RCB: ಆರ್‌ಸಿಬಿ ಅದೃಷ್ಟ ಬದಲಿಸಿದ ಇಬ್ಬರು ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದ್ದ ಆರ್ ಸಿಬಿ ಬಳಿಕ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.

ಕೆಕೆಆರ್ ವಿರುದ್ಧದ ಒಂದು ರನ್‌ನಿಂದ ಸೋತ ಬಳಿಕ ಆರ್ ಸಿಬಿ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ವಿಫಲವಾಗಿದ್ದ ಆರ್‌ಸಿಬಿ ಸದ್ಯ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

Will Jacks and Swapnil Singh Turn RCB s Fortune in IPL 2024

ಆರಂಭದಲ್ಲಿ ಸರಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲಿ ಎಡವಿದ್ದ ಆರ್‌ಸಿಬಿ ಬಳಿಕ ಸರಿಯಾದ ತಂಡವನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದೆ. ವಿಲ್ ಜ್ಯಾಕ್ಸ್ ಮತ್ತು ಸ್ವಪ್ನಿಲ್ ಸಿಂಗ್ ತಂಡದ ಅದೃಷ್ಟವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟಿಂಗ್, ಬೌಲಿಂಗ್ ವಿಭಾಗಕ್ಕೆ ಬಲ

ವಿಲ್ ಜ್ಯಾಕ್ಸ್ ಎಂತಹ ಸ್ಫೋಟಕ ಬ್ಯಾಟರ್ ಎನ್ನುವುದು ಮೊದಲೇ ಗೊತ್ತಿತ್ತು, ಮ್ಯಾಕ್ಸ್‌ವೆಲ್ ಸತತವಾಗಿ ವೈಫಲ್ಯ ಕಂಡರೂ ವಿಲ್ ಜ್ಯಾಕ್ಸ್‌ಗೆ ಅವಕಾಶ ಕೊಡುವಲ್ಲಿ ಆರ್ ಸಿಬಿ ತಡ ಮಾಡಿತು. ಯಾವ ವಿದೇಶಿ ಬೌಲರ್ ಕೂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ಕೊಡಲೇ ಇಲ್ಲ, ಅಂತಿಮವಾಗಿ ಮ್ಯಾಕ್ಸ್‌ವೆಲ್ ತಾವೇ ವಿಶ್ರಾಂತಿ ಪಡೆದುಕೊಂಡ ಬಳಿಕ ವಿಲ್ ಜ್ಯಾಕ್ಸ್‌ಗೆ ಅವಕಾಶ ಸಿಕ್ಕಿತು.

ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಶತಕ ಗಳಿಸಿದ ಅವರು ಭರ್ಜರಿ ಗೆಲುವಿಗೆ ಕಾರಣವಾದರು. ಅದಕ್ಕೂ ಮುನ್ನ ಕೆಕೆಆರ್ ವಿರುದ್ಧ ಕೂಡ ಅರ್ಧಶತಕ ಗಳಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲನೇ ಓವರ್ ನಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಪಡೆದಿದ್ದರು.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ವಿಲ್ ಜ್ಯಾಕ್ಸ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಅವರನ್ನು ಮುಂದಿನ ಪಂದ್ಯಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.

ಇನ್ನು ಸ್ವಪ್ನಿಲ್ ಸಿಂಗ್ ತಂಡದಲ್ಲಿ ಅವಕಾಶ ಪಡೆದ ಬಳಿಕ ಆರ್ ಸಿಬಿ ಮೂರು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಸ್ವಪ್ನಿಲ್ ಸಿಂಗ್ ಪಾತ್ರ ಕೂಡ ಮುಖ್ಯವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಒಂದೇ ಓವರ್ ನಲ್ಲಿ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ವಿಕೆಟ್ ಪಡೆದಿದ್ದರು. ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ಮೊದಲ ಓವರ್ ನಲ್ಲೇ ವಿಕೆಟ್ ಪಡೆದಿದ್ದರು.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಓವರ್ ನಲ್ಲೇ ಒಂದು ರನ್ ಮಾತ್ರ ಬಿಟ್ಟುಕೊಟ್ಟರು. ಬಳಿಕ ಬೌಲಿಂಗ್ ನಲ್ಲಿ ಅವಕಾಶ ಸಿಗದೇ ಇದ್ದರೂ, ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಅವರು, 9 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವು ತಂದಿಕೊಟ್ಟರು.

ಆಡಿರುವ 11 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಉಳಿದ ಮೂರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಅದೃಷ್ಟ ಪರೀಕ್ಷಿಸಿಕೊಳ್ಳುವ ವಿಶ್ವಾಸದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+