T20 World Cup: ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಯಾರು?
ಭಾರತದ ಆಟಗಾರರು ಸದ್ಯ ಐಪಿಎಲ್‌ನಲ್ಲಿ ಫುಲ್ ಬ್ಯೂಸ್ ಆಗಿದ್ದಾರೆ. ಸ್ಟಾರ್ ಆಟಗಾರರು ತಮ್ಮ ಭರ್ಜರಿ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಐಪಿಎಲ್ ಪ್ರಧಾನ ಘಟ್ಟದತ್ತ ಮುಖ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಮೆಗಾ ಟೂರ್ನಿಗೆ ತೆರೆ ಬೀಳಲಿದೆ. ಆ ಬಳಿಕ ಎಲ್ಲರ ಚಿತ್ತವೂ ಟಿ20 ವಿಶ್ವಕಪ್‌ನತ್ತ ಶಿಫ್ಟ್ ಆಗಲಿದೆ.
ಐಸಿಸಿಯ ಈ ಮೆಗಾ ಈವೆಂಟ್ ಜೂನ್ 2 ರಿಂದ ಪ್ರಾರಂಭವಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಅಭಿಯಾನವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆರಂಭಿಸಲಿದೆ. ಇದಾದ ಜೂನ್ 9 ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ನಿಜಕ್ಕೂ ವಿಶ್ವದ ಚಿತ್ತವನ್ನು ಕದ್ದಿದೆ. ಈ ಟೂರ್ನಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು, ಇಬ್ಬರು ವಿಕೆಟ್ ಕೀಪರ್‌ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಡುವ 11ರ ಬಳಗದಲ್ಲಿ ಈ ಇಬ್ಬರು ವಿಕೆಟ್‌ಕೀಪರ್‌ಗಳಲ್ಲಿ ಯಾರಿಗೆ ಅವಕಾಶ ಸಿಗಬಹುದು ಎಂಬ ಪ್ರಶ್ನೆ ಎದುರಾಗಿದೆ.

ಹೇಗಿದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರದರ್ಶನ
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಬ್ಬರೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಸ್ಥಿರವಾಗಿದೆ. ರಿಷಬ್ ಪಂತ್ 66 ಪಂದ್ಯಗಳಲ್ಲಿ 126.37 ಸ್ಟ್ರೈಕ್ ರೇಟ್‌ನೊಂದಿಗೆ 987 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಪಂತ್ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸಂಜು ಸ್ಯಾಮ್ಸನ್ 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 22 ಇನ್ನಿಂಗ್ಸ್‌ಗಳಲ್ಲಿ 374 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಈ ಕಡಿಮೆ ಸ್ವರೂಪದಲ್ಲಿ ಸಂಜು ಅವರ ಹೆಸರಿನಲ್ಲಿ 1 ಅರ್ಧಶತಕವಿದೆ.
ಐಪಿಎಲ್‌ನಲ್ಲಿ ನಾಯಕರ ಪ್ರದರ್ಶನ
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂಥ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ. ಸಂಜು ಸ್ಯಾಮ್ಸನ್ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 163.54 ಸ್ಟ್ರೈಕ್ ರೇಟ್‌ನಲ್ಲಿ 471 ರನ್ ಗಳಿಸಿದ್ದು, ಇದರಲ್ಲಿ 5 ಅರ್ಧಶತಕ ಸೇರಿವೆ. ಮಧ್ಯಮ ಕ್ರಮಾಂಕದಲ್ಲಿ ಇವರು ತಂಡಕ್ಕೆ ನೆರವಾಗಬಲ್ಲ ಆಟಗಾರ. ಇವರು ಸ್ಪಿನ್ ಬೌಲರ್‌ಗಳ ವಿರುದ್ಧವೂ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಪಂತ್ 413 ರನ್ ಗಳಿಸಿದ್ದಾರೆ
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಐಪಿಎಲ್ 2024 ರಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು 41.30 ರ ಸರಾಸರಿಯಲ್ಲಿ ಮತ್ತು 156.43 ಸ್ಟ್ರೈಕ್ ರೇಟ್‌ನಲ್ಲಿ 413 ರನ್ ಗಳಿಸಿದ್ದಾರೆ. ಪಂತ್ 17ನೇ ಋತುವಿನಲ್ಲಿ 3 ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರು ಸಹ ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರ. ಅಲ್ಲದೆ ಇವರು ತಂಡಕ್ಕೆ ಸೇರಿಕೊಂಡಿದ್ದರಿಂದ ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್ ಸೆಟ್ ಆಗುತ್ತದೆ.
ಯಾರು ಹಿತವರು ಈ ಇಬ್ಬರಲ್ಲಿ?
ಇಬ್ಬರ ಆಟದ ಮೇಲೆ ಯಾರಿಗೂ ಯಾವುದೇ ಸಂದೇಹವಿಲ್ಲ. ಆದರೆ ಸ್ಕಿಲ್ ವಿಚಾರಕ್ಕೆ ಬಂದರೆ ರಿಷಬ್ ಕೊಂಚ ಸ್ಟ್ರಾಂಗ್ ಕಾಣ್ತಾರೆ. ಅಲ್ಲದೆ ತಂಡಕ್ಕೆ ಅಗತ್ಯ ವಿರುವ ಲೆಫ್ಟ್ ಹಾಗೂ ರೈಟ್ ಕಾಂಬಿನೇಷನ್ ಸಹ ಸರಿದೂಗಿಸಲು ನೆರವಾಗುತ್ತಾರೆ. ಇನ್ನು ಸಂಜು ಸ್ಯಾಮ್ಸನ್ ಸಹ ವಿಕೆಟ್ ಹಿಂದೆ ಚುರುಕುತನದಿಂದ ಕೂಡಿದ್ದ, ಅಂತಾರಾಷ್ಟ್ರೀಯ ಪಂದ್ಯಗಳನ್ನು ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾಗುತ್ತಿದ್ದಾರೆ.












Click it and Unblock the Notifications