಕಾವನ್ನು ಮಣಿಸಿದ್ದ ಭಾರತ ಕಪ್ ಎತ್ತಿಹಿಡಿದಿತ್ತು. 12 ವರ್ಷಗಳ ಬಳಿಕ ಭಾರತ ಮತ್ತೆ ಫೈನಲ್ ಪ್ರವೇಶಿಸಿದ್ದು, ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ, ಆಸ್ಟ್ರೇಲಿಯಾ ಈವರೆಗೆ 5 ಬಾರಿ ವಿಶ್ವಕಪ್ ಗೆದ್ದಿದ್ದು 6ನೇ ಬಾರಿ ಚಾಂಪಿಯನ್ ಆಗಲು ರಣತಂತ್ರ ರೂಪಿಸಿದೆ.












Click it and Unblock the Notifications