Get Updates
Get notified of breaking news, exclusive insights, and must-see stories!

World Cup 2023: ಭಾರತ ವಿಶ್ವಕಪ್‌ ಗೆದ್ರೆ ನೂರು ಕೋಟಿ ಕೊಡ್ತಾರಂತೆ ಈ ಶ್ರೀಮಂತ ಉದ್ಯಮಿ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಮುಕ್ತಾಯದ ಹಂತದಲ್ಲಿದೆ. ಈ ರೋಚಕ ಟೂರ್ನಿಯ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್ ಅನ್ನು ಪ್ಯಾಶನ್ ಆಗಿ ತೆಗೆದುಕೊಂಡು ಬದುಕುವವರಿಗೆ ಈ ದಿನ ತುಂಬಾ ವಿಶೇಷವಾಗಿದೆ.

ಫೈನಲ್ ಪಂದ್ಯದ ನಿಮಿತ್ತ ದೇಶದ ಆನ್‌ಲೈನ್ ಜೋತಿಷ್ಯ ಮುಂಚೂಣಿ ಸಂಸ್ಥೆಯಾದ ಅಸ್ಟ್ರೋಟಾಕ್ ಸಿಇಒ ಪುನೀತ್ ಗುಪ್ತಾ ಅವರು ತಮ್ಮ ಅಪ್ಲಿಕೇಷನ್ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಆಸ್ಟ್ರೋಟಾಕ್ ತನ್ನ ಗ್ರಾಹಕರ ವ್ಯಾಲೆಟ್‌ಗೆ 100 ಕೋಟಿ ರೂಪಾಯಿಗಳನ್ನು ವಿತರಿಸುತ್ತದೆ ಎಂದು ಸಿಇಒ ಪುನೀತ್ ಗುಪ್ತಾ ಬರೆದುಕೊಂಡಿದ್ದಾರೆ.

100-crores-if-india-wins-the-world-cup

ಪುನೀತ್ ಗುಪ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಬರೆದು ಅದರಲ್ಲಿ ಟೀಮ್ ಇಂಡಿಯಾ 2011 ರಲ್ಲಿ ವಿಶ್ವ ಚಾಂಪಿಯನ್ ಆದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಆಸ್ಟ್ರೋಟಾಕ್ ಬಳಕೆದಾರರಿಗೆ ದೊಡ್ಡ ಆಫರ್‌ ಅನ್ನು ನೀಡಿದ್ದಾರೆ. ಈ ಬಾರಿಯ ವಿಶ್ವಕಪ್ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ, ಆಸ್ಟ್ರೋಟಾಕ್ ಕಂಪನಿಯು ತನ್ನ ಬಳಕೆದಾರರಿಗೆ 100 ಕೋಟಿ ರೂಪಾಯಿಗಳನ್ನು ವಿತರಿಸಲಿದೆ ಎಂದು ಪುನೀತ್ ಗುಪ್ತಾ ಹೇಳಿದ್ದಾರೆ.

2011ರ ಸವಿ ನೆನಪುಗಳು

ಭಾರತ 2011ರ ಗೆಲುವಿನ ನೆನಪುಗಳನ್ನು ಮೆಲುಕು ಹಾಕಿದ ಸಿಇಒ ಪುನೀತ್, 'ಕಳೆದ ಬಾರಿ 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಕಾಲೇಜಿನಲ್ಲಿ ಓದುತ್ತಿದ್ದ. ಆ ದಿನ ಅವರ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದು. ಕಾಲೇಜಿನ ಬಳಿಯ ಆಡಿಟೋರಿಯಂನಲ್ಲಿ ತನ್ನ ಕೆಲವು ಸ್ನೇಹಿತರೊಂದಿಗೆ ಆ ಪಂದ್ಯವನ್ನು ವೀಕ್ಷಿಸಿದ್ದೆ. ಇಡೀ ದಿನ ಅವರೆಲ್ಲರೂ ತೀವ್ರ ಒತ್ತಡದಲ್ಲಿದ್ದರು. ಆ ದಿನದ ಹಿಂದಿನ ಇಡೀ ರಾತ್ರಿ ಅವರು ಪಂದ್ಯ ಮತ್ತು ತಂತ್ರದ ಬಗ್ಗೆ ಚರ್ಚಿಸುತ್ತಿದ್ದರು ಮತ್ತು ಆದ್ದರಿಂದ ಸರಿಯಾಗಿ ನಿದ್ರೆ ಬರಲಿಲ್ಲ' ಎಂದು ಬರೆದಿದ್ದಾರೆ.

ಜೊತೆಗೆ ಅವರು ತಮ್ಮ ಪೋಸ್ಟ್‌ನಲ್ಲಿ, 'ಭಾರತ ಪಂದ್ಯವನ್ನು ಗೆದ್ದ ತಕ್ಷಣ ನಾವು ಸಂಭ್ರಮಿಸಿದೆವು. ನಾನು ನನ್ನ ಎಲ್ಲ ಸ್ನೇಹಿತರನ್ನು ತಬ್ಬಿಕೊಂಡೆ. ಇದೇ ಖುಷಿಯಲ್ಲಿ ಬೈಕ್ ನಲ್ಲಿ ಚಂಡೀಗಢ ಪ್ರವಾಸಕ್ಕೆ ಹೊರಟೆವು. ನಾವು ಪ್ರತಿ ಸಂದಿಯಲ್ಲಿ ಅಪರಿಚಿತರೊಂದಿಗೆ ಭಾಂಗ್ರಾ ಪ್ರದರ್ಶಿಸಿದೆವು. ಆ ಸಮಯದಲ್ಲಿ ನಮಗೆ ಏನು ಸಿಕ್ಕಿತು ಅನ್ನೋ ಖುಷಿಯಾಗಿತ್ತು' ಎಂದು ಅವರು ಬರೆದಿದ್ದಾರೆ.

100 ಕೋಟಿ ಹಂಚುವ ಯೋಚನೆ ಬಂದಿದ್ದು ಹೇಗೆ?

ಭಾರತ ಗೆದ್ದರೆ, ಗೆಲುವಿನ ನಂತರ ನಾನೇನು ಮಾಡುತ್ತೇನೆ ಎಂದು ಕಳೆದ ಇಡೀ ರಾತ್ರಿ ಯೋಚಿಸುತ್ತಿದ್ದೆ ಎಂದು ಪುನೀತ್ ಹೇಳಿದ್ದಾರೆ. ಕಳೆದ ಬಾರಿ ನಾನು ನನ್ನ ಸಂತೋಷವನ್ನು ಹಂಚಿಕೊಳ್ಳಲು ಕೆಲವು ಸ್ನೇಹಿತರನ್ನು ಹೊಂದಿದ್ದೆ. ಆದರೆ ಈ ಬಾರಿ ಅನೇಕ ಆಸ್ಟ್ರೋಟಾಕ್ ಬಳಕೆದಾರರು ನಮಗೆ ಸ್ನೇಹಿತರಂತೆ ಇದ್ದಾರೆ.

ನನ್ನ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳಲು ನಾನು ಏನಾದರೂ ಮಾಡಬೇಕು. ಈ ಸಂದರ್ಭದಲ್ಲಿ ಈ ಕಲ್ಪನೆ ನನಗೆ ಬಂದಿದೆ. ಹಾಗಾಗಿ ಬಳಕೆದಾರರಿಗೆ 100 ಕೋಟಿ ವಿತರಿಸಲು ನಿರ್ಧರಿಸಿದೆ. ಇದಕ್ಕಾಗಿ ನನ್ನ ಹಣಕಾಸು ತಂಡದ ಜತೆ ಮಾತನಾಡಿದ್ದೇನೆ. ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ 100 ಕೋಟಿ ಹಣವನ್ನು ನೀಡಲು ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ನಾವು ಟೀಮ್ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸೋಣ ಮತ್ತು ಅವರ ಉತ್ಸಾಹವನ್ನು ಹುರಿದುಂಬಿಸೋಣ ಎಂದು ಅವರು ಬರೆದಿದ್ದಾರೆ.

ಕ್ರಿಕೆಟ್ ತಂಡಗಳು ಮತ್ತು ಆಟಗಾರರಿಗೆ ಹಣವೆಷ್ಟು?

ವಿಜೇತ ತಂಡವು 4 ಮಿಲಿಯನ್ ಡಾಲರ್ಗಳನ್ನು ಪಡೆಯುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ನೋಡಿದರೆ ಸುಮಾರು 33 ಕೋಟಿ ರೂ. ಗೆದ್ದ ತಂಡಕ್ಕೆ ಹಾಗೂ ಫೈನಲ್‌ನಲ್ಲಿ ಸೋತ ತಂಡಕ್ಕೆ 2 ಮಿಲಿಯನ್ ಡಾಲರ್ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೆ ತಲಾ 8 ಲಕ್ಷ ಡಾಲರ್‌ ಸಿಗಲಿದೆ. ಗುಂಪು ಹಂತದ ನಂತರ ಹೊರಗುಳಿಯುವ ತಂಡಗಳು ತಲಾ ಒಂದು ಲಕ್ಷ ಡಾಲರ್‌ಗಳನ್ನು ಪಡೆಯುತ್ತವೆ. ಗುಂಪು ಹಂತದಲ್ಲಿ ಪಂದ್ಯಗಳನ್ನು ಗೆಲ್ಲುವ ತಂಡಗಳು 40 ಸಾವಿರ ಡಾಲರ್‌ಗಳನ್ನು ಪಡೆಯುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+